Asianet Suvarna News Asianet Suvarna News

Shivamogga: ಕ್ರೀಡಾ ಸಾಧಕರು ಪೊಲೀಸ್‌ ಇಲಾಖೆಗೆ ಸೇರಲು ಶೇ.2 ಮೀಸಲಾತಿ

ಕ್ರೀಡೆಯಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಪೋಲಿಸ್‌ ಇಲಾಖೆಯಲ್ಲಿ ಶೇ.2 ರಷ್ಟುಮೀಸಲಾತಿಯನ್ನು ಮಾಡಲಾಗಿದೆ. ಪ್ರಥಮ ಬಾರಿಗೆ ರಾಜ್ಯದಲ್ಲಿ ಜಾರಿಗೆ ಬಂದಿರುವ ಈ ಮೀಸಲಾತಿಯಲ್ಲಿ ಪಿಎಸ್‌ಐ ಕೂಡ ಆಗಬಹುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

2 percent reservation for sportspersons to join police department says araga jnanendra gvd
Author
First Published Oct 16, 2022, 7:52 PM IST

ತೀರ್ಥಹಳ್ಳಿ (ಅ.16): ಕ್ರೀಡೆಯಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಪೋಲಿಸ್‌ ಇಲಾಖೆಯಲ್ಲಿ ಶೇ.2 ರಷ್ಟುಮೀಸಲಾತಿಯನ್ನು ಮಾಡಲಾಗಿದೆ. ಪ್ರಥಮ ಬಾರಿಗೆ ರಾಜ್ಯದಲ್ಲಿ ಜಾರಿಗೆ ಬಂದಿರುವ ಈ ಮೀಸಲಾತಿಯಲ್ಲಿ ಪಿಎಸ್‌ಐ ಕೂಡ ಆಗಬಹುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ತಾಲೂಕಿನ ಗುಡ್ಡೇಕೇರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಪ್ರೌಢಶಾಲಾ ಮಟ್ಟದ ಖೋ ಖೋ ಪಂದ್ಯಾವಳಿಯನ್ನು ಉದ್ಘಾಟಿಸಿ, ಈ ಸೌಲಭ್ಯವನ್ನು ಪಡೆಯಲು ವಿದ್ಯಾರ್ಥಿ ಜೀವನದ ಆರಂಭದಿಂದಲೇ ಕ್ರೀಡಾ ಮನೋಭಾವದಿಂದ ಕ್ರೀಡಾ ಸಾಮರ್ಥ್ಯವನ್ನೂ ಹೆಚ್ಚಿಸಿಕೊಳ್ಳಬೇಕಿದೆ. 

ನಾಗಾಲೋಟದಿಂದ ಓಡುತ್ತಿರುವ ಜಗತ್ತಿನಲ್ಲಿ ವಿದ್ಯಾರ್ಥಿ ಜೀವನವನ್ನು ಸಾರ್ಥಕಪಡಿಸಿಕೊಳ್ಳುವ ಜೊತೆ ಜೊತೆಗೆ ದೈಹಿಕ ಮತ್ತು ಬೌದ್ಧಿಕ ಸಾಮರ್ಥ್ಯವನ್ನೂ ಹೆಚ್ಚಿಕೊಳ್ಳಬೇಕಿದೆ ಎಂದೂ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಕ್ರೀಡೆಗೆ ವಿಶೇಷ ಉತ್ತೇಜನವನ್ನು ನೀಡುತ್ತಿದ್ದಾರೆ. ಇದರ ಪರಿಣಾಮ ಇತ್ತೀಚೆಗೆ ನಡೆದ ಕಾಮನ್‌ ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಮಹತ್ವದ ಸಾಧನೆ ಮೆರೆದಿದ್ದಾರೆ. ಆಗುಂಬೆ ಭಾಗದಲ್ಲಿ ಶಿಕ್ಷಣಕ್ಕೆ ವಿಶೇಷ ಸೇವೆ ಸಲ್ಲಿಸಿದ್ದ ಕಾಡಮ್ಮ ಹೆಗ್ಗಡ್ತಿ ಪ್ರಾತಃಸ್ಮರಣೀಯರು. ಆಕೆ ಆರಂಭಿಸಿರುವ ಈ ಶಾಲೆ ಇಂದು ರಾಜ್ಯದಲ್ಲಿಯೇ ಒಂದು ಮಾದರಿ ಸರ್ಕಾರಿ ಶಾಲೆಯಾಗಿದೆ ಎಂದೂ ಮೆಚ್ಚುಗೆ ವ್ಯಕ್ತಪಡಿಸಿದರು. 

ಎಲೆಚುಕ್ಕಿ ರೋಗ ಹಿನ್ನೆಲೆ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ: ಆರಗ ಜ್ಞಾನೇಂದ್ರ

ರಾಷ್ಟ್ರೀಯ ಖೋ ಖೋ ಆಟಗಾರರಾಗಿದ್ದು, ಈಚೆಗೆ ನಿಧನರಾಗಿದ್ದ ವಿನಯ್‌ ಪ್ರತಿಭಾವಂತನಾಗಿದ್ದು, ಈ ಕ್ರೀಡಾಪಟು ಪಿಎಸ್‌ಐ ಆಗುವ ಹಂಬಲ ಹೊಂದಿದ್ದರು ಎಂದರು. ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಅಶೋಕ್‌ ಓಣಿಮನೆ, ತಾಪಂ ಇಓ ಶೈಲಾ ಎನ್‌., ಬಿಇಓ ಆನಂದಕುಮಾರ್‌, ಆಗುಂಬೆ ಗ್ರಾಪಂ ಉಪಾಧ್ಯಕ್ಷ ರಾಘವೇಂದ್ರ, ಸದಸ್ಯ ಶಶಾಂಕ ಹೆಗ್ಡೆ, ಮಾಜಿ ಅದ್ಯಕ್ಷ ಹಸಿರುಮನೆ ನಂದನ್‌, ತಾಪಂ ಮಾಜಿ ಸದಸ್ಯೆ ವೀಣಾ ಗಿರೀಶ್‌, ಶಾಲೆ ಮುಖ್ಯಶಿಕ್ಷಕ ಮಂಜುಬಾಬು, ರಾಷ್ಟ್ರೀಯ ಖೋ ಖೋ ಆಟಗಾರ ಮಹೇಶ್‌ ಇತರರು ಇದ್ದರು. ಬಾಲಕ ಬಾಲಕಿಯರ ತಲಾ 7 ತಂಡಗಳು ಭಾಗವಹಿಸಿದ್ದವು.

ಫಲಿತಾಂಶ: ಬಾಲಕರು ವಿಭಾಗದಲ್ಲಿ ಭದ್ರಾವತಿಯ ಸೈಂಟ್‌ ಚಾರ್ಲ್ಸ್ ಪ್ರೌಢಶಾಲೆ- ಪ್ರಥಮ, ತೀರ್ಥಹಳ್ಳಿ ತಾಲೂಕು ಮತ್ತಿಗಾರು- ದ್ವಿತೀಯ. ಬಾಲಕಿಯರ ವಿಭಾಗದಲ್ಲಿ ಸೊರಬ ತಾಲೂಕಿನ ಬಿಳ್ವಾಣಿ ಸರ್ಕಾರಿ ಪ್ರೌಢಶಾಲೆ ಪ್ರಥಮ ಹಾಗೂ ಆತಿಥೇಯ ತಂಡ ತೀರ್ಥಹಳ್ಳಿ ತಾಲೂಕಿನ ಗುಡ್ಡೇಕೇರಿಯ ಸರ್ಕಾರಿ ಪ್ರೌಢಶಾಲೆ ದ್ವಿತೀಯ ಸ್ಥಾನಗಳನ್ನು ಪಡೆದಿವೆ.

ಅಡಕೆ ಪರ ಸುಪ್ರೀಂಕೋರ್ಟಲ್ಲಿ ಸಮರ್ಥ ವಾದಕ್ಕೆ ರಾಜ್ಯ ಸಿದ್ಧತೆ: ಅಡಕೆ ಕ್ಯಾನ್ಸರ್‌ಕಾರಕವಲ್ಲ ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಸಮರ್ಥವಾಗಿ ಪ್ರತಿಪಾದಿಸುವ ಸಂಬಂಧ ತಜ್ಞರು, ರೈತರು ಹಾಗೂ ಸಂಶೋಧಕರ ಜತೆ ರಾಜ್ಯ ಗೃಹ ಸಚಿವ ಹಾಗೂ ಅಡಕೆ ಟಾಸ್‌್ಕ ಪೋರ್ಸ್‌ ಅಧ್ಯಕ್ಷ ಆರಗ ಜ್ಞಾನೇಂದ್ರ ಸಮಾಲೋಚನೆ ನಡೆಸಿದ್ದಾರೆ. ನಗರದಲ್ಲಿ ರೈತರು, ಸಂಶೋಧಕರು ಹಾಗೂ ತಜ್ಞರ ಜತೆ ಚರ್ಚಿಸಿದ ಸಚಿವರು ಈ ವಿಷಯಕ್ಕೆ ಸಂಬಂಧಿಸಿದಂತೆ ನಡೆಸಲಾದ ಸಂಶೋಧನೆಗಳು, ಅವುಗಳ ಫಲಿತಾಂಶಗಳು ಹಾಗೂ ವರದಿಗಳ ಬಗ್ಗೆ ಮಾಹಿತಿ ಪಡೆದರು.

ಚುನಾವಣೆ ನಂತರ ರಾಜ್ಯದಲ್ಲೂ ಕಾಂಗ್ರೆಸ್ ಹೆಸರಿರಲ್ಲ; ಬಿ.ವೈ.ರಾಘವೇಂದ್ರ

ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣಾ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಸಂಶೋಧನಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಅಡಕೆ ಬೆಳೆಗೆ ಎಲೆ ಚುಕ್ಕೆ ರೋಗ ಕಾಣಿಸಿಕೊಂಡಿದ್ದು, ಶೃಂಗೇರಿ, ತೀರ್ಥಹಳ್ಳಿ ಹಾಗೂ ಕೊಪ್ಪ ತಾಲೂಕಿನಲ್ಲಿ ಆ ರೋಗವು ವ್ಯಾಪಕವಾಗಿ ಹರಡುತ್ತಿದೆ. ಇದರಿಂದ ಅಡಕೆ ಬೇಸಾಯಗಾರರಲ್ಲಿ ಆತಂಕ ಮೂಡಿದೆ. ಬೆಳೆಗಾರರಿಗೆ ಆತ್ಮವಿಶ್ವಾಸ ತುಂಬಬೇಕಾದ ಅಗತ್ಯವಿದೆ ಎಂದು ಸಚಿವರು ತಜ್ಞರಿಗೆ ಸಲಹೆ ನೀಡಿದರು. ಎಲೆ ಚುಕ್ಕೆ ರೋಗ ನಿಯಂತ್ರಣ ಮಾಡಲು ರೈತರಿಗೆ ಔಷಧ ಖರೀದಿಗೆ ಸರ್ಕಾರ ಆರ್ಥಿಕ ನೆರವು ಘೋಷಿಸಿದೆ. ಈ ಯೋಜನೆಯನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದರು.

Follow Us:
Download App:
  • android
  • ios