ಅಪಘಾತ ಮಾಡಿ ಪರಾರಿಯಾಗಿದ್ದ ಟ್ಯಾಕ್ಟರ್ ಚಾಲಕರನ್ನು ಕಲ್ಲೂರು ಗ್ರಾಮದ ಬಳಿ ಸಾರ್ವಜನಿಕರು ಪತ್ತೆ ಮಾಡಿದ್ದಾರೆ. ನಂತರ ಟ್ಯಾಕ್ಟರ್ ಸಮೇತ ಚಾಲಕನನ್ನು ಸಂಚಾರಿ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಶಿವಮೊಗ್ಗ(ಫೆ.18): ಬೈಕ್ ಸವಾರನಿಗೆ ಟ್ಯಾಕ್ಟರ್‌ವೊಂದು ಗುದ್ದಿದ ಪರಿಣಾಮ ಯುವಕನೋರ್ವ ಸಾವನ್ನಪ್ಪಿದ ಘಟನೆ ಶಿವಮೊಗ್ಗದ ಮಂಡ್ಲಿಯ ಕೃಷ್ಣರಾಜ ನೀರು ಸಂಗ್ರಹಣ ಕೇಂದ್ರದ ಎದುರು ನಡೆದಿದೆ. ಬೈಕ್ ಸವಾರ ಸೈಫಾನ್ (21) ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿಯಾಗಿದ್ದಾನೆ.

ಮೃತ ಸೈಫಾನ್ ಪಿಒಪಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಎಂದು ತಿಳಿದು ಬಂದಿದೆ. ಬೈಕ್‌ಗೆ ಗುದ್ದಿ ಟ್ಯಾಕ್ಟರ್ ಚಾಲಕ ಪರಾರಿಯಾಗಿದ್ದಾನೆ. 

ಸಾವಿನ ಹೆದ್ದಾರಿಯಾಗ್ತಿದೆ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ! ಭೀಕರ ಅಪಘಾತ ಸ್ಥಳದಲ್ಲೇ ಮೂವರ ದುರ್ಮರಣ!