'ಆಯುಷ್ಮಾನ್‌ ಕಾರ್ಡ್‌ ಇದ್ರೆ ಕೋವಿಡ್‌ ಚಿಕಿತ್ಸೆ ಉಚಿತ'

ಬಿಪಿಎಲ್‌, ಎಪಿಎಲ್‌ ಹಾಗೂ ಯಾವ ಪಡಿತರ ಕಾರ್ಡ್‌ ಇಲ್ಲದವರಿಗೂ ಸಹ ಆಯುಷ್ಮಾನ್‌ ಕಾರ್ಡ್‌ ಪಡೆಯಬಹುದಾಗಿದೆ| ವಿವಿಧ ಸರಕಾರಿ ನೌಕರರು ಸಹ ಆಯುಷ್ಮಾನ್‌ ಕಾರ್ಡ್‌ ಪಡೆಯಬಹುದಾಗಿದೆ| ಈ ಕಾರ್ಡ್‌ ಮೂಲಕ ಕೋವಿಡ್‌ ಚಿಕಿತ್ಸೆಗೆ ಆಯ್ಕೆಯಾದ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ: ಡಿಸಿ ಡಾ.ಕೆ.ರಾಜೇಂದ್ರ|

DC Dr K Rajendra talks Over Covid Treatment

ಬಾಗಲಕೋಟೆ(ಜು.02): ಆಯುಷ್ಮಾನ್‌ ಕಾರ್ಡ್‌ನಿಂದ ಜಿಲ್ಲೆಯಲ್ಲಿರುವ 26 ಖಾಸಗಿ ಆಸ್ಪತ್ರೆಗಳಲ್ಲಿಯೂ ಉಚಿತ ಕೋವಿಡ್‌ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಜಿಲ್ಲಾಧಿ​ಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ. 

ಜಿಲ್ಲಾ​ಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಆಯುಷ್ಮಾನ್‌ ಕಾರ್ಡ್‌ ನೀಡುವ ಕಾರ್ಯಕ್ಕೆ ಥಮ್‌ ನೀಡಿ ಕಾರ್ಡ್‌ ಪಡೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಬಿಪಿಎಲ್‌, ಎಪಿಎಲ್‌ ಹಾಗೂ ಯಾವ ಪಡಿತರ ಕಾರ್ಡ್‌ ಇಲ್ಲದವರಿಗೂ ಸಹ ಈ ಆಯುಷ್ಮಾನ್‌ ಕಾರ್ಡ್‌ ಪಡೆಯಬಹುದಾಗಿದೆ. ವಿವಿಧ ಸರಕಾರಿ ನೌಕರರು ಸಹ ಈ ಕಾರ್ಡ್‌ ಪಡೆಯಬಹುದಾಗಿದೆ. ಈ ಕಾರ್ಡ್‌ ಮೂಲಕ ಕೋವಿಡ್‌ ಚಿಕಿತ್ಸೆಗೆ ಆಯ್ಕೆಯಾದ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ತಿಳಿದರು.

SSLC ಪರೀಕ್ಷೆ ಬರೆದ 3 ವಿದ್ಯಾರ್ಥಿಗಳಿಗೆ ವಕ್ಕರಿಸಿದ ಕೊರೋನಾ

ಜಿಲ್ಲೆಯಲ್ಲಿರುವ 198 ಗ್ರಾಪಂ, 6 ತಾಲೂಕಾ ಆಸ್ಪತ್ರೆ, ಜಿಲ್ಲಾಸ್ಪತ್ರೆ ಹಾಗೂ 120 ಸಾಮಾನ್ಯ ನಾಗರಿಕ ಸೇವಾ ಕೇಂದ್ರ (ಸಿಎಸ್‌ಸಿ)ಗಳಲ್ಲಿ ಆಧಾರ್‌ ಕಾರ್ಡ್‌ ನಂಬರ್‌ ನೀಡಿ ಆಯುಷ್ಮಾನ್‌ ಕಾರ್ಡ್‌ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಅಪರ ಜಿಲ್ಲಾ​ಧಿಕಾರಿ ಮಹಾದೇವ ಮುರಗಿ, ಸೇವಾ ಸಿಂಧು ಜಿಲ್ಲಾ ವ್ಯವಸ್ಥಾಪಕ ಸ್ವಾಗತ ಗುಡೆಗುಡಿ, ಸಾಮಾನ್ಯ ಸೇವಾ ಕೇಂದ್ರದ ಜಿಲ್ಲಾ ವ್ಯವಸ್ಥಾಪಕ ಚೇತನ ಪಟ್ಟಣಶೆಟ್ಟಿ, ಸಕಾಲದ ಲಕ್ಷಿತ್ರಕಾಂತ ಜ್ಯೋತೆನ್ನವರ, ವಿಎಲ್‌ಇ ಹನಿಪ ಇನಾಮದಾರ, ಜಿಲ್ಲಾ​ಧಿಕಾರಿ ಆಪ್ತ ಸಹಾಯಕ ಮಂಜುನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು.
 

Latest Videos
Follow Us:
Download App:
  • android
  • ios