Asianet Suvarna News Asianet Suvarna News

BJP Karnataka :ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇಬ್ಬರು ಬಿಜೆಪಿ ಮುಖಂಡರು

  • ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇಬ್ಬರು ಬಿಜೆಪಿ ಮುಖಂಡರು
  • ತುಮಕೂರು ವಿಭಾಗಕ್ಕೆ ಲಕ್ಷ್ಮೇಶ್‌ - ಮಧುಗಿರಿ ವಿಭಾಗಕ್ಕೆ ಬಿ.ಕೆ. ಮಂಜುನಾಥ್‌ ನೇಮಕ
2 BJP Presidents Appointed in Tumakuru District snr
Author
Bengaluru, First Published Jan 5, 2022, 11:56 AM IST

ತುಮಕೂರು (ಜ.05):  ಪಕ್ಷದ ಸಂಘಟನೆ, ನಿರ್ವಹಣೆ ದೃಷ್ಟಿಯಿಂದ ರಾಜ್ಯದ ಎರಡನೇ ಅತಿದೊಡ್ಡ ಜಿಲ್ಲೆಯಾದ ತುಮಕೂರು (Tumakuru) ಜಿಲ್ಲೆಗೆ ಇದೇ ಮೊದಲ ಬಾರಿಗೆ ಇಬ್ಬರು ಅಧ್ಯಕ್ಷರನ್ನು ನೇಮಿಸಲಾಗಿದೆ.  ಕಳೆದ 2021ರ ಸೆಪ್ಟೆಂಬರ್‌ನಲ್ಲಿ ಬಿಜೆಪಿ (BJP) ಮಾಜಿ ಶಾಸಕ ಬಿ. ಸುರೇಶ್‌ ಗೌಡರ (Suresh Gowda) ದಿಢೀರ್‌ ರಾಜೀನಾಮೆಯಿಂದ (Resignation) ತೆರವಾಗಿದ್ದ ತುಮಕೂರು (Tumakuru) ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ (BJP President Post ) ಸುಮಾರು 3 ತಿಂಗಳ ನಂತರ ಅಧ್ಯಕ್ಷರನ್ನು ನೇಮಿಸಲಾಗಿದೆ. ಬಿಜೆಪಿ (BJP) ಕೋರ್‌ ಕಮಿಟಿ ಸಭೆಯಲ್ಲಿ ತುಮಕೂರು ಜಿಲ್ಲಾ ಬಿಜೆಪಿ ಘಟಕಕ್ಕೆ ಇಬ್ಬರು ಅಧ್ಯಕ್ಷರನ್ನು ನೇಮಿಸಲು ತೀರ್ಮಾನ ಕೈಗೊಳ್ಳಲಾಗಿದ್ದು, ಅದರಂತೆ ತುಮಕೂರು ವಿಭಾಗಕ್ಕೆ ಲಕ್ಷ್ಮೇಶ್‌ ಹಾಗೂ ಮಧುಗಿರಿ ವಿಭಾಗಕ್ಕೆ ಬಿ.ಕೆ. ಮಂಜುನಾಥ್‌ ಅವರನ್ನು ನೇಮಿಸಲಾಗಿದೆ.

ತುಮಕೂರು (Tumakuru) ನಗರ, ತುಮಕೂರು ಗ್ರಾಮಾಂತರ, ಕುಣಿಗಲ್‌, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿ ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ತಾಲೂಕುಗಳಿಗೆ ಲಕ್ಷ್ಮೇಶ್‌ ಅವರನ್ನು, ಮಧುಗಿರಿ, ಕೊರಟಗೆರೆ, ಶಿರಾ, ಪಾವಗಡ ವಿಧಾನಸಭಾ (Assembly) ಕ್ಷೇತ್ರಗಳನ್ನೊಳಗೊಂಡ ತಾಲೂಕುಗಳಿಗೆ ಬಿ.ಕೆ. ಮಂಜುನಾಥ್‌ (BK Manjunath) ಅವರನ್ನು ನೇಮಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ (Nalin Kumar kateel) ಆದೇಶ ಹೊರಡಿಸಿದ್ದಾರೆ.

ಹೊಸ ಸಂಪ್ರದಾಯ :  ಸೆಪ್ಟೆಂಬರ್‌ನಲ್ಲಿ ತೆರವಾಗಿದ್ದ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ (BJP President post) ಹೊಸಬರನ್ನು ಆಯ್ಕೆ ಮಾಡಲು ಪಕ್ಷದೊಳಗೆ ಸಾಕಷ್ಟುಗೊಂದಲ ಉಂಟಾಗಿತ್ತು. ಕಳೆದ ವಿಧಾನ ಪರಿಷತ್‌ ಚುನಾವಣೆಯ (MLC Election ) ವೇಳೆಗಾದರೂ ಹೊಸ ಅಧ್ಯಕ್ಷರನ್ನು ನೇಮಿಸುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿತ್ತು. ಬಿಜೆಪಿ ಅಧ್ಯಕ್ಷಗಾದಿಗೆ ಹೆಬ್ಬಾಕ ರವಿ (Hebbaka Ravi) ಅವರ ಹೆಸರು ದೊಡ್ಡ ಮಟ್ಟದಲ್ಲಿ ಕೇಳಿ ಬಂದಿತ್ತು. ಇನ್ನೇನು ಆದೇಶ ಹೊರಡಿಸುವುದಷ್ಟೆ ಬಾಕಿ ಎಂಬ ವಾತಾವರಣ ಸೃಷ್ಟಿ ಯಾಗಿತ್ತು. ಆದರೆ ಆ ಎಲ್ಲಾ ನಿರೀಕ್ಷೆಗಳು ಹುಸಿಯಾಗಿ ಹೊಸಬರನ್ನು ಹೈ ಕಮಾಂಡ್‌ ಆಯ್ಕೆ ಮಾಡಿದೆ. ಅದು ತುಮಕೂರು ಹಾಗೂ ಮಧುಗಿರಿ ವಿಭಾಗಕ್ಕೆ ಅಧ್ಯಕ್ಷರನ್ನು ನೇಮಿಸುವುದರೊಂದಿಗೆ ಹೊಸ ಸಂಪ್ರದಾಯವನ್ನು ಬಿಜೆಪಿ ಹೈ ಕಮಾಂಡ್‌  ಹುಟ್ಟಿಹಾಕಿದೆ.

ಬಿ.ಕೆ. ಮಂಜುನಾಥ್‌ಗೆ ಡಬಲ್‌ ಧಮಾಕ:  ಈ ಇಬ್ಬರು ಬಿಜೆಪಿ (BJP)  ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಅದರಲ್ಲೂ ಮಧುಗಿರಿ ವಿಭಾಗಕ್ಕೆ ಆಯ್ಕೆಯಾಗಿರುವ ಮಂಜುನಾಥ್‌ ಅವರು ಕಳೆದ ಬಾರಿ ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು.

ಆದರೆ ಕೊನೆಗಳಿಗೆಯಲ್ಲಿ ಪಕ್ಷದ ಹೈ ಕಮಾಂಡ್‌ ರಾಜೇಶ ಗೌಡರಿಗೆ ನೀಡಿದ್ದರಿಂದ ಬಿ.ಕೆ. ಮಂಜುನಾಥ್‌ಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿತ್ತು. ಈಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ಒಂದರ್ಥದಲ್ಲಿ ಡಬಲ್‌ ಧಮಾಕ. ಮಧುಗಿರಿ, ಪಾವಗಡ ಹಾಗೂ ಕೊರಟಗೆರೆ ಭಾಗಗಳಲ್ಲಿ ಬಿಜೆಪಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯನ್ನು (Assembly election) ದೃಷ್ಟಿಯಲ್ಲಿಟ್ಟುಕೊಂಡು ಈ ಭಾಗಗಳಲ್ಲಿ ಪಕ್ಷವನ್ನು ದೊಡ್ಡ ಮಟ್ಟದಲ್ಲಿ ಸಂಘಟನೆ ಮಾಡುವ ಉದ್ದೇಶದಿಂದ ಇಬ್ಬರು ಜಿಲ್ಲಾಧ್ಯಕ್ಷರನ್ನು (District President) ನೇಮಿಸಲಾಗಿದೆ ಎಂಬ ಚರ್ಚೆ ನಡೆದಿದೆ.

  •  ಪಕ್ಷದ ಸಂಘಟನೆ, ನಿರ್ವಹಣೆ ದೃಷ್ಟಿಯಿಂದ ರಾಜ್ಯದ ಎರಡನೇ ಅತಿದೊಡ್ಡ ಜಿಲ್ಲೆಯಾದ ತುಮಕೂರು 
  • ಜಿಲ್ಲೆಗೆ ಇದೇ ಮೊದಲ ಬಾರಿಗೆ ಇಬ್ಬರು ಅಧ್ಯಕ್ಷರನ್ನು ನೇಮಿಸಲಾಗಿದೆ.
  •  ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇಬ್ಬರು ಬಿಜೆಪಿ ಮುಖಂಡರು
  • ತುಮಕೂರು ವಿಭಾಗಕ್ಕೆ ಲಕ್ಷ್ಮೇಶ್‌ - ಮಧುಗಿರಿ ವಿಭಾಗಕ್ಕೆ ಬಿ.ಕೆ. ಮಂಜುನಾಥ್‌ ನೇಮಕ
Follow Us:
Download App:
  • android
  • ios