Asianet Suvarna News Asianet Suvarna News

Post-Pregnancy: ಅಯ್ಯಾ ಪುರುಷಸಿಂಹ, ಬಾಣಂತಿ ಹೆಂಡತಿಯನ್ನು ಸೆಕ್ಸ್‌ಗಾಗಿ ಒತ್ತಾಯಿಸಬೇಡ!

ಮಗು ಹೆತ್ತ ನಂತರ ಸ್ತ್ರೀಯರ ದೇಹದಲ್ಲಿ ಅಗಾಧ ಬದಲಾವಣೆಗಳಾಗಿರುತ್ತವೆ. ಹಾರ್ಮೋನ್ ಏರುಪೇರು ವಿಪರೀತ. ಇಂಥ ಸಂದರ್ಭದಲ್ಲಿ ಸೆಕ್ಸ್‌ಗಾಗಿ ಬಳಿಗೆ ಬಂದ ಗಂಡನನ್ನು ಆಕೆ ದೂರ ತಳ್ಳಬಹುದು. ಗಂಡ ಆಗ ಕೋಪಿಸಿಕೊಳ್ಳಬಾರದು. ಮತ್ತೇನು ಮಾಡಬಹುದು?

Feelfree Dont force your wife to get involve in sex after post pregnancy bni
Author
First Published Sep 3, 2024, 10:14 PM IST | Last Updated Sep 4, 2024, 8:58 AM IST

ಪ್ರಶ್ನೆ: ನಾನು ವಿವಾಹಿತ. ಮೂವತ್ತು ವರ್ಷ. ಪತ್ನಿಗೆ ಇಪ್ಪತ್ತೆಂಟು ವರ್ಷ. ನಮ್ಮ ಮದುವೆಯಾಗಿ ಮೂರು ವರ್ಷವಾಗಿದೆ. ಆರು ತಿಂಗಳ ಹಿಂದೆ ನನ್ನ ಹೆಂಡತಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ (Childbirth) ನೀಡಿದಳು. ಮೂರು ತಿಂಗಳು ಬಾಣಂತಿ (post pregnancy) ಅಂತ ದೂರವಿದ್ದಳು. ಆಕೆ ತವರಿನಿಂದ ನಮ್ಮ ಮನೆಗೆ ಬಂದ ಮೇಲೂ ನನ್ನ ಹತ್ತಿರ ಮಲಗುತ್ತಲೇ ಇಲ್ಲ. ನಾನಾಗಿಯೇ ಹತ್ತಿರ ಮಲಗಲು ಹೋದರೆ, ಮಗು ಎಚ್ಚರಾಗುತ್ತದೆ ಎಂಬ ಕಾರಣ ನೀಡಿ ದೂರ ಮಲಗುತ್ತಾಳೆ. ಮನೆಗೆ ಬಂದ ಮೇಲೆ ಒಂದು ಸಲವೂ ನಾವು ಸೆಕ್ಸ್ ಮಾಡಿಯೇ ಇಲ್ಲ. ಮಗು ಹುಟ್ಟುವ ಮೊದಲು ತುಂಬಾ ಆಸಕ್ತಿಯಿಂದ ಅದರಲ್ಲಿ ಪಾಲ್ಗೊಳ್ಳುತ್ತಾ ಇದ್ದೆವು. ಈಗ ಆಕೆಗೆ ಅದರ ಬಗ್ಗೆ ಆಸಕ್ತಿಯೇ (sex drive) ಹೊರಟುಹೋದಂತಿದೆ. ಮಗು ಹುಟ್ಟಿದ ಮೇಲೆ ಸ್ತ್ರೀಯರಿಗೆ ಸೆಕ್ಸ್‌ನಲ್ಲಿ ಆಸಕ್ತಿಯೇ ಇರೋಲ್ವಾ? ನಾನು ಆಕೆಯನ್ನು ಸೆಕ್ಸ್‌ಗಾಗಿ ಒತ್ತಾಯಿಸಬಹುದೇ?

ಉತ್ತರ: ನಿಮ್ಮ ಕುತೂಹಲ ಮತ್ತು ಆತುರ ಎರಡೂ ಸಹಜ. ಆರು ತಿಂಗಳಿನಿಂದ ಪತ್ನಿಯಿಂದ ದೂರವಿರುವ ನಿಮಗೆ ಆಕೆಯನ್ನು ಸೇರಲು ಆತುರ ಇರುವುದು ಸಹಜ. ಆದರೆ ಒಂದು ಮಗುವನ್ನು ಹೆತ್ತು, ಆ ಅನುಭವದಿಂದ ಜರ್ಝರಿತವಾಗಿರುವ ಆಕೆಗೆ ಸಹಜ ಬದುಕಿಗೆ ಮರಳಲು ಕೊಚ ಸಮಯ ಬೇಕು. ಮಗು ಹೆತ್ತ ಹೆಚ್ಚಿನವರು ಮೂರರಿಂದ ನಾಲ್ಕು ತಿಂಗಳಲ್ಲಿ ತಮ್ಮ ಸೆಕ್ಸ್ ಆಸಕ್ತಿಯನ್ನು ಮರಳಿ ಗಳಿಸಿಕೊಳ್ಳುತ್ತಾರೆ. ಆದರೆ ಇನ್ನು ಕೆಲವರಿಗೆ ಆರು ತಿಂಗಳಿನಿಂದ ಒಂದು ವರ್ಷದವರೆಗೂ ಬೇಕಾಗಬಹುದು. ಹೆರಿಗೆಯ ನೋವು, ಹೆರಿಗೆಯ ಸಂದರ್ಭದಲ್ಲಿ ಆಗಿರಬಹುದಾದ ಕಾಂಪ್ಲಿಕೇಶನ್‌ಗಳು, ಬಿಪಿ- ಮಧುಮೇಹದ ಏರಿಳಿತಗಳು, ಹಾರ್ಮೋನ್‌ ಅಸಮತೋಲನಗಳು- ಇವುಗಳಿಂದಾಗಿ ಸ್ತ್ರೀಗೆ ಸೆಕ್ಸ್‌ನಲ್ಲಿ ಆಸಕ್ತಿ ಬತ್ತಿಹೋಗುತ್ತವೆ. ಸ್ತ್ರೀಯರಲ್ಲಿ ಕಾಮಾಸಕ್ತಿಗೆ ಕಾರಣವಾದ ಹಾರ್ಮೋನ್‌ಗಳಾದ ಈಸ್ಟ್ರೋಜೆನ್‌ ಹಾಗೂ ಪ್ರಾಜೆಸ್ಟಿರಾನ್‌ಗಳ ಸ್ರಾವದಲ್ಲಿ ಏರುಪೇರಾಗುತ್ತದೆ. ಹೀಗಾಗಿಯೂ ಆಸಕ್ತಿ ಬತ್ತುತ್ತದೆ. ಜೊತೆಗೆ ಮಗುವಿನ ಕೆಲಸಗಳು ಇದ್ದೇ ಇರುತ್ತವೆ. ರಾತ್ರಿಯಿಡೀ ಎದ್ದು ಅಳುತ್ತಲೇ ಇರುವ, ಹಗಲೂ ಕಿರಿಕಿರಿ ಮಾಡುವ ಮಗುವಾಗಿದ್ದರೆ ತಾಯಿಯ ಪಾಡು ತುಂಬಾ ಕಷ್ಟವೇ ಆಗಿಬಿಡುತ್ತದೆ. ಈ ಹಂತದಲ್ಲಿ ಸೆಕ್ಸ್ ಬೇಡವೇ ಬೇಡ ಅನಿಸುತ್ತದೆ.

ಈ ಅವಧಿಯಲ್ಲಿ ಆಕೆಯನ್ನು ನೀವು ಎಚ್ಚರ ಹಾಗೂ ಪ್ರೀತಿಯಿಂದ ನೋಡಿಕೊಳ್ಳಬೇಕು. ಸೆಕ್ಸ್ ವಾಂಛೆಯನ್ನು ಸ್ವಲ್ಪ ಕಾಲ ಬದಿಗಿಟ್ಟು, ಮಗು ಹಾಗೂ ತಾಯಿಯ ಆರೈಕೆಯ ಕಡೆಗೆ ಗಮನ ಕೊಡಿ. ಬದುಕು ಮೊದಲಿನ ಹಾಗೆಯೇ ಇದೇ ಎಂದು ಭರವಸೆ ನೀಡುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ. ಅಡುಗೆಯಲ್ಲಿ, ಪಾತ್ರ- ಬಟ್ಟೆ ಒಗೆಯುವುದು ಮುಂತಾದವುಗಳಲ್ಲಿ ಆಕೆಗೆ ನೆರವಾಗಿ. ಮಗುವನ್ನು ನಿದ್ರೆ ಮಾಡಿಸಲು ಸಹಾಯ ಮಾಡಿ. ನಿಧಾನವಾಗಿ ನಿಮ್ಮ ಸಂಸರ್ಗದಿಂದ ಆಕೆಗೆ ಪ್ರಣಯದಲ್ಲಿ ಆಸಕ್ತಿ ಕುದುರಬಹುದು. 

ಇದೇ ಸಂದರ್ಭದಲ್ಲಿ ನೀವು ಎಚ್ಚರ ವಹಿಸಬೇಕಾದ ಇನ್ನೊಂದು ಅಂಶ ಎಂದರೆ ಸುರಕ್ಷಿತ ಸಂಭೋಗದ್ದು. ಈ ಹಂತದಲ್ಲಿ ಮಹಿಳೆಯ ಅಂಡಾಣು ಬಿಡುಗಡೆಯ ಸಂದರ್ಭ, ಅಂದರೆ ಪೀರಿಯೆಡ್ಸ್ ಸಮಯ ಏರುಪೇರು ಆಗುತ್ತಿರುತ್ತದೆ. ನಿಯಮಿತವಾಗಿ ಆಗುತ್ತಿರುವುದಿಲ್ಲ. ಹೀಗಾಗಿ ಸೆಕ್ಸ್‌ನಲ್ಲಿ ತೊಡಗುವಾಗ ಗರ್ಭಧಾರಣೆ ಆಗದಂತೆ ಎಚ್ಚರಿಕೆ ವಹಿಸಿ. ಕಾಂಡೋಮ್‌ ಇತ್ಯಾದಿ ಬಳಬಹುದು. ಹಾಲೂಡಿಸುವ ತಾಯಂದಿರಲ್ಲಿ ಕನ್ಸೀವ್‌ ಆಗುವುದಿಲ್ಲ ಎಂಬ ತಪ್ಪು ಕಲ್ಪನೆಯಿದೆ. ಅದು ನಿಜವಲ್ಲ. 

ಒಂದೇ ಸಲ ಎರಡೆರಡು ವಯಾಗ್ರ ಸೇವಿಸಿದರೆ ಏನಾಗುತ್ತದೆ?

ಪ್ರಶ್ನೆ: ನನ್ನ ಶಿಶ್ನ ಎಡಗಡೆಗೆ ಸುಮಾರು ಬಾಗಿಕೊಂಡಿದೆ. ನಿಮಿರಿದಾಗಲೂ ಬಾಗಿಕೊಂಡೇ ಇರುತ್ತದೆ. ಪೋರ್ನ್‌ನಲ್ಲಿ ನಾನು ನೋಡಿದ ಪ್ರಕಾರ ಹಾಗಿರುವುದಿಲ್ಲ. ಇದು ಸಹಜವಲ್ಲ ಅಲ್ಲವೇ? ಇದು ನೆಟ್ಟಗಾಗಲು ಏನು ಮಾಡಬೇಕು?

ಉತ್ತರ: ಪೋರ್ನ್‌ ನೋಡಿ ನಿಮ್ಮ ದೇಹದ ಬಗ್ಗೆ ಏನನ್ನೂ ನಿರ್ಧರಿಸಬೇಡಿ. ಅಲ್ಲಿ ಬರುವುದೆಲ್ಲವೂ ನೂರಕ್ಕೆ ನೂರು ನಿಜವಲ್ಲ. ಹಾಗೇ ಅಲ್ಲಿ ಕಾಣಿಸುವ ದೇಹಗಳು ಆದರ್ಶವಾದ ದೇಹಗಳೂ ಅಲ್ಲ. ಪ್ರತಿಯೊಬ್ಬನ ದೇಹದ ಅಂಗಗಳೂ ಬೇರೆ ಬೇರೆ. ಅದನ್ನು ಹಾಗೆಯೇ ನೋಡಬೇಕು. ನೂರಕ್ಕೆ ಐವತ್ತು ಮಂದಿಯಲ್ಲಿ ಶಿಶ್ನ ಸ್ವಲ್ಪವಾದರೂ ಬಾಗಿಯೇ ಇರುತ್ತದೆ. ಇದು ಲೈಂಗಿಕ ತಜ್ಞರು ನೀಡಿದ ಅಂಕಿ ಅಂಶದಿಂದ ತಿಳಿದುಬರುವ ಸಂಗತಿ. ಹೀಗಾಗಿ ನಿಮ್ಮ ಶಿಶ್ನದ ಬಗ್ಗೆ ಕೀಳರಿಮೆ ಬೇಡ.

ಈ ನಾಲ್ಕು ಜೀವಸತ್ವಗಳು ಪುರುಷರ ಫಲವತ್ತತೆಯನ್ನು ಹೆಚ್ಚಿಸುವ ಫ್ಯಾಕ್ಟರಿಗಳು!
 

 

Latest Videos
Follow Us:
Download App:
  • android
  • ios