ದಕ್ಷಿಣ ಕನ್ನಡದಲ್ಲಿ ಮೂವರು ಗರ್ಭಿಣಿಯರು ಸಹಿತ 23 ಮಂದಿಗೆ ಪಾಸಿಟಿವ್
ದ.ಕ. ಜಿಲ್ಲೆಯಲ್ಲಿ ಸೋಮವಾರ ಮೂವರು ಗರ್ಭಿಣಿಯರು ಸಹಿತ 23 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 289ಕ್ಕೆ ಏರಿಕೆಯಾಗಿದ್ದು, ಈ ಸಂಖ್ಯೆ 300 ದಾಟುವ ಭೀತಿ ಎದುರಾಗಿದೆ. ಈ ನಡುವೆ ಬಾಲಕಿ ಸಹಿತ ಐವರು ಸೋಂಕಿನಿಂದ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಮಂಗಳೂರು(ಜೂ.16): ದ.ಕ. ಜಿಲ್ಲೆಯಲ್ಲಿ ಸೋಮವಾರ ಮೂವರು ಗರ್ಭಿಣಿಯರು ಸಹಿತ 23 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 289ಕ್ಕೆ ಏರಿಕೆಯಾಗಿದ್ದು, ಈ ಸಂಖ್ಯೆ 300 ದಾಟುವ ಭೀತಿ ಎದುರಾಗಿದೆ. ಈ ನಡುವೆ ಬಾಲಕಿ ಸಹಿತ ಐವರು ಸೋಂಕಿನಿಂದ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಸೋಮವಾರ 23 ಮಂದಿಗೆ ಸೋಂಕು ಇರುವುದು ಪತ್ತೆಯಾಗಿದೆ. ಈ ಪೈಕಿ 22 ಮಂದಿ ಸೌದಿ ಅರೇಬಿಯಾದಿಂದ ಬಂದವರಾಗಿದ್ದಾರೆ. ಇದರಲ್ಲಿ ಮೂವರು ಗರ್ಭಿಣಿಯರೂ ಸೇರಿದ್ದಾರೆ.
3 ತಿಂಗಳಿಂದ ಚಿಕಿತ್ಸೆ: 6 ಬಾರಿ ಪರೀಕ್ಷೆಯಲ್ಲೂ ಕೊರೋನಾ ಪಾಸಿಟಿವ್
ಸೌದಿ ಅರೇಬಿಯದಿಂದ ಜೂ.7, 10 ಮತ್ತು 11ರಂದು ಆಗಮಿಸಿದ 22 ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಈ ಪೈಕಿ ನಾಲ್ವರು ಮಹಿಳೆಯರಿದ್ದರೆ, ಉಳಿದವರು 22ರಿಂದ 58 ವರ್ಷದೊಳಗಿನವರು. ಇವರ ಗಂಟಲು ದ್ರವ ಮಾದರಿ ಪರೀಕ್ಷೆಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.
ಪಿ-5066ರ ಪ್ರಾಥಮಿಕ ಸಂಪರ್ಕದಲ್ಲಿದ್ದ 26 ವರ್ಷದ ಯುವಕನನ್ನು ಸಹ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಅವರ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಇವರನ್ನು ನಗರದ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಚಿಕಿತ್ಸೆ ಮುಂದುವರಿದಿದೆ.
ಕಾಸರಗೋಡು ವಿದ್ಯಾರ್ಥಿಗಳಿಗೆ ಗಡಿ ಭಾಗದಿಂದ ಬಸ್ ಸೌಲಭ್ಯ..!
ಐವರು ಡಿಸ್ಚಾರ್ಜ್: ಕೊರೋನಾ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಆಶಾದಾಯಕವಾಗಿ ಪರಿಣಮಿಸಿದೆ. ಸೋಮವಾರ ಐವರು (11 ವರ್ಷದ ಬಾಲಕಿ, 43, 20, 25, 52 ವರ್ಷದ ಪುರುಷರು) ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಇದುವರೆಗೆ 163 ಮಂದಿ ಗುಣಮುಖರಾದಂತಾಗಿದೆ. ಪ್ರಸಕ್ತ 145 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಐಸಿಯುಗೆ ಇಬ್ಬರು ದಾಖಲು: ಮಧುಮೇಹ ಹಾಗೂ ನ್ಯುಮೊನಿಯದಿಂದ ಬಳಲುತ್ತಿದ್ದ 70 ವರ್ಷದ ವೃದ್ಧ ಹಾಗೂ ಮಧುಮೇಹ ಹಾಗೂ ಅರ್ಬುದ ರೋಗದಿಂದ ಬಳಲುತ್ತಿದ್ದ 52 ವರ್ಷ ವ್ಯಕ್ತಿಯನ್ನು ಐಸಿಯುಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಕೋವಿಡ್ ನಿಗಾವಣೆ: ದ.ಕ. ರಾಜ್ಯಕ್ಕೆ ಪ್ರಥಮ
ಕೋವಿಡ್ ನಿಗಾವಣೆಗಾಗಿ ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ‘ಕ್ವಾರಂಟೈನ್ ವಾಚ್ ಆ್ಯಪ್’ ಅಡಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ನಿಗಾ ವಹಿಸುವ ಮೂಲಕ ಆ್ಯಪ್ ಬಳಕೆಯಲ್ಲಿ ದ.ಕ. ಮುಂಚೂಣಿಯಲ್ಲಿದೆ. ಈ ಹಿನ್ನೆಲೆಯಲ್ಲಿ ನಿಗಾವಣೆಯಲ್ಲಿ ರಾಜ್ಯಕ್ಕೆ ದ.ಕ. ಪ್ರಥಮ ಸ್ಥಾನ ಪಡೆದಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.
ಭಾರಿ ಮಳೆ ಸಾಧ್ಯತೆ: ಇಂದಿನಿಂದ 5 ದಿನ ಯೆಲ್ಲೋ ಅಲರ್ಟ್
ಈ ಆ್ಯಪ್ ಮೂಲಕ ನಿಗಾವಣೆ ವಹಿಸಿ ಸೋಂಕು ಹರಡದಂತೆ ಗಮನಹರಿಸಲಾಗಿದೆ. ಈ ಕಾರ್ಯದಲ್ಲಿ ಕಂದಾಯ, ಪಂಚಾಯತ್‌ರಾಜ್, ಪೊಲೀಸ್, ಆರೋಗ್ಯ ಇಲಾಖೆಗಳು ಅವಿರತವಾಗಿ ಶ್ರಮಿಸುತ್ತಿವೆ. ಮುಂದೆಯೂ ಸಹ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳು ನಿಗಾವಣೆಯಲ್ಲಿಯೇ ಇರಲು ಅವರ ನೆರೆಹೊರೆಯವರು, ಗ್ರಾಮಸ್ಥರು ತೊಡಗಿಸಿಕೊಂಡು ಸೋಂಕು ತಡೆಯಲು ಮುಂದಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.