Asianet Suvarna News Asianet Suvarna News

18 ಜಿಲ್ಲೆಗಳಲ್ಲಿ ಮದ್ಯ ಮಾರಾಟ, ವಹಿವಾಟು ನಿಷೇಧ

ರಾಜ್ಯದ 18 ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. 

2 Days Liquor Sale Ban in 18 Districts Of Karnataka snr
Author
Bengaluru, First Published Oct 27, 2020, 8:21 AM IST

ಬೆಂಗಳೂರು (ಅ.27):  ವಿಧಾನ ಪರಿಷತ್ತಿನ ತಲಾ ಎರಡು ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರಕ್ಕೆ ಅ. 28 ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸಂಬಂಧ ಪಟ್ಟ ಕ್ಷೇತ್ರಗಳ ವ್ಯಾಪ್ತಿಯಲ್ಲಿ (18 ಜಿಲ್ಲೆಗಳಲ್ಲಿ) ಎರಡು ದಿನಗಳ ಕಾಲ ಮದ್ಯ ಮಾರಾಟ ನಿಷೇಧಿಸಲಾಗಿದೆ.

 ಬೆಂಗಳೂರು ಹಾಗೂ ಈಶಾನ್ಯ ಶಿಕ್ಷಕ ಕ್ಷೇತ್ರ, ಪಶ್ಚಿಮ ಮತ್ತು ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಅ. 28ರಂದು ಚುನಾವಣೆ ನಡೆಯಲಿದೆ. 

ಶಿರಾ ಬೈ ಎಲೆಕ್ಷನ್: ಸಂದರ್ಶನದಲ್ಲಿ ಮಹತ್ವದ ವಿಷಯಗಳನ್ನ ಬಿಚ್ಚಿಟ್ಟ ವಿಜಯೇಂದ್ರ ..

ಚುನಾವಣೆ ನೀತಿ ಸಂಹಿತೆ ಅನ್ವಯ ಅ.26ರ ಸಂಜೆ 6 ಗಂಟೆಯಿಂದ 28ರ ಸಂಜೆ 6 ಗಂಟೆಯವರೆಗೆ ಸಂಬಂಧಪಟ್ಟಕ್ಷೇತ್ರಗಳಲ್ಲಿ ಮದ್ಯ ಮಾರಾಟ ಮತ್ತು ಸರಬರಾಜು ನಿಷೇಧಿಸಲಾಗಿದೆ. ಅಕ್ರಮ ಮದ್ಯ ಸಾಗಣೆಯನ್ನು ನಿಷೇಧಿಸಲಾಗಿದೆ. ಈ ಕುರಿತು ಆಯಾ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

Follow Us:
Download App:
  • android
  • ios