Asianet Suvarna News Asianet Suvarna News

ಚಿಕ್ಕಮಗಳೂರು: ಭಾರೀ ಮಳೆ ಮಧ್ಯೆ ಕಾಡಾನೆಗಳ ಕಾಟ, ಕಂಗಾಲಾದ ಮಲೆನಾಡಿಗರು..!

ಕಾಡಾನೆಗಳ ಹಿಂಡು ದಿನಕ್ಕೊಂದು ಹಳ್ಳಿ ಭಾಗದಲ್ಲಿ ಕಾಣಿಸಿಕೊಳ್ಳುತ್ತಿವೆ. 18 ಕಾಡಾನೆಗಳ ಹಿಂಡಿನಿಂದ ಕಾಫಿ ತೋಟಗಳು ನಾಶವಾಗಿವೆ. ಮೂಡಿಗೆರೆ ತಾಲೂಕಿನಲ್ಲಿ ಮಳೆಯಿಂದ ನಾನಾ ಅವಾಂತರಗಳು ಸೃಷ್ಟಿಯಾಗಿವೆ. 

18 elephants enter villages at mudigere in chikkamagaluru grg
Author
First Published Jul 28, 2024, 4:07 PM IST | Last Updated Jul 29, 2024, 10:10 AM IST

ಚಿಕ್ಕಮಗಳೂರು(ಜು.28):  ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆ ಮಧ್ಯೆ ಮಲೆನಾಡಲ್ಲಿ ಕಾಡಾನೆಗಳು ಕಾಟ ಕೊಡುತ್ತಿವೆ. ಹೌದು, ಜಿಲ್ಲೆಯ ಮೂಡಿಗೆರೆ ತಾಲೂಕಿನ ಪುರ, ಗಬ್ಬಳ್ಳಿ, ಕಾರ್ಬೈಲು ಗ್ರಾಮ ಸುತ್ತಮುತ್ತ  18 ಕಾಡಾನೆಗಳ ಹಿಂಡು ತಿರುಗಾಡುತ್ತಿವೆ. ಇದರಿಂದ ಮಲೆನಾಡಿಗರು ಅಕ್ಷರಶಃ ಕಂಗಾಲಾಗಿದ್ದಾರೆ. 

ಕಾಡಾನೆಗಳ ಹಿಂಡು ದಿನಕ್ಕೊಂದು ಹಳ್ಳಿ ಭಾಗದಲ್ಲಿ ಕಾಣಿಸಿಕೊಳ್ಳುತ್ತಿವೆ. 18 ಕಾಡಾನೆಗಳ ಹಿಂಡಿನಿಂದ ಕಾಫಿ ತೋಟಗಳು ನಾಶವಾಗಿವೆ. ಮೂಡಿಗೆರೆ ತಾಲೂಕಿನಲ್ಲಿ ಮಳೆಯಿಂದ ನಾನಾ ಅವಾಂತರಗಳು ಸೃಷ್ಟಿಯಾಗಿವೆ. 

ಇಂಧನ ಸಚಿವ ಜಾರ್ಜ್ ಉಸ್ತುವಾರಿ ಜಿಲ್ಲೆಯಲ್ಲೇ ಕೈಕೊಟ್ಟ ವಿದ್ಯುತ್‌: ಮೊಬೈಲ್ ಚಾರ್ಚ್ ಮಾಡಲು ಜನರೇಟರ್ ಮೊರೆ..!

ಇದೀಗ ಮತ್ತೆ ಕಾಡಾನೆಗಳ ದಾಳಿಯಿಂದ ಮಲೆನಾಡಿನ ಜನರು ಕಂಗಾಲಾಗಿ ಹೋಗಿದ್ದಾರೆ. 18 ಕಾಡಾನೆಗಳು ತಂಡಗಳಾಗಿ ಒಂದೊಂದು ಹಳ್ಳಿಗೆ ದಾಂಗುಡಿ ಇಡುತ್ತಿವೆ.  ಆನೆಗಳನ್ನ ಓಡಿಸುವಂತೆ ಮೂಡಿಗೆರೆಯ ಗ್ರಾಮೀಣ ಭಾಗದ ಜನರು ಆಗ್ರಹಿಸಿದ್ದಾರೆ. 

Latest Videos
Follow Us:
Download App:
  • android
  • ios