Asianet Suvarna News Asianet Suvarna News

ಮಂಗಳೂರು ಬಾಂಬ್ ಪತ್ತೆ ಬೆನ್ನಲ್ಲೇ ಹಾಸನದಲ್ಲಿ ಇಬ್ಬರು ಶಂಕಿತರು ಅರೆಸ್ಟ್

ಮಂಗಳೂರಲ್ಲಿ ಬಾಂಬ್ ಪತ್ತೆಯಾಗಿ ಆತಂಕ ಸೃಷ್ಟಿ ಮಾಡಿದ್ದ ಬೆನ್ನಲ್ಲೇ ಅನುಮಾನಾಸ್ಪದವಾಗಿ ಕಂಡು ಬಂದ ಇಬ್ಬರು ವ್ಯಕ್ತಿಗಳನ್ನು ಹಾಸನದಲ್ಲಿ ಬಂಧಿಸಲಾಗಿದೆ. 

2 suspects Arrested in Hassan
Author
Bengaluru, First Published Jan 21, 2020, 1:28 PM IST
  • Facebook
  • Twitter
  • Whatsapp

ಹಾಸನ [ಜ.21]: ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಬೆನ್ನಲ್ಲೇ ಅನುಮಾನಾಸ್ಪದವಾಗಿ ಕಂಡು ಬಂದ ಇಬ್ಬರು ವ್ಯಕ್ತಿಗಳನ್ನು ಹಾಸನದಲ್ಲಿ ಅರೆಸ್ಟ್ ಮಾಡಲಾಗಿದೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಬಸ್ ನಿಲ್ದಾಣದಲ್ಲಿ ಶಂಕಾಸ್ಪದವಾಗಿ ಬ್ಯಾಗ್ ಹಿಡಿದು ಸುಳಿದಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಬಸ್ ನಿಲ್ದಾಣದಲ್ಲಿದ್ದ ಜನರು ಇವರ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ವೇಳೆ ಸ್ಥಳಕ್ಕೆ ಆಗಮಿಸಿದ ಎಸ್ ಪಿ ರಾಮ್ ನಿವಾಸ್ ಸೇಪಟ್ ತಂಡ ಇಬ್ಬರನ್ನು ಬಂಧಿಸಿದೆ. 

ಬಾಂಬ್ ನಿಷ್ಕ್ರಿಯಗೊಳಿಸಿದ ತಜ್ಞರು: ನಿಟ್ಟುಸಿರು ಬಿಟ್ಟ ಮಂಗಳೂರಿಗರು

ಬಂಧಿತರಿಬ್ಬರನ್ನು ವಿಚಾರಣೆ ನಡೆಸಿದ್ದು, ಈ ವೇಳೆ ಅವರ ಬ್ಯಾಗಿನಲ್ಲಿ ಮಾರಕಾಸ್ತ್ರಗಳು ಪತ್ತೆಯಗಿದ್ದು, ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಇದೀಗ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. 

'ಮುಸ್ಲಿಮರೇ ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗ್ಬೇಡಿ'..! ಆಡಿಯೋ ವೈರಲ್.

ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಬೆನ್ನಲ್ಲೇ ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಟೈಟ್ ಸೆಕ್ಯೂರಿಟಿ ಅಳವಡಿಸಲಾಗಿದೆ. ಶಂಕಾಸ್ಪದ ವ್ಯಕ್ತಿಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

Follow Us:
Download App:
  • android
  • ios