ಮೈಸೂರು[ಅ.06]: ಮೈಸೂರು ಡಿಸ್ಟ್ರಿಕ್ ಪ್ಯಾಕೇಜ್ ಡ್ರಿಂಕಿಂಗ್ ವಾಟರ್ ಮ್ಯಾನುಫ್ಯಾಕ್ಚರರ್ ಅಸೋಸಿಯೇಷನ್ ತೀರ್ಮಾನಿಸಿದಂತೆ 20 ಲೀಟರ್ ಕ್ಯಾನ್ ಒಂದಕ್ಕೆ ಉತ್ಪಾದಕರಿಗೆ ಹಾಗೂ ವಿತರಕರಿಗೆ 5 ರು. ವರೆಗೂ ಹೆಚ್ಚು ಮಾಡಲಾಗಿದ್ದು, ಆದ್ದರಿಂದ ಗ್ರಾಹಕರು 10 ರು. ಹೆಚ್ಚಿಗೆ ನೀಡಿ ಎಂದಿನಂತೆ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.

ವಿತರಕರು, ಸಾರಿಗೆ, ಸಿಬ್ಬಂದಿ ವೇತನ, ಶೇ. 12 ತೆರಿಗೆ, ಲೈಸೆನ್ಸ್‌ಗೆ ತಗಲುವ ವೆಚ್ಚ, ಕಳೆದ ಹಲವಾರು ವರ್ಷಗಳಿಂದ ಬೆಲೆ ಏರಿಕೆಯಿಂದ ವಿತರಕರಿಗೆ ನಷ್ಟ ಟಾಗುತ್ತಿದ್ದು, ಮತ್ತು ಉದ್ದಿಮೆ ನಡೆಸಿ ನಿರ್ವಹಿಸಲು ಕ್ಯಾನ್ ಒಂದುಕ್ಕೆ 10 ರು.ಗಳನ್ನು ಹೆಚ್ಚಿಗೆ ಪಡೆಯುವುದು ಅನಿವಾರ್ಯವಾಗಿದೆ ಎಂದು ಸಂಘ ತಿಳಿಸಿದೆ. ಎಂಆರ್‌ಪಿ ಮಾರಾಟ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ. ಆದ್ದರಿಂದ ಗ್ರಾಹರು 10 ರು. ಹೆಚ್ಚಿಗೆ ನೀಡಿ ಸಹಕರಿಸುವಂತೆ ಮನವಿ ಮಾಡಿದ್ದಾರೆ.