2 ರೂಪಾಯಿ ಮೊಟ್ಟೆಗೆ ಮುಗಿಬಿದ್ರು ಜನ..! ಕ್ಷಣ ಹೊತ್ತಲ್ಲಿ ಖಾಲಿ ಆಯ್ತು 90 ಸಾವಿರ ಮೊಟ್ಟೆ

ಕೊರೊನಾ, ಕೊರೋನಾ ಎಲ್ಲೆಲ್ಲಿಯೂ ಇದರ ಮಾಯೆಯಿಂದ ಮನುಷ್ಯನ ಬದುಕು ಮೂರಾಬಟ್ಟೆಯಾಗಿದೆ. ಹೊರಗೆ ಬರೋ ಹಾಗಿಲ್ಲ, ಬೇಕಾದನ್ನ ತಿನ್ನೊ ಹಾಗಿಲ್ಲ ಎಂಬ ಸ್ಥಿತಿಯ ನಡುವೆಯೂ ಪುಕ್ಸಟ್ಟೆಸಿಗುತ್ತೆ ಅಂದ್ರೆ ನನಗೂ ಇರಲಿ, ನನ್ನ ಕುಟುಂಬದವರಿಗೆಲ್ಲರಿಗೂ ಇರಲಿ ಎಂಬ ಮನಸ್ಥಿತಿ ಇರುವುದುಂಟು. ಇಂತಹ ಘಟನೆ ಹಾಸನದಲ್ಲಿ ನಡೆದಿದೆ.

2 Rupees for egg in hassan people rush to buy

ಚನ್ನರಾಯಪಟ್ಟಣ(ಮಾ.21): ಕೊರೊನಾ, ಕೊರೋನಾ ಎಲ್ಲೆಲ್ಲಿಯೂ ಇದರ ಮಾಯೆಯಿಂದ ಮನುಷ್ಯನ ಬದುಕು ಮೂರಾಬಟ್ಟೆಯಾಗಿದೆ. ಹೊರಗೆ ಬರೋ ಹಾಗಿಲ್ಲ, ಬೇಕಾದನ್ನ ತಿನ್ನೊ ಹಾಗಿಲ್ಲ ಎಂಬ ಸ್ಥಿತಿಯ ನಡುವೆಯೂ ಪುಕ್ಸಟ್ಟೆಸಿಗುತ್ತೆ ಅಂದ್ರೆ ನನಗೂ ಇರಲಿ, ನನ್ನ ಕುಟುಂಬದವರಿಗೆಲ್ಲರಿಗೂ ಇರಲಿ ಎಂಬ ಮನಸ್ಥಿತಿ ಇರುವುದುಂಟು.

ಪಟ್ಟಣದ ಮೊಟ್ಟೆವ್ಯಾಪಾರಿ ವಸಂತಕುಮಾರ್‌ ಎಂಬುವರು ಪಟ್ಟಣದ ಹಳೇ ಬಸ್‌ನಿಲ್ದಾಣದಲ್ಲಿ ಹತ್ತಾರು ವರ್ಷಗಳಿಂದ ಮೊಟ್ಟೆಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಹೋಲ್‌ಸೆಲ್‌ ದರದಲ್ಲಿ ಅಂಗಡಿಗಳಿಗೆ, ಬಿರಿಯಾನಿ, ಕುಷ್ಕಮೊಟ್ಟೆಕಾರ್ನರ್‌ಗಳಿಗೆ, ಹೊಟೇಲ್‌ಗಳಿಗೆ ಇವರೇ ಮೊಟ್ಟೆಸರಬರಾಜುದಾರರು.

ಕೋಳಿಗೆ 25 ರು., ಮೊಟ್ಟೆಗೆ 2 ರು. ಆದರೂ ಕೇಳೋರಿಲ್ಲ!

ಮಹಮಾರಿ ಕೊರೋನಾದಿಂದಾಗಿ ಪಟ್ಟಣದಲ್ಲಿ ಎಲ್ಲ ಬೀದಿಬದಿಯ ತಿಂಡಿ ಗಾಡಿಗಳು, ಕುಷ್ಕಮೊಟ್ಟೆಅಂಗಡಿಗಳನ್ನು ನಿರ್ಬಂಧಿಸಿರುವುದು ಮತ್ತು ಕೋಳಿಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ ಎಂಬ ಪ್ರಚಾರದಿಂದ ಕೋಳಿ, ಮತ್ತು ಮೊಟ್ಟೆಕೊಳ್ಳುವವರಿಲ್ಲದಂತಾಗಿತ್ತು. ಇನ್ನೂ ವ್ಯಾಪಾರಿ ವಸಂತಕುಮಾರ್‌ ಬಳಿ ಇದ್ದ ಸಾವಿರಾರು ಮೊಟ್ಟೆಯನ್ನು ಮಾರಾಟವಾಗದೇ ಉಳಿಯುವ ಸ್ಥಿತಿ ನಿರ್ಮಾಣವಾಗಿತ್ತು.

ಸದ್ಯ ಇರುವ ಮೊಟ್ಟೆಗಳನ್ನು ಹೇಗಾದರೂ ಮಾರಾಟ ಮಾಡಬೇಕೆಂದು ನಿರ್ಧರಿಸಿದ ಅವರು ಗುರುವಾರ ಸಂಜೆ ಮೊಟ್ಟೆಯೊಂದಕ್ಕೆ 2 ರು. ದರ ನಿಗದಿ ಮಾಡಿ ಮಾರಾಟ ಮಾಡಲು ಮುಂದಾದ ಕೆಲವೇ ಕ್ಷಣಗಳಲ್ಲಿ ನೂಕನೂಗಲು ಸೃಷ್ಠಿಯಾಗಿ 6 ಸಾವಿರ ಮೊಟ್ಟೆಗಳನ್ನು ಮಾರಾಟ ಮಾಡಿದರು.

90 ಸಾವಿ​ರಕ್ಕೂ ಹೆಚ್ಚು ಮೊಟ್ಟೆಮಾರಾ​ಟ:

ಶುಕ್ರವಾರದಂದು ಕೂಡ ಬೆಳಗ್ಗೆಯಿಂದಲೇ ಸ್ಟಾಕ್‌ ಇದ್ದ ಮೊಟ್ಟೆಮಾರಲು ಪ್ರಾರಂಭಿಸಿ2 ರೂಪಾಯಿಗೊಂದರಂತೆ ಮಾರಾಟ ಮಾಡುತ್ತಿರುವ ವಿಚಾರ ಒಬ್ಬರಿಂದೊಬ್ಬರಿಗೆ ಗಾಳಿಯಂತೆ ಹರಡಿ ಜನ ಮುಗಿಬಿದ್ದ ಹಿನ್ನೆಲೆಯಲ್ಲಿ ಖಾಲಿಯದಂತೆಲ್ಲಾ ಬೇಡಿಕೆ ಹೆಚ್ಚಾದ ಸಲುವಾಗಿ ಕೋಳಿ ಫಾರಂಗಳಿಂದ ಮತ್ತಷ್ಟುಮೊಟ್ಟೆಗಳನ್ನು ತರಿಸಿ 90 ಸಾವಿರಕ್ಕೂ ಹೆಚ್ಚು ಮೊಟ್ಟೆಗಳು ಮಾರಾಟ ಮಾಡಿ ದಾಖಲೆ ನಿರ್ಮಾಣವಾಗಿದೆ.

ಮೊಟ್ಟೆ, ಮಾಂಸದಿಂದ ಬರುತ್ತಾ ಕೊರೋನಾ ..?

ಕಡಿಮೆ ದರಕ್ಕೆ ಸಿಗುತ್ತದೆ ಎಂದರೇ ಮೊದಲು ಕೊಂಡು ತಿಂದರಾಯಿತ್ತು. ಕೋರೊನಾ ಬಂದ ನಂತರ ನೋಡಿಕೊಂಡರಾಯಿತ್ತು ಎಂಬ ಮನಸ್ಥಿತಿ ನಮ್ಮ ಜನರದ್ದು. ಒಟ್ಟಿನಲ್ಲಿ ಕೋರೊನಾದ ಮಾಯೆ ತಾಲೂಕಿನ ಜನ ಭರಪೂರ ಮೊಟ್ಟೆ ಕೊಂಡೊಯ್ದು ತಮ್ಮ ಭರ ಇಂಗಿಸಿಕೊಂಡಿದ್ದು ಮಾತ್ರ ತಪ್ಪಲಿಲ್ಲ.2 Rupees for egg in hassan

Latest Videos
Follow Us:
Download App:
  • android
  • ios