ಬಾಗಲಕೋಟೆ: ದ್ವಿಶತಕ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ

ಬುಧವಾರ 20 ಜನರಿಗೆ ಕೋವಿಡ್‌ ಸೋಂಕು ದೃಢ| ಸೋಂಕಿತರ ಸಂಖ್ಯೆ 208ಕ್ಕೇರಿಕೆ| ಕೋವಿಡ್‌-19 ದಿಂದ ಒಟ್ಟು 123 ಜನ ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆ| ಇನ್ನು 80 ಮಾತ್ರ ಸಕ್ರಿಯ ಪ್ರಕರಣಗಳು| ಇಲ್ಲಿವರೆಗೆ ಒಟ್ಟು 21 ಸ್ಯಾಂಪಲ್‌ಗಳು ಮಾತ್ರ ರಿಜೆಕ್ಟ್, ಕಂಟೈನ್ಮೆಂಟ್‌ ಝೋನ್‌ 20 ಇದ್ದು, ಸಾಂಸ್ಥಿಕ ಕ್ವಾಂರಂಟೈನ್‌ನಲ್ಲಿದ್ದ 3764 ಜನರ ಬಿಡುಗಡೆ|
 

20 New Coronavirus Positive Cases in Bagalkot district

ಬಾಗಲಕೋಟೆ(ಜು.02): ಜಿಲ್ಲೆಯಲ್ಲಿ ಮತ್ತೆ 20 ಜನರಿಗೆ ಕೋವಿಡ್‌ ಸೋಂಕು ಇರುವುದು ಬುಧವಾರ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 208ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ​ಧಿಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಕೆಮ್ಮು, ನೆಗಡಿ, ಜ್ವರದ ಹಿನ್ನಲೆ ಹಳೆ ಬಾಗಲಕೋಟೆಯ 54 ವರ್ಷದ ಪುರುಷ ಪಿ-15300 (ಬಿಜಿಕೆ-189), ಪಿ-8709 ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ಕಲಾದಗಿಯ 42 ವರ್ಷದ ಪುರುಷ ಪಿ-15301 (ಬಿಜಿಕೆ-190), ಆಂದ್ರಪ್ರದೇಶದಿಂದ ಬಂದಿದ್ದ ಮುಧೋಳನ 26 ವರ್ಷದ ಯುವಕ ಪಿ-15302 (ಬಿಜಿಕೆ-191), ಬಾಗಲಕೋಟೆಯ ಡೆಂಟಲ್‌ ಕಾಲೇಜಿನ 22 ವರ್ಷದ ಯುವಕ ಪಿ-15303 (ಬಿಜಿಕೆ-192), ಮುಧೋಳನ 57 ವರ್ಷದ ಪುರುಷ ಪಿ-15304 (ಬಿಜಿಕೆ-193), ಪಿ-12064 ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ಮುಧೋಳನ 8 ವರ್ಷದ ಬಾಲಕಿಗೆ ಪಿ-15305 (ಬಿಜಿಕೆ-194) ಕೋವಿಡ್‌ ದೃಢಪಟ್ಟಿದೆ. ಪಿ-10638 ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಬಾದಾಮಿ ತಾಲೂಕಿನ ಮಣಿನಾಗರ ಗ್ರಾಮದ 37 ವರ್ಷದ ಮಹಿಳೆ ಪಿ-15306 (ಬಿಜಿಕೆ-195), ಪಿ-12064 ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮುಧೋಳನ 6 ವರ್ಷದ ಬಾಲಕ ಪಿ-15307 (ಬಿಜಿಕೆ-196), ಪಿ-10638 ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಬಾದಾಮಿ ತಾಲೂಕಿನ ಮಣಿನಾಗರ ಗ್ರಾಮದ 44 ವರ್ಷದ ಪುರುಷ ಪಿ15308 (ಬಿಜಿಕೆ-197), 70 ವರ್ಷದ ಪುರುಷ ಪಿ-15309 (ಬಿಜಿಕೆ-198), 9 ವರ್ಷದ ಬಾಲಕ ಪಿ-15310 (ಬಿಜಿಕೆ-199), ಪಿ-11212 ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ 14 ವರ್ಷದ ಬಾಲಕ ಪಿ-15311 (ಬಿಜಿಕೆ-200), 12 ವರ್ಷದ ಬಾಲಕಿಗೆ ಪಿ-15312 (201) ಕೋವಿಡ್‌ ದೃಢಪಟ್ಟಿದೆ.

'ಆಯುಷ್ಮಾನ್‌ ಕಾರ್ಡ್‌ ಇದ್ರೆ ಕೋವಿಡ್‌ ಚಿಕಿತ್ಸೆ ಉಚಿತ'

ಇನ್ನು ಪುಣೆದಿಂದ ಆಗಮಿಸಿದ ಬಾಗಲಕೋಟೆ ತಾಲೂಕಿನ ವೀರಾಪೂರ ಗ್ರಾಮದ 9 ವರ್ಷದ ಬಾಲಕಿ ಪಿ-153013 (ಬಿಜಿಕೆ-202), 8 ವರ್ಷದ ಬಾಲಕಿ ಪಿ-153014 (ಬಿಜಿಕೆ-203), ಬಾಗಲಕೋಟೆ ನವನಗರದ 45 ವರ್ಷದ ಪುರುಷ ಪಿ-15315 (ಬಿಜಿಕೆ-204), ಮಹಾರಾಷ್ಟ್ರದ ಕಲ್ಯಾಣದಿಂದ ಆಗಮಿಸಿದ್ದ ಬಾಗಲಕೋಟೆ ತಾಲೂಕಿನ ಬೇವೂರ ಗ್ರಾಮದ 32 ವರ್ಷದ ಪುರುಷ ಪಿ-153016 (ಬಿಜಿಕೆ-205), ಪಿ-8709 ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ ಕಲಾದಗಿಯ 28 ವರ್ಷದ ಯುವತಿ ಪಿ-15317 (ಬಿಜಿಕೆ-206), 10 ವರ್ಷದ ಬಾಲಕ ಪಿ-153018 (ಬಿಜಿಕೆ-207), ಹೈದರಾಬಾದದಿಂದ ಆಗಮಿಸಿದ್ದ ಮುಧೋಳ ತಾಲೂಕಿನ ಮುಗಳಖೋಡ ಗ್ರಾಮದ 29 ವರ್ಷದ ಯುವಕನಿಗೆ ಪಿ-15319 (ಬಿಜಿಕೆ-208) ಕೊರೋನಾ ಸೋಂಕು ದೃಢಪಟ್ಟಿದೆ.

ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 703 ಸ್ಯಾಂಪಲ್‌ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಪ್ರತ್ಯೇಕವಾಗಿ 1082 ಜನರ ಮೇಲೆ ನಿಗಾದಲ್ಲಿದ್ದಾರೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 13023 ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 12029 ನೆಗೆಟಿವ್‌ ಪ್ರಕರಣ, 208 ಪಾಜಿಟಿವ್‌ ಪ್ರಕರಣ ಹಾಗೂ 5 ಜನ ಮೃತ ಪ್ರಕರಣ ವರದಿಯಾಗಿರುತ್ತದೆ.

ಕೋವಿಡ್‌-19 ದಿಂದ ಒಟ್ಟು 123 ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು 80 ಮಾತ್ರ ಸಕ್ರಿಯ ಪ್ರಕರಣಗಳು ಇವೆ. ಇಲ್ಲಿವರೆಗೆ ಒಟ್ಟು 21 ಸ್ಯಾಂಪಲ್‌ಗಳು ಮಾತ್ರ ರಿಜೆಕ್ಟ್ ಆಗಿರುತ್ತವೆ. ಕಂಟೈನ್ಮೆಂಟ್‌ ಝೋನ್‌ 20 ಇದ್ದು, ಸಾಂಸ್ಥಿಕ ಕ್ವಾಂರಂಟೈನ್‌ನಲ್ಲಿದ್ದ 3764 ಜನರನ್ನು ಬಿಡುಗಡೆ ಮಾಡಲಾಗಿದೆ.
 

Latest Videos
Follow Us:
Download App:
  • android
  • ios