ಉಡುಪಿ(ಜೂ.16): ಜಿಲ್ಲೆಯಲ್ಲಿ ಸೋಮವಾರ ಬಹಳ ಜೋರಾಗಿ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಕಿತ್ತಳೆ ಎಚ್ಚರಿಕೆ (ಆರೆಂಜ್‌ ಅಲರ್ಟ್‌) ಘೋಷಿಸಿತ್ತು. ಆದರೆ ಅಂತಹದೇನೂ ಆಗಿಲ್ಲ, ಆದರೆ ಬಿಟ್ಟುಬಿಟ್ಟು ಉತ್ತಮ ಮಳೆಯಾಗಿದೆ.

ಜೂ.16 ರಿಂದ 20ರ ವರೆಗೆ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಹಳದಿ ಎಚ್ಚರಿಕೆ (ಯೆಲ್ಲೋ ಅಲರ್ಟ್‌) ಘೋಷಿಸಿದೆ. ಭಾನುವಾರ ರಾತ್ರಿ ಸುರಿದ ಮಳೆಗಾಳಿಗೆ ಕಾಪು ಮತ್ತು ಬ್ರಹ್ಮಾವರ ತಾಲೂಕಿಗಳಲ್ಲಿ ಒಟ್ಟು 4 ಮನೆಗಳಿಗೆ 1.80 ಲಕ್ಷ ರು.ಗಳಷ್ಟುಹಾನಿಯಾಗಿದೆ.

3 ತಿಂಗಳಿಂದ ಚಿಕಿತ್ಸೆ: 6 ಬಾರಿ ಪರೀಕ್ಷೆಯಲ್ಲೂ ಕೊರೋನಾ ಪಾಸಿಟಿವ್

4 ಮನೆಗೆ ಭಾಗಶಃ ಹಾನಿ: ಕಾಪು ತಾಲೂಕಿನ ಪಡು ಗ್ರಾಮದ ರತ್ನಾ ಜೆ. ಅವರ ಮನೆಗೆ 50,000 ರು., ಹೆಜಮಾಡಿ ಗ್ರಾಮದ ಯತೀಶ್‌ ಲೋಕಯ್ಯ ಅವರ ಮನೆಗೆ 80,000 ರು.ಗಳ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಬ್ರಹ್ಮಾವರ ತಾಲೂಕಿನ ಹಂದಾಡಿ ಗ್ರಾಮದ ಮೀನಕ್ಕ ಪೂಜಾರಿ ಅವರ ಮನೆಯ ದನದ ಕೊಟ್ಟಿಗೆ ಭಾಗಶಃ ಕುಸಿದು 10,000 ರು. ಮತ್ತು 52ನೇ ಹೇರೂರು ಗ್ರಾಮದ ತಿಮ್ಮ ಗುಡ್ಡ ಪೂಜಾರಿ ಅವರ ಮನೆಗೆ 40,000 ರು.ಗಳ ನಷ್ಟಉಂಟಾಗಿದೆ.

ಕಾಸರಗೋಡು ವಿದ್ಯಾರ್ಥಿಗಳಿಗೆ ಗಡಿ ಭಾಗದಿಂದ ಬಸ್‌ ಸೌಲಭ್ಯ..!

ಸೋಮವಾರ ಮುಂಜಾನೆವರೆಗೆ (ವಾಡಿಕೆಯ ಮಳೆ 39.10 ಮಿ.ಮೀ.) 44.30 ಮಿ.ಮೀ. ಮಳೆಯಾಗಿರುತ್ತದೆ. ಅದರಲ್ಲಿ ಉಡುಪಿ ತಾಲೂಕಿನಲ್ಲಿ 56.50 ಮಿ.ಮೀ., ಕುಂದಾಪುರ ತಾಲೂಕಿನಲ್ಲಿ 37.10 ಮಿ.ಮೀ. ಮತ್ತು ಕಾರ್ಕಳ ತಾಲೂಕಿನಲ್ಲಿ 44.20 ಮಿ.ಮೀ. ಮಳೆಯಾಗಿದೆ.