ಕಲಬುರಗಿ, (ಮೇ.27): ಬುಧವಾರ ಕಲಬುರಗಿ‌ ಜಿಲ್ಲೆಯಲ್ಲಿ ಇಬ್ಬರು 80 ವರ್ಷದ ಹಿರಿಯ ಜೀವಿಗಳು ಕೊರೋನಾ ಸೋಂಕಿನಿಂದ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.

ಕಲಬುರಗಿ ನಗರದ ಸರಾಫ್ ಬಜಾರ್ (ಪುಟಾಣಿ ಗಲ್ಲಿ) ಪ್ರದೇಶದ 80 ವರ್ಷದ ವೃದ್ಧೆ (P-983) ಹಾಗೂ ಅಫಜಲಪೂರ ತಾಲೂಕಿನ ಅಳಗಿ (ಬಿ) ಗ್ರಾಮದ 80 ವರ್ಷದ ವೃದ್ಧ (P-1039) ಕೊರೋನಾ ವಿರುದ್ಧ ಹೋರಾಡಿ ಗುಣಮುಖರಾದವರು

ಇದರಿಂದ ಕೊರೋನಾ‌ ಪೀಡಿತ 185 ಜನರಲ್ಲಿ 75 ಜನ ಗುಣಮುಖರಾಗಿದ್ದಾರೆ. 7 ಜನ‌ ನಿಧನ ಹೊಂದಿದ್ದು, 103 ಜನರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಡಿ.ಸಿ. ಶರತ್ ಬಿ. ವಿವರಿಸಿದರು.

ಕೊರೋನಾ ವೈರಸ್​ನಿಂದ ಹಿರಿಯರಿಗೆ ಅಪಾಯ ಹೆಚ್ಚು ಎಂದು  ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇದರ ಮಧ್ಯೆ 80 ವರ್ಷದ ಇಬ್ಬರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವುದು ನಿಜಕ್ಕೂ ಸಂತಸದ ಸಂಗತಿ

ಇನ್ನು ದೇಶದಲ್ಲಿ ಮೊಟ್ಟ ಮೊದಲು ಕೊರೋನಾಗೆ ಬಲಿಯಾಗಿದ್ದು ಇದೆ ಕಲಬುರಗಿಯಲ್ಲಿ. 

ಬುಧವಾರ ಮಧ್ಯಾಹ್ನದ ಕೊರೋನಾ ಅಂಕಿ-ಅಂಶ ಇಂತಿದೆ