ರಿಪ್ಪನ್‌ಪೇಟೆ [ಡಿ.16]:  ಕಳೆದ ಅಗಸ್ಟ್‌ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಕಷ್ಟುಪ್ರಮಾಣದ ಹಾನಿ ಸಂಭವಿಸಿದೆ. ರಸ್ತೆ, ಸೇತುವೆ ಮತ್ತು ರಸ್ತೆಯಂಚಿನ ಗುಡ್ಡಕುಸಿತ,

ಕಾಲುಸಂಕ ಕಾಮಗಾರಿಗೆ ಸರ್ಕಾರ 4.93 ಕೋಟಿ ರು. ಅನುದಾನವನ್ನು 11 ಕಾಮಗಾರಿಗಳಿಗೆ ಬಿಡುಗಡೆ ಮಾಡಿದೆ. ಈಗಾಗಲೇ ಕಾಮಗಾರಿ ಸಹ ಆಂಭಿಸಲಾಗಿದೆ ಎಂದು ಶಾಸಕ ಹರತಾಳು ಹಾಲಪ್ಪ ವಿವರಿಸಿದರು.

ಸಮೀಪದ ಹೊಸನಗರ-ಶಿವಮೊಗ್ಗ ರಾಜ್ಯಹೆದ್ದಾರಿ ಗವಟೂರು ಶರ್ಮಿನಾವತಿ ಸೇತುವೆ ಬಳಿಯಲ್ಲಿನ ಸೈಡ್‌ವಾಲ್‌ ಕಾಮಗಾರಿ ವೀಕ್ಷಣೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದವರು ಶಾಸಕರು ಏನೂ ಅಭಿವೃದ್ದಿ ಕಾರ್ಯ ಮಾಡಿಲ್ಲ ಎಂದು ಟೀಕಿಸುತ್ತಾರೆ. ಆದರೆ ಪ್ರಸಕ್ತ ಸಾಲಿನಲ್ಲಿ 200 ಕೋಟಿ ರು. ವೆಚ್ಚದಲ್ಲಿ 435 ಕಾಮಗಾರಿಗೆ ಚಾಲನೆ ನೀಡ​ಲಾ​ಗಿ​ದೆ. 

ಬಸ್ ಸ್ಟಾಪ್ ನಿಂದ ಮನೆಗೆ ಡ್ರಾಪ್ : ಮಹಿಳೆಯರಿಗೆ ಪೊಲೀಸರಿಂದ ಹೊಸ ಸೇವೆ !..

ಲೋಕೋಪಯೋಗಿ ಇಲಾಖೆ ರಸ್ತೆಗಳಲ್ಲಿನ ಹೊಂಡ-ಗುಂಡಿ ದುರಸ್ತಿ, ನೀರಾವರಿ, ಸಣ್ಣನಿರಾವರಿ ಇಲಾಖೆ, ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ, ಕೃಷಿ ಮತ್ತು ತೋಟಗಾರಿಕಾ ಇಲಾಖೆ, ಹೌಸಿಂಗ್‌ ಬೋರ್ಡ್‌ ಹೀಗೆ ವಿವಿಧ ಇಲಾಖೆಯಡಿ ಹಲವು ಅಭಿವೃದ್ಧಿ ಕಾಮಗಾರಿಗೆ ಹೆಚ್ಚಿನ ಅದ್ಯತೆ ನೀಡಲಾಗಿದೆ. ಹೊಸನಗರ-ಸಾಗರ ಕ್ಷೇತ್ರದ ವ್ಯಾಪ್ತಿಯ ಹಾನಿಗೊಳಗಾದ 236 ಶಾಲೆಗಳ ದುರಸ್ತಿಗಾಗಿ 8.36 ಕೋಟಿ ರು. ಹಣವನ್ನು ರಾಜ್ಯ ಸರ್ಕಾರ ಅತಿವೃಷ್ಟಿಯೋಜನೆಯಡಿ ಬಿಡುಗಡೆ ಮಾಡಿ, ಕಾಮಗಾರಿ ಸಹ ಚುರುಕುಗೊಳಿಸಲಾಗಿದೆ ಎಂದರು.