Asianet Suvarna News Asianet Suvarna News

ಬೆಂಗಳೂರು: ಮೆಟ್ರೋ ನಿಲ್ದಾಣ, ಡಿಪೋಗಳಲ್ಲಿ 2000 ಹೈ ಎಂಡ್‌ ಕ್ಯಾಮೆರಾ ಕಣ್ಗಾವಲು..!

ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವಂತೆ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲು ಬೆಂಗಳೂರು ಮೆಟ್ರೋ ರೈಲ್ವೇ ನಿಗಮ ಹೆಜ್ಜೆ ಇಟ್ಟಿದೆ. ಇದಕ್ಕಾಗಿ ಮೆಟ್ರೋದ ನಿಲ್ದಾಣಗಳಲ್ಲಿ ಹೆಚ್ಚಿನ ಸಾಮರ್ಥ್ಯವುಳ್ಳ ಸಿಸಿ ಕ್ಯಾಮೆರಾ ಅಳವಡಿಸುತ್ತಿದೆ. ವಿಶೇಷವಾಗಿ ಹೆಚ್ಚಿನ ಜನಸಂಚಾರ ಇರುವ ಕೆಂಪೇಗೌಡ ಮೆಟ್ರೋ ನಿಲ್ದಾಣ, ಎಂ.ಜಿ.ರಸ್ತೆ, ಇಂದಿರಾ ನಗರ, ಮಂತ್ರಿ ಸ್ಕ್ವೇರ್‌ ಸೇರಿ ಇತರೆಡೆ ಇವುಗಳ ಅಳವಡಿಕೆಯಾಗಿದೆ.

2000 High End Camera Surveillance in Namma Metro Stations Depots in Bengaluru grg
Author
First Published Jul 2, 2023, 5:33 AM IST

ಬೆಂಗಳೂರು(ಜು.02):  ನಮ್ಮ ಮೆಟ್ರೋದ ನಿಲ್ದಾಣ, ಡಿಪೋಗಳಲ್ಲಿ ಹೆಚ್ಚಿನ ಭದ್ರತೆಗಾಗಿ ಹೈ ಎಂಡ್‌ ರೆಸಲ್ಯೂಶನ್‌ ಸಾಮರ್ಥ್ಯದ ಕೈಗಾರಿಕಾ ಕಣ್ಗಾವಲು ದರ್ಜೆಯ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವಂತೆ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲು ಬೆಂಗಳೂರು ಮೆಟ್ರೋ ರೈಲ್ವೇ ನಿಗಮ ಹೆಜ್ಜೆ ಇಟ್ಟಿದೆ. ಇದಕ್ಕಾಗಿ ಮೆಟ್ರೋದ ನಿಲ್ದಾಣಗಳಲ್ಲಿ ಹೆಚ್ಚಿನ ಸಾಮರ್ಥ್ಯವುಳ್ಳ ಸಿಸಿ ಕ್ಯಾಮೆರಾ ಅಳವಡಿಸುತ್ತಿದೆ. ವಿಶೇಷವಾಗಿ ಹೆಚ್ಚಿನ ಜನಸಂಚಾರ ಇರುವ ಕೆಂಪೇಗೌಡ ಮೆಟ್ರೋ ನಿಲ್ದಾಣ, ಎಂ.ಜಿ.ರಸ್ತೆ, ಇಂದಿರಾ ನಗರ, ಮಂತ್ರಿ ಸ್ಕ್ವೇರ್‌ ಸೇರಿ ಇತರೆಡೆ ಇವುಗಳ ಅಳವಡಿಕೆಯಾಗಿದೆ.

ಇನ್ಫಿನೋವಾ ಕಂಪನಿಯಿಂದ 2 ಸಾವಿರಕ್ಕೂ ಅಧಿಕ ‘ವಿಟಿ210’ ಸರಣಿಯ ಕ್ಯಾಮೆರಾಗಳನ್ನು ಪೂರೈಸಿದೆ. ಬಿಎಂಆರ್‌ಸಿಎಲ್‌ ಗುತ್ತಿಗೆ ಸಂಸ್ಥೆ ಎಲ್‌ಆ್ಯಂಡ್‌ಟಿ ಕಂಪನಿಯಿಂದ ಕ್ಯಾಮೆರಾವನ್ನು ಪಡೆದುಕೊಂಡಿದೆ. ಮೊದಲ ಹಂತವಾಗಿ ನಗರದಲ್ಲಿನ 28 ಮೆಟ್ರೋ ನಿಲ್ದಾಣದಲ್ಲಿ ಕ್ಯಾಮೆರಾವನ್ನು ಅಳವಡಿಸುವ ಗುರಿಯಿದ್ದು, ಈವರೆಗೆ 23 ನಿಲ್ದಾಣ ಹಾಗೂ 3 ಡಿಪೋಗಳಲ್ಲಿ ಅಳವಡಿಕೆ ಮಾಡಲಾಗಿದೆ. ಒಂದೊಂದು ನಿಲ್ದಾಣಗಳ ವ್ಯಾಪ್ತಿಯಲ್ಲಿ ಸರಾಸರಿ 64 ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ. ಇವುಗಳ ಕಂಟ್ರೋಲ್‌ ರೂಮ್‌ನ ಸಿಬ್ಬಂದಿಗೆ ವಿಶೇಷ ತರಬೇತಿಯನ್ನು ಇನ್ಫಿನೋವಾ ನೀಡಿದೆ.

Bengaluru: ಭಾನುವಾರ ಮೆಟ್ರೋ ಸಂಚಾರ ಎರಡು ಗಂಟೆಗಳ ಕಾಲ ಸ್ಥಗಿತ

‘ವಿಟಿ210’ ಸರಣಿಯ ಕ್ಯಾಮೆರಾ ಅಸಾಧಾರಣ ಫೋಟೋ ಗುಣಮಟ್ಟಹೊಂದಿದ್ದು, ಹೆಚ್ಚಿನ ರೆಸಲ್ಯೂಶನ್‌ ಹೊಂದಿರುವ ವಿಡಿಯೋ ತೆಗೆದುಕೊಳ್ಳಲು ಸಾಧ್ಯ. ಜೊತೆಗೆ ಒಳನುಗ್ಗುವಿಕೆ, ಸಂಶಯಾತ್ಮಕ ವ್ಯಕ್ತಿಗಳನ್ನು ನಿಖರವಾಗಿ ಗುರುತಿಸಿಕೊಳ್ಳಲು ನೆರವಾಗಲಿದ್ದು, ಹೆಚ್ಚಿನ ನಿಗಾ ಇಡಲು ಸಾಧ್ಯವಾಗಲಿದೆ.

ಈ ಬಗ್ಗೆ ಮಾತನಾಡಿದ ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮೆಟ್ರೋದಲ್ಲಿ ಆರಂಭದಿಂದಲೂ ಪ್ರತಿ ನಿಲ್ದಾಣದಲ್ಲಿ 50-60 ಸಿಸಿ ಕ್ಯಾಮೆರಾಗಳಿವೆ. ಭದ್ರತೆಯನ್ನು ಮತ್ತಷ್ಟು ಬಲಪಡಿಸಲು, ಜನರ ಓಡಾಟದ ಮೇಲೆ ಹೆಚ್ಚಿನ ನಿಗಾ ಇಡಲು ಹೈ ಎಂಡ್‌ ರೆಸಲ್ಯೂಶನ್‌ ಕ್ಯಾಮೆರಾ ಅಳವಡಿಸಲಾಗಿದೆ ಎಂದರು.

Follow Us:
Download App:
  • android
  • ios