ಬೆಂಗಳೂರು: 5 ವರ್ಷದಲ್ಲಿ 220 ಕಿ.ಮೀ. ಮೆಟ್ರೋ ಮಾರ್ಗ!

ಇದೇ ಮಾರ್ಚ್‌ ಅಂತ್ಯ ಅಥವಾ ಏಪ್ರಿಲ್‌ನಲ್ಲಿ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ 'ಹಳದಿ' ಮಾರ್ಗ ತೆರೆದುಕೊಳ್ಳಲಿದೆ. ಮೆಟ್ರೋ 2ನೇ ಹಂತದ ನೀಲಿ ಮಾರ್ಗ 58.19ಕಿ.ಮೀ., 21.268.. 80 ಕಿ.ಮೀ. ಗುಲಾಬಿ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ. ಇವೆರಡೂ ಮಾರ್ಗಗಳನ್ನು 2026ರ ವರ್ಷಾಂತ್ಯಕ್ಕೆ ಕಾರ್ಯಾರಂಭ ಮಾಡುವುದಾಗಿ  ಸರ್ಕಾರಕ್ಕೆ ತಿಳಿಸಿದ ಬಿಎಂಆರ್‌ಸಿಎಲ್
 

220 km in 5 years Namma Metro Train Line in Bengaluru

ಮಯೂರ್ ಹೆಗಡೆ

ಬೆಂಗಳೂರು(ಜ.10): ಮುಂದಿನ ಐದು ವರ್ಷಗಳಲ್ಲಿ 143 ಕಿಲೋ ಮೀಟರ್ ಉದ್ದದ ಆರು ವಿವಿಧ ಹೊಸ ಮಾರ್ಗಗಳನ್ನು ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸುವುದು ಸೇರಿ ಒಟ್ಟಾರೆ ಸಿಲಿಕಾನ್ ಸಿಟಿಯಲ್ಲಿ ಮೆಟ್ರೋ ಸಂಪರ್ಕವನ್ನು 220 ಕಿ.ಮೀ.ಗೆ ವಿಸ್ತರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮವು ಗುರಿ ಇಟ್ಟುಕೊಂಡಿದೆ. 

220 km in 5 years Namma Metro Train Line in Bengaluru

ಪ್ರಸ್ತುತ ವೈಟ್‌ಫೀಲ್ಡ್-ಚಲ್ಲಘಟ್ಟ ನೇರಳೆ ಮಾರ್ಗ ಕಾರಿಡಾರ್ 43.49ಕಿ.ಮೀ., ಮಾದಾವರ- ಸಿಲ್ಸ್‌ಇನ್ ಸ್ಟಿಟ್ಯೂಟ್‌ವರೆಗೆ 33.5 ಕಿ.ಮೀ. ಸೇರಿ ಒಟ್ಟು 77 ಕಿ.ಮೀ. ಸೇವೆಯಲ್ಲಿದೆ. ಡಿ.6ರ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದ ಮೆಟ್ರೋ 3ನೇ ಹಂತದ ಹೆಬ್ಬಾಳ- ಸರ್ಜಾಪುರ 36.585 ಕಿ.ಮೀ. ಕೆಂಪು ಮಾರ್ಗ ಹೊರತುಪಡಿಸಿ ಈವರೆಗೆ ಪ್ರಸ್ತಾಪ ಆಗಿರುವ ಎಲ್ಲ ಮಾರ್ಗಗಳನ್ನು ಜನಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಕಳೆದ ಅಧಿವೇಶನದಲ್ಲಿ ಸರ್ಕಾರ ಉತ್ತರಿಸಿದೆ.

ಬೆಂಗಳೂರು ನಮ್ಮ ಮೆಟ್ರೋ ದರ ಶೇ.20ರಷ್ಟು ಏರಿಕೆ; ಸರ್ಕಾರದಿಂದ ಶೀಘ್ರವೇ ಆದೇಶ!

2026ರ ಅಂತ್ಯಕ್ಕೆ ನೀಲಿ, ಗುಲಾಬಿ: 

ಅದರ ಪ್ರಕಾರ ಇದೇ ಮಾರ್ಚ್‌ ಅಂತ್ಯ ಅಥವಾ ಏಪ್ರಿಲ್‌ನಲ್ಲಿ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ 'ಹಳದಿ' ಮಾರ್ಗ ತೆರೆದುಕೊಳ್ಳಲಿದೆ. ಮೆಟ್ರೋ 2ನೇ ಹಂತದ ನೀಲಿ ಮಾರ್ಗ 58.19ಕಿ.ಮೀ., 21.268.. 80 ಕಿ.ಮೀ. ಗುಲಾಬಿ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ. ಇವೆರಡೂ ಮಾರ್ಗಗಳನ್ನು 2026ರ ವರ್ಷಾಂತ್ಯಕ್ಕೆ ಕಾರ್ಯಾರಂಭ ಮಾಡುವುದಾಗಿ ಬಿಎಂಆರ್‌ಸಿಎಲ್ ಸರ್ಕಾರಕ್ಕೆ ತಿಳಿಸಿದೆ.

ಈವರೆಗೆ ಎಷ್ಟು ಕೆಲಸವಾಗಿದೆ?

ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೃಷ್ಣರಾಜಪುರ ಹಾಗೂ ಕೃಷ್ಣರಾಜಪುರದಿಂದ ವಿಮಾನ ನಿಲ್ದಾಣ ಸಂಪರ್ಕಿಸುವ ನೀಲಿ ಮಾರ್ಗದ ಹಂತ 2ಎ ಮತ್ತು 2ಬಿ ಮಾರ್ಗದಲ್ಲಿ ಡಿಸೆಂಬ‌ರ್ ಅಂತ್ಯಕ್ಕೆ ಶೇಕಡ 45ರಷ್ಟು ಸಿವಿಲ್ ಕಾಮಗಾರಿ ಮುಗಿದಿದೆ. ಔಟರ್ ರಿಂಗ್ ರೋಡ್‌ನಿಂದ ವಿಮಾನ ನಿಲ್ದಾಣದವರೆಗೆ ಶೇ.10ರಷ್ಟು ಟ್ರ್ಯಾಕ್ ಅಳವಡಿಕೆಯಾಗಿದೆ. ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ ಗುಲಾಬಿ ಮಾರ್ಗದಲ್ಲಿ 13 ಕಿ.ಮೀ. ಸುರಂಗ ಕೊರೆದು ಮುಗಿದಿದ್ದು, ತಾವರೆಕೆರೆಯಿಂದ ನಾಗವಾರದವರೆಗೆ ಶೇ.22.16 ಹಾಗೂ ಎತ್ತರಿಸಿದ ಮಾರ್ಗದಲ್ಲಿ ಕಾಳೇನ ಅಗ್ರಹಾರದ ವರೆಗೆ ಶೇ.79ರಷ್ಟು ಟ್ಯಾಕ್ ಅಳವಡಿಕೆಯಾಗಿದೆ.

ಬೆಂಗಳೂರಿನ ಟಾಪ್-5 ಜನದಟ್ಟಣೆ ಮೆಟ್ರೋ ನಿಲ್ದಾಣಗಳು ಯಾವುವು?

ಮೂರನೇ ಹಂತಕ್ಕೆ ಸರ್ವೆ

5 ವರ್ಷದಲ್ಲಿ ಪೂರ್ಣಗೊಳ್ಳುವ ಗುರಿಯಿರುವ 15,611 ಕೋಟಿ ವೆಚ್ಚದ ಕಿತ್ತಳೆ ಮಾರ್ಗ ಎರಡು ಕಾರಿಡಾರ್ ಹೊಂದಿದೆ. ಜೆಪಿನಗರ 4ನೇ ಹಂತದಿಂದ ಕೆಂಪಾಪುರ ಮತ್ತು ಹೊಸಹಳ್ಳಿಯಿಂದ ಕಡಬಗೆರೆ ಕಾರಿಡಾರ್-1ರ ನಿರ್ಮಾಣಕ್ಕೆ 1,29,743 ಚದರ ಮೀಟರ್ ವಿಸ್ತೀರ್ಣ ಗುರುತಿಸಲಾಗಿದ್ದು,  ಜೆ.ಪಿ.ನಗರದ 4ನೇ ಹಂತದಿಂದ ಮೈಸೂರು ರಸ್ತೆ ಮೆಟ್ರೋ ನಿಲ್ದಾಣದವರೆಗೆ 26811 ಚ.ಮೀ. ಭೂಸ್ವಾಧೀನ ಮಾಡಿ ಕೊಳ್ಳುತ್ತಿದೆ. ಜೊತೆಗೆ ಮಾಗಡಿ ರಸ್ತೆಯಲ್ಲಿ ಜಿಯೋ ಟೆಕ್ನಿಕಲ್ ಇನ್ವೆಸ್ಟಿಗೇಷನ್ ಕೆಲಸ ಆರಂಭಿಸಿದೆ.

ಯಾವ ಮಾರ್ಗದಲ್ಲಿ ಜನಸಂಚಾರ ಎಷ್ಟು?

ಹಳದಿ ಮಾರ್ಗದಲ್ಲಿ ಪ್ರತಿನಿತ್ಯ 2.5 ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆಯಿದೆ. ನಗರದ ಮಧ್ಯಭಾಗದಲ್ಲಿ ಹಾದು ಹೋಗುವ ಗುಲಾಬಿ ಮಾರ್ಗದಲ್ಲಿ ಪ್ರತಿನಿತ್ಯ 5 ಲಕ್ಷ ಜನ ಜನಸಂಚಾರ ಆಗುವ ಲೆಕ್ಕಾಚಾರವನ್ನು ಬಿಎಂ ಆರ್‌ಸಿಎಲ್ ಹೊಂದಿದೆ. ನೀಲಿ ಮಾರ್ಗ ದಲ್ಲಿ 7.7 ಲಕ್ಷ ಪ್ರಯಾಣಿಕರು ಸಂಚರಿಸಬಹುದು. ಕಿತ್ತಳೆ ಮಾರ್ಗದಲ್ಲಿ 7.28 ಲಕ್ಷ ಜನ ಸಂಚರಿಸ ಬಹುದು ಎಂದು ಮೆಟ್ರೋ ನಿಗಮ ಹೇಳಿದೆ. 

Latest Videos
Follow Us:
Download App:
  • android
  • ios