ಬೆಂಗಳೂರು(ಜು.17): ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕರೋನಾ ಇನ್ನು ಆರು-ಏಳು ತಿಂಗಳ ನಂತರ ತನ್ನ ಗರಿಷ್ಠ ಮಟ್ಟಮಟ್ಟಲಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ. ತಜ್ಞರ ವರದಿ ಆಧರಿಸಿ ಅವರು ಈ ಹೇಳಿಕೆ ನೀಡಿದ್ದಾರೆ.

"

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಜ್ಞರ ಪ್ರಕಾರ ಸೋಂಕು ತನ್ನ ತಾರಕ ಮಟ್ಟತಲುಪಲು 6-7 ತಿಂಗಳು ಆಗಲಿದೆ. ಹೀಗಾಗಿ, ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆಯಿದೆ. ಕೊರೋನಾ ಸೋಂಕು ಬೆಂಗಳೂರು ಮಾತ್ರವಲ್ಲ. ಇಡೀ ಪ್ರಪಂಚದಲ್ಲಿ ಇದೆ. ಸೋಂಕು ಮುಕ್ತವಾಗಿ ವ್ಯವಸ್ಥೆ ಸಹಜ ಸ್ಥಿತಿಗೆ ಮರಳುವುದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗಲಿದೆ’ ಎಂದು ತಿಳಿಸಿದರು.

ಕರ್ತವ್ಯ ಬಹಿಷ್ಕರಿಸಿದ ಆಯುಷ್‌ ವೈದ್ಯರು: 2000 ಸರ್ಕಾರಿ ವೈದ್ಯರಿಂದ ರಾಜೀನಾಮೆ

ರಾಜ್ಯದಲ್ಲಿ ಕೊರೋನಾ ಸೆಪ್ಟೆಂಬರ್‌ ಅಂತ್ಯ ಅಥವಾ ಅಕ್ಟೋಬರ್‌ನಲ್ಲಿ ತನ್ನ ಉಚ್ಛ್ರಾಯ ಸ್ಥಿತಿ ಮುಟ್ಟಲಿದೆ. ಆದರೂ, ಈ ವೈರಾಣು 2021ರ ಮಾಚ್‌ರ್‍ವರೆಗೂ ರಾಜ್ಯವನ್ನು ಕಾಡಲಿದೆ. ಈ ಅವಧಿಯಲ್ಲಿ ರಾಜ್ಯದ ಸುಮಾರು 32 ಲಕ್ಷ ಜನ ಸೋಂಕಿಗೆ ಗುರಿಯಾಗಲಿದ್ದಾರೆ’ ಎಂದು ತಜ್ಞರು ಅಂದಾಜಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.