ಸಾಗರ(ಮೇ.12): ಪಟ್ಟಣದ ರಾಮನಗರದಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಸೋಮವಾರ ನಡೆದಿದೆ. ರಾಮನಗರದಲ್ಲಿ ಗಾರೆ ಕೆಲಸ ಮಾಡುತ್ತಿದ್ದ ರಾಘವೇಂದ್ರ (22) ಎಂಬ ಯುವಕನ ಶವ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. 

ರಾಘವೇಂದ್ರ ಭಾನುವಾರ ಬೆಳಿಗ್ಗೆ ತನ್ನ ತಮ್ಮನಿಗೆ ಮೊಬೈಲ್‌ ಕೊಟ್ಟು, ಯಾರದ್ದೆ ಫೋನ್‌ ಬಂದರೂ ರಿಸೀವ್‌ ಮಾಡಬೇಡ ಎಂದು ಹೇಳಿದ್ದನು. ಸೋಮವಾರ ಬೆಳಗ್ಗೆ ರಾಘವೇಂದ್ರ ಮನೆ ಎದುರಿನ ಸಣ್ಣ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೈ ಮತ್ತು ತಲೆಯ ಮೇಲೆ ಸಣ್ಣಪುಟ್ಟಗಾಯವಾಗಿರುವುದರಿಂದ ಸ್ಥಳೀಯರು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಸಾಗರ ಪೇಟೆ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕರ್ತವ್ಯ ನಿರ್ವಹಿಸುತ್ತಲೇ ಪ್ರಾಣಬಿಟ್ಟ ಕೊರೋನಾ ವಾರಿಯರ್ಸ್ ಭೀಮಕ್ಕ..!

ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ

ತೀರ್ಥಹಳ್ಳಿ: ತಾಲೂಕಿನ ಆರಗ ಕೋಣಂದೂರು ರಸ್ತೆಯಲ್ಲಿರುವ ಹಿರೇಸರ ನಿಜಗೂರು ನಿವಾಸಿ ಯೋಗೇಂದ್ರ(50) ಸೋಮವಾರ ಬೆಳಗ್ಗೆ ನೇಣುಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಳೆದ ವಾರ ತೀರ್ಥಹಳ್ಳಿ ಪೊಲೀಸರು ಇವರ ಮೇಲೆ ಅಕ್ರಮ ಮದ್ಯ ಮಾರಾಟದ (ಕಳ್ಳಬಟ್ಟಿ) ಆರೋಪದ ಮೇಲೆ ಬಂಧಿಸಿ ಜೈಲಿಗೆ ಕಳಿಸಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ಇವರು ತಮ್ಮ ಮೇಲೆ ಬಂದ ಆರೋಪದ ವಿಚಾರದಲ್ಲಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ. ತೀರ್ಥಹಳ್ಳಿ ಕ್ರೈಮ್‌ ಸಬ್‌ ಇನ್ಸಪೆಕ್ಟರ್‌ ಸುಷ್ಮಾರವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.