Asianet Suvarna News Asianet Suvarna News

ಬೆಳಗಾವಿಲ್ಲಿ ವರುಣನ ಆರ್ಭಟ: ಮರ ಬಿದ್ದು ಓರ್ವ ಬಲಿ, ಇಬ್ಬರ ಸ್ಥಿತಿ ಗಂಭೀರ

ಮೂರು ಜನ ಬೈಕ್ ಮೇಲೆ ಬೆಳಗಾವಿಗೆ ಬರುತ್ತಿದ್ದರು. ಈ ವೇಳೆ ಬೃಹತ್ ಮರವೊಂದು ಏಕಾಏಕಿ ಧರೆಗುರುಳಿ ಬರ್ತಿದ್ದ ಬೈಕ್ ಮೇಲೆ ಬಿದ್ದಿದೆ. ಹೀಗಾಗಿ ಸ್ಥಳದಲ್ಲೇ ಓರ್ವ ಸಾವನ್ನಪ್ಪಿ, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. 

21 Years Old Young Man Killed Due to Tree Fell in Belagavi grg
Author
First Published Jun 9, 2024, 4:54 PM IST

ಬೆಳಗಾವಿ(ಜೂ.09):  ಭಾರೀ ಮಳೆಗೆ ಮರ ಬಿದ್ದು ಓರ್ವ ಬಲಿಯಾಗಿ ಇಬ್ಬರ ಸ್ಥಿತಿ ಗಂಭೀರವಾದ ಘಟನೆ ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ಬಳಿ ಇಂದು(ಭಾನುವಾರ) ನಡೆದಿದೆ. ಕರ್ಲೆ ಗ್ರಾಮದ ಸೋಮನಾಥ್ ಮುಚ್ಚಂಡಿಕರ್(21) ಮೃತ ದುರ್ದೈವಿ.

ಮೂರು ಜನ ಬೈಕ್ ಮೇಲೆ ಬೆಳಗಾವಿಗೆ ಬರುತ್ತಿದ್ದರು. ಈ ವೇಳೆ ಬೃಹತ್ ಮರವೊಂದು ಏಕಾಏಕಿ ಧರೆಗುರುಳಿ ಬರ್ತಿದ್ದ ಬೈಕ್ ಮೇಲೆ ಬಿದ್ದಿದೆ. ಹೀಗಾಗಿ ಸ್ಥಳದಲ್ಲೇ ಓರ್ವ ಸಾವನ್ನಪ್ಪಿ, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. 

ಕೊಡಗು: ಕುಸಿಯುವ ಹಂತಕ್ಕೆ ತಲುಪಿದ ಆನೆಹಳ್ಳ ಸೇತುವೆ, ಆತಂಕದಲ್ಲಿ ಜನತೆ..!

ವಿಠ್ಠಲ್ ತಳವಾರ್, ಸ್ವಪ್ನಿಲ್ ದೇಸಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ. ಸ್ಥಳೀಯರು ಮತ್ತು ಪೊಲೀಸರು ಮರ ತೆರವು ಮಾಡಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

Latest Videos
Follow Us:
Download App:
  • android
  • ios