ಬೆಂಗಳೂರಲ್ಲಿ ಮಾತ್ರ ಒಂದೇ ದಿನ 2 ಸಾವಿರಕ್ಕೂ ಹೆಚ್ಚು ಸೋಂಕು ಪತ್ತೆ, 70 ಸಾವು
ರಾಜಧಾನಿ ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ ಎರಡು ಸಾವಿರಕ್ಕೂ ಅಧಿಕ ಹೊಸ ಸೋಂಕಿತರು ಪತ್ತೆಯಾಗಿದ್ದು, ಬರೋಬ್ಬರಿ 70 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಬೆಂಗಳೂರು(ಜು.17): ರಾಜಧಾನಿ ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ ಎರಡು ಸಾವಿರಕ್ಕೂ ಅಧಿಕ ಹೊಸ ಸೋಂಕಿತರು ಪತ್ತೆಯಾಗಿದ್ದು, ಬರೋಬ್ಬರಿ 70 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
"
ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ ಎರಡು ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದಾರೆ. ಇದು ಬೆಂಗಳೂರಿನ ಪಾಲಿಗೆ ಹೊಸ ದಾಖಲೆಯಾಗಿದೆ.
ಇನ್ನು 6-7 ತಿಂಗಳಲ್ಲಿ ಕೊರೋನಾ ತಾರಕಕ್ಕೆ, ಎಚ್ಚರಿಕೆ ಅನಿವಾರ್ಯ: ಆರ್.ಅಶೋಕ್
ಕಳೆದ ಬುಧವಾರವಷ್ಟೇ 1975 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಅದು ಈವರೆಗೆನ ದಾಖಲೆಯಾಗಿತ್ತು. ಗುರುವಾರ ಬರೋಬ್ಬರಿ 2344 ಹೊಸ ಪ್ರಕರಣ ಕಾಣಿಸಿಕೊಳ್ಳುವ ಮೂಲಕ ನೂತನ ದಾಖಲೆ ಸೃಷ್ಟಿಯಾಗಿದೆ.
ಸೋಂಕಿತರ ಸಂಖ್ಯೆ ಮಾತ್ರವಲ್ಲ ಸಾವಿನ ಸಂಖ್ಯೆಯಲ್ಲಿಯೂ ಗುರುವಾರ ಹೊಸ ದಾಖಲೆ ದಾಖಲಾಗಿದೆ. ಕಳೆದ ಬುಧವಾರ 60 ಮಂದಿ ಸೋಂಕಿತರು ಮೃತಪಟ್ಟಿದ್ದರು. ಅದು ಈವರೆಗಿನ ದಾಖಲೆಯಾಗಿತ್ತು. ಗುರುವಾರ ಆ ದಾಖಲೆಯ ಮೀರಿದ 70 ಮಂದಿ ಬಲಿಯಾಗಿದ್ದಾರೆ.
25 ಸಾವಿರ ಗಡಿ ದಾಟಿದ ಸೋಂಕು
ಗುರುವಾರ ಪತ್ತೆಯಾದ 2,344 ಪೈಕಿ 1432 ಮಂದಿ ಪುರುಷರು, 912 ಮಂದಿ ಮಹಿಳೆಯರಾಗಿದ್ದಾರೆ. ಈ ಮೂಲಕ ನಗರ ಸೋಂಕಿತರ ಸಂಖ್ಯೆ 25,288ಕ್ಕೆ ಏರಿಕೆಯಾಗಿದೆ.
2,344 ಪ್ರಕರಣಗಳಲ್ಲಿ 950 ಮಂದಿಗೆ ಶೀತ ಜ್ವರ ಮಾದರಿ, ಕೆಲವರಿಗೆ ತೀವ್ರ ಉಸಿರಾಟದ ತೊಂದರೆಯಿದ್ದರೆ ಬಹುತೇಕ ಪ್ರಕರಣಗಳಲ್ಲಿ ಸೋಂಕಿನ ಮೂಲ ಪತ್ತೆಯಾಗಿಲ್ಲ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
500 ದಾಟಿದ ಸಾವು
ಬೆಂಗಳೂರಿನಲ್ಲಿ ಗುರುವಾರ 70 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ 52 ಮಂದಿ ಪುರುಷರು, 18 ಮಂದಿ ಮಹಿಳೆಯರಾಗಿದ್ದಾರೆ. ಇದರಲ್ಲಿ 50 ವರ್ಷ ದಾಟಿದ 52 ಜನರು, 30 ವರ್ಷದೊಳಗಿನ ನಾಲ್ವರು ಹಾಗೂ 31 ರಿಂದ 50 ವರ್ಷದೊಳಗಿನ 14 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಈವರೆಗೆ 507 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
2ನೇ ದಿನ ಕಟ್ಟುನಿಟ್ಟಿನ ಲಾಕ್‌ಡೌನ್: 9 ಜಿಲ್ಲೆಗಳಲ್ಲಿ ಬಂದೋಬಸ್ತ್ ಬಿಗಿ ಮಾಡಿದ ಪೊಲೀಸರು
ಇನ್ನು ಗುರುವಾರ 497 ಜನರು ಸೋಂಕಿನಿಂದ ಗುಣಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ 5,952 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನು 18,828 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.