ನ್ಯೂಯಾರ್ಕ್(ಜು.  15)  ಪ್ರಪಂಚದ ಅನೇಕ ರಾಷ್ಟ್ರಗಳು ಕೊರೋನಾಕ್ಕೆ ಔಷಧಿ ಕಂಡುಹಿಡಿಯಲು ಸಾಹಸ ಮಾಡುತ್ತಲೇ ಇವೆ.  ರಷ್ಯಾ ತಾನು ಲಸಿಕೆ ಕಂಡುಹಿಡಿದಿದ್ದೇನೆ ಎಂದು  ಹೇಳಿಕೊಂಡಿತ್ತು.   ಇದೀಗ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಾಡಿರುವ ಟ್ವೀಟ್ ಇಡೀ ಪ್ರಪಂಚದ ಕುತೂಹಲ ಕೆರಳಿಸಿದೆ.

'Great News on Vaccines!' (ಚುಚ್ಚುಮದ್ದು ವಿಚಾರದಲ್ಲಿ ದೊಡ್ಡ ಸುದ್ದಿ)  ಎಂದು ಡೋನಾಲ್ಡ್ ಟ್ರಂಪ್ ಬರೆದಿರುವುದು   ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿ ಮಾಡಿದೆ.   ಹಾಗಾದರೆ ಅಮೆರಿಕದಲ್ಲಿ ಕೊರೋನಾಕ್ಕೆ ಲಸಿಕೆ ಕಂಡು ಹಿಡಿಯಲಾಯಿತೇ?  ಎಂಬ ಪ್ರಶ್ನೆ ಕೇಳಿದೆ.

ಚುಚ್ಚುಮದ್ದು ಪ್ರಯೋಗ ಯಶಸ್ವಿ, ರಷ್ಯಾದಿಂದ ಅಧಿಕೃತ

ಕೊರೊನಾ ವೈರಸ್ ಸೋಂಕಿತರು ಅತಿ ಹೆಚ್ಚು ಇರುವ ಜಗತ್ತಿನ ರಾಷ್ಟ್ರಗಳಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಅಮೆರಿಕ ಒಂದರಲ್ಲೇ 3,547,450 ಸೋಂಕಿತರು ಇದ್ದಾರೆ. 2ನೇ ಸ್ಥಾನದಲ್ಲಿ ಬ್ರೆಜಿಲ್ ಇದ್ದು, 3ನೇ ಸ್ಥಾನ ಭಾರತಕ್ಕೆ.

ಟ್ರಂಪ್ ಅವರ ಟ್ವಿಟ್ ಗೆ ಲಕ್ಷಾಂತರ ಪ್ರತಿಕ್ರಿಯೆ ಹರಿದು ಬಂದಿದೆ, ಕೆಲವರು ಡ್ಯಾನ್ಸ್ ಮಾಡುವ ಪೋಟೋ, ವಿಡಿಯೋ ಹಾಕಿ ಇನ್ನೇನು ಯುದ್ಧ ಗೆದ್ದೇ ಬಿಟ್ಟೇವು ಎಂದು ಬೀಗಿದ್ದರೆ.. ಇನ್ನು ಕೆಲಸವರು ಸುಮ್ಮನೆ ಜನರನ್ನು ನಂಬಿಸುವ ಕೆಲಸ ಮಾಡಬೇಡಿ ಎಂದು ಕಾಲೆಳೆದಿದ್ದಾರೆ.

ಈ ವಿಚಾರಗಳು ಏನೇ ಇರಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೊಂದು ಟ್ವೀಟ್ ಮಾಡಿ ಇಂಥ ವಿಚಾರ ಹಂಚಿಕೊಂಡಿದ್ದಾರೆ ಎಂದರೆ ಅದಕ್ಕೊಂದು ಒಳ್ಳೆಯ ಹಿನ್ನೆಲೆ ಇದ್ದೆ ಇರಬೇಕು ಅಲ್ಲವೇ?