ಬೆಂಗಳೂರು(ಜು.16): ನಿತ್ಯ ದಾಖಲೆ ಸೃಷ್ಟಿಸುವ ಕರೋನಾರ್ಭಟ ಮುಂದುವರಿದಿದ್ದು, ಬುಧವಾರ 1,975 ಹೊಸ ಸೋಂಕು ಪತ್ತೆ ಮತ್ತು 60 ಸಾವುಗಳ ಮೂಲಕ ಸೋಂಕು ಹಾಗೂ ಸಾವು ಎರಡರಲ್ಲೂ ಏಕ ದಿನ ದಾಖಲೆ ದಾಖಲಾಗಿದೆ.

ಜು.11ರಂದು ಒಂದೇ ದಿನ 1,533 ಮಂದಿ ಹೊಸ ಸೋಂಕಿತರು ಪತ್ತೆಯಾಗಿದ್ದರು. ಮಂಗಳವಾರವಷ್ಟೇ (ಜು.14) 56 ಮಂದಿ ಮೃತಪಟ್ಟಿದ್ದರು. ಇದು ಈವರೆಗಿನ ದಾಖಲೆಯಾಗಿತ್ತು. ಬುಧವಾರ ಈ ಎರಡೂ ದಾಖಲೆಯ ಮೀರಿದ ಸಂಖ್ಯೆಯ ಸಾವು ಮತ್ತು ಸೋಂಕಿತರು ಪತ್ತೆಯಾಗಿದ್ದಾರೆ.

ಗ್ರೇಟ್ ನ್ಯೂಸ್ ಕೊಟ್ಟ ಅಧ್ಯಕ್ಷ, ಕೊರೋನಾಕ್ಕೆ ಟ್ರಂಪ್ ಚುಚ್ಚುಮದ್ದು!

ಇನ್ನು ಬುಧವಾರ ಮೃತಪಟ್ಟ60 ಮಂದಿಯ ಪೈಕಿ 41 ಮಂದಿ ಪುರುಷರು, 19 ಮಂದಿ ಮಹಿಳೆಯರಾಗಿದ್ದಾರೆ. ಅದರಲ್ಲಿ 12 ಮಂದಿ 50 ವರ್ಷದೊಳಗಿನರಾಗಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಮೃತಪಟ್ಟವರ ಸಂಖ್ಯೆ 437ಕ್ಕೆ ತಲುಪಿದೆ.

ಇಬ್ಬರು ಯುವಕರು ಬಲಿ:

ಬುಧವಾರ ಮೃತಪಟ್ಟಿರುವ 60 ಮಂದಿಯ ಪೈಕಿ 26 ಹಾಗೂ 28 ವರ್ಷದ ಇಬ್ಬರು ಯುವಕರು ಸೇರಿದ್ದಾರೆ. ಈ ಇಬ್ಬರು ಯುವಕರಿಗೆ ಸೋಂಕು ದೃಢಪಟ್ಟಿರುವುದು ಬಿಟ್ಟರೆ ಬೇರೆ ಯಾವುದೇ ಗಂಭೀರವಾದ ಆರೋಗ್ಯ ಸಮಸ್ಯೆ ಇರಲಿಲ್ಲ. ಆದರೂ ಯುವಕರು ಮೃತ ಪಟ್ಟಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.