Asianet Suvarna News Asianet Suvarna News

ದಾವಣಗೆರೆಯಲ್ಲಿ ಮತ್ತೆರೆಡು ಹೊಸ ಕೇಸ್; 11 ಮಂದಿ ಡಿಸ್ಚಾರ್ಜ್

ಬೆಣ್ಣೆ ನಗರಿ ದಾವಣಗೆರೆಯಲ್ಲಿ ಸೋಮವಾರ(ಜೂ.29) ಮತ್ತೆರಡು ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಸಮಾಧಾನಕರ ಸಂಗತಿಯೆಂದರೆ 11 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

2 new COVID 19 case Confirmed 11 patient Cured in Davanagere on June 29
Author
Davanagere, First Published Jun 30, 2020, 11:15 AM IST

ದಾವಣಗೆರೆ(ಜೂ.30): ಜಿಲ್ಲೆಯಲ್ಲಿ ಹೊಸದಾಗಿ 2 ಪಾಸಿಟಿವ್‌ ಪ್ರಕರಣಗಳು ವರದಿಯಾದರೆ, ಸೋಂಕಿನಿಂದ ಸಂಪೂರ್ಣ ಗುಣಮುಖರಾದ 11 ಜನರು ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತೆ 33ಕ್ಕೆ ಇಳಿದಿದೆ.

ಹೊನ್ನಾಳಿ ತಾಲೂಕಿನ ದೊಡ್ಡೇರಿ ಗ್ರಾಮದ 38 ವರ್ಷದ ಪುರುಷ (ಪಿ13222)ನಲ್ಲಿ ಐಎಲ್‌ಐ ಕೇಸ್‌ನಡಿ ಸೋಂಕು ಇರುವುದು ದೃಢಪಟ್ಟಿದೆ. ಅದೇ ತಾಲೂಕಿನ ಚಿನ್ನಿಕಟ್ಟೆಗ್ರಾಮದ 63 ವರ್ಷದ ವೃದ್ಧ(13223)ನು ಬೆಂಗಳೂರು ಪ್ರವಾಸ ಹಿನ್ನೆಲೆಯಿಂದ ಸೋಂಕಿಗೆ ತುತ್ತಾಗಿದ್ದಾರೆ. ಚನ್ನಗಿರಿಯ ಕುಂಬಾರ ಬೀದಿಯ 38 ವರ್ಷದ ಪುರುಷ (ಪಿ-8490), 30 ವರ್ಷದ ಮಹಿಳೆ(8491), ಹರಿಹರದ ಅಗಸರ ಬೀದಿಯ 12 ವರ್ಷದ ಬಾಲಕಿ (9216), 55 ವರ್ಷದ ಮಹಿಳೆ (9217), 7 ವರ್ಷದ ಬಾಲಕಿ (9218), 50 ವರ್ಷದ ಪುರುಷ (9219), 40 ವರ್ಷದ ಮಹಿಳೆ (9220), ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದ 8 ವರ್ಷದ ಬಾಲಕಿ (9221), ಹರಿಹರದ 16 ವರ್ಷದ ಬಾಲಕಿ (9222), ರಾಜನಹಳ್ಳಿಯ 70 ವರ್ಷದ ಪುರುಷ (9223), 32 ವರ್ಷದ ಮಹಿಳೆ (9224)ಯು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಒಂದೇ ಕುಟುಂಬದ 8 ಮಂದಿಗೆ ಕೊರೋನಾ

ಜಿಲ್ಲೆಯಲ್ಲಿ ಈವರೆಗೆ ಒಟ್ಟು 297 ಪಾಸಿಟಿವ್‌ ಪ್ರಕರಣ ವರದಿಯಾಗಿವೆ. ಈ ಪೈಕಿ 7 ಜನ ಸಾವನ್ನಪ್ಪಿದ್ದಾರೆ. 257 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯಕ್ಕೆ ಜಿಲ್ಲೆಯಲ್ಲಿ 33 ಸಕ್ರಿಯ ಕೇಸ್‌ಗಳು ಇವೆ. ಪಾಸಿಟಿವ್‌ ಕೇಸ್‌ ಬಂದ ಒಟ್ಟು 33 ಕಂಟೈನ್‌ಮೆಂಟ್‌ಗಳನ್ನು ಜಿಲ್ಲೆಯಲ್ಲಿ ಘೋಷಿಸಿದೆ.

ಆನೆಕೊಂಡ-2, ಬಸವರಾಜ ಪೇಟೆ, ಜಾಲಿ ನಗರ, ದೇವರಾಜ ನಗರ, ಎಸ್‌.ಎಸ್‌. ಲೇಔಟ್‌, ಭಗತ್‌ ಸಿಂಗ್‌ ನಗರ, ಪಿಜೆ ಬಡಾವಣೆಯ ನಾಡಿಗೇರ ಕಣ್ಣಿನ ಆಸ್ಪತ್ರೆ, ಎಸ್‌ಪಿಎಸ್‌ ‘ಡಿ’ ಬ್ಲಾಕ್‌ನ ಚೌಡೇಶ್ವರಿ ನಗರ, ಬಾಬು ಜಗಜೀವನರಾಂ ನಗರ, ಕೆಟಿಜೆ ನಗರ 12ನೇ ಕ್ರಾಸ್‌, ಸಿಜಿ ಆಸ್ಪತ್ರೆ ಕ್ವಾರ್ಟಸ್‌, ಭಗತ ಸಿಂಗ್‌ ನಗರ 1ನೇ ಕ್ರಾಸ್‌, ಆಂಜನೇಯ ಬಡಾವಣೆ, ಹಗೇದಿಬ್ಬ ಸರ್ಕಲ್‌, ಹೊಂಡದ ಸರ್ಕಲ್‌, ಹರಿಹರದ ಟಿಬಿ ಬಡಾವಣೆ 1ನೇ ಮೇನ್‌, ತಾಜ್‌ ಪ್ಯಾಲೇಸ್‌, ಬೀಡಿ ಲೇಔಟ್‌, ಮಹಾರಾಜ ಪೇಟೆ, ಶೇಖರಪ್ಪ ನಗರ, ವಿನೋಬ ನಗರ, ಟಿಬಿ ಬಡಾವಣೆ 13ನೇ ಕ್ರಾಸ್‌, ಮುಸ್ತಫಾ ನಗರ, ಆವರಗೊಳ್ಳ, ನೇರ್ಲಿಗೆ, ಹರಿಹರ ತಾಲೂಕಿನ ರಾಜನಹಳ್ಳಿ, ಹರಿಹರದ ಅಗಸರ ಬೀದಿ, ಇಂದಿರಾ ನಗರ, ಎಕೆ ಕಾಲನಿ, ಚನ್ನಗಿರಿ ಗೌಡರ ಬೀದಿ, ಕುಂಬಾರ ಬೀದಿ, ಗಂಗಾ ನಗರ ಕಂಟೈನ್‌ಮೆಂಟ್‌ಗಳಾಗಿವೆ.

Follow Us:
Download App:
  • android
  • ios