Asianet Suvarna News Asianet Suvarna News

ಇಂಧನ ಸಚಿವ ಜಾರ್ಜ್ ಉಸ್ತುವಾರಿ ಜಿಲ್ಲೆಯಲ್ಲೇ ಕೈಕೊಟ್ಟ ವಿದ್ಯುತ್‌: ಮೊಬೈಲ್ ಚಾರ್ಚ್ ಮಾಡಲು ಜನರೇಟರ್ ಮೊರೆ..!

ಮೊಬೈಲ್‌ಗಳು ಚಾರ್ಜ್ ಆಗದೆ ದೂರ ಸಂಪರ್ಕ ವ್ಯವಸ್ಥೆಗೂ ಅಡಚಣೆ ಉಂಟಾಗಿದೆ. ಇಂಟರ್ನೆಟ್ ಜಾಲವೂ ಸ್ಥಗಿತಗೊಂಡಿವೆ. ಹತ್ತಾರು ಗ್ರಾಮಗಳು ಹೊರ ಜಗತ್ತಿನೊಂದಿಗೆ ಸಂಪರ್ಕವನ್ನೇ ಕಳೆದುಕೊಂಡಿವೆ.ಕಳಸ, ಮೂಡಿಗೆರೆ, ಶೃಂಗೇರಿ, ಕೊಪ್ಪ, ಚಿಕ್ಕಮಗಳೂರು ತಾಲೂಕುಗಳ ಹಲವೆಡೆ ನೆಟ್ವರ್ಕ್ ಸಮಸ್ಯೆ ತಲೆದೋರಿದೆ.

electricity problem in chikkamagaluru district grg
Author
First Published Jul 27, 2024, 8:29 PM IST | Last Updated Jul 29, 2024, 2:33 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಜು.27):  ಮಲೆನಾಡು ಸೇರಿಂದತೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಇಂದು ಮುಂಗಾರಿನ ಅಬ್ಬರ ತಗ್ಗಿದೆ. ಬಿರುಗಾಳಿ ಹೊಡೆತಕ್ಕೆ ಸಿಕ್ಕಿ ನೂರಾರು ಕಂಬಗಳು ಉರುಳಿ ಬಿದ್ದಿರುವ ಪರಿಣಾಮ ವಿದ್ಯುತ್ ಸಂಪರ್ಕ ಜಾಲ ಅಸ್ಥವ್ಯಸ್ಥಗೊಂಡಿದೆ. ನೂರಾರು ಗ್ರಾಮಗಳು ಕತ್ತಲಲ್ಲಿ ಮುಳುಗಿವೆ. ವಿದ್ಯುತ್ ಇಲ್ಲದೆ ದೈನಂದಿನ ಕೆಲಸ, ಕಾರ್ಯಗಳಿಗೆ ತೊಡಕಾಗಿದೆ. ನಿರಂತರ ಮಳೆಯಿಂದಾಗಿ ಸೋಲಾರ್ ಪ್ಯಾನೆಲ್ಗಳು ಕೆಲಸಕ್ಕೆ ಬಾರದಂತಾಗಿದೆ.

ಮೊಬೈಲ್‌ಗಳು ಸ್ಥಗಿತ

ಮೊಬೈಲ್‌ಗಳು ಚಾರ್ಜ್ ಆಗದೆ ದೂರ ಸಂಪರ್ಕ ವ್ಯವಸ್ಥೆಗೂ ಅಡಚಣೆ ಉಂಟಾಗಿದೆ. ಇಂಟರ್ನೆಟ್ ಜಾಲವೂ ಸ್ಥಗಿತಗೊಂಡಿವೆ. ಹತ್ತಾರು ಗ್ರಾಮಗಳು ಹೊರ ಜಗತ್ತಿನೊಂದಿಗೆ ಸಂಪರ್ಕವನ್ನೇ ಕಳೆದುಕೊಂಡಿವೆ.ಕಳಸ, ಮೂಡಿಗೆರೆ, ಶೃಂಗೇರಿ, ಕೊಪ್ಪ, ಚಿಕ್ಕಮಗಳೂರು ತಾಲೂಕುಗಳ ಹಲವೆಡೆ ನೆಟ್ವರ್ಕ್ ಸಮಸ್ಯೆ ತಲೆದೋರಿದೆ.

ಕೊಡಗು: ರಸ್ತೆ, ಕಟ್ಟಡಗಳಿಗೆ ನುಗ್ಗಿದ ಕಾವೇರಿ ಪ್ರವಾಹದ ನೀರು, ಜನಜೀವನ ಅಸ್ತವ್ಯಸ್ತ..!

ಜನರೇಟರ್‌ಗೆ ಮೊರೆ 

ಕೆಲವು ಕಡೆಗಳಲ್ಲಿ ಮೊಬೈಲ್ ಚಾರ್ಚ್ ಮಾಡಲು ಜನರು ಜನರೇಟರ್ ಮೊರೆ ಹೋಗುತ್ತಿದ್ದಾರೆ. ಡೀಸೆಲ್ ಜನರೇಟರ್ ಬಳಸಿ ಮೊಬೈಲ್ ಚಾರ್ಜಿಂಗ್ ಮಾಡಿಕೊಳ್ಳುತ್ತಿದ್ದರೂ ನೆಟ್ವರ್ಕ್ ಇಲ್ಲದೆ ಪರದಾಡುವಂತಾಗಿದೆ.ಹಾಂದಿಯಲ್ಲಿ ಮೊನ್ನೆ ಶಾಮಿಯಾನ ಅಂಗಡಿ ಮಾಲೀಕರೊಬ್ಬರು ಜನರೇಟರ್ನಲ್ಲಿ ಮೊಬೈಲ್ ಚಾರ್ಜ್ ಮಾಡಲು ಶುಲ್ಕ ವಸೂಲಿ ಮಾಡಿದ್ದರು. ಆದರೆ ಇನ್ನೂ ಕೆಲವರು ಅಕ್ಕಪಕ್ಕದ ಎಲ್ಲರ ಮೊಬೈಲ್ಗಳನ್ನು ಉಚಿತವಾಗಿ ಚಾರ್ಜ್ ಮಾಡಿಕೊಡುತ್ತಿರುವುದು ವರದಿಯಾಗಿದೆ. 

ಮೆಸ್ಕಾಂಗೆ ಸವಾಲು

ಮಳೆ-ಗಾಳಿಯಿಂದ ಅಸ್ಥವ್ಯಸ್ಥವಾಗುತ್ತಿರುವ ವಿದ್ಯುತ್ ವ್ಯವಸ್ಥೆಯನ್ನು ಸರಿಪಡಿಸುವುದು ಮೆಸ್ಕಾಂ ಸಿಬ್ಬಂದಿಗಳಿಗೆ ಸವಾಲಾಗಿ ಪರಿಣಮಿಸುತ್ತಿದೆ. ಅಪಾಯಕಾರಿ ಸ್ಥತಿಯಲ್ಲಿ ಕೆಲಸ ಮಾಡಬೇಕಾಗಿದೆ. ಪ್ರಾಣ ಪಣಕಿಟ್ಟುಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಜೂನಿಯರ್ ಇಂಜಿನೀಯರ್ ಗಣೇಶ್, ಕಾಂತರಾಜು, ಶಿವಕುಮಾರ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.ಜಿಲ್ಲೆಯಾದ್ಯಂತ ಸುಮಾರು 2,400 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ.

ಘಾಟಿಯಲ್ಲಿ ಗುಡ್ಡ ಕುಸಿತ

ಮಳೆ ಬಿಡುವು ನೀಡಿದ್ದರೂ ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿದು ಟ್ರಾಫಿಕ್ ಜಾಮ್ ಉಂಟಾಗಿದೆ. ಕೊಟ್ಟಿಗೆಹಾರದಲ್ಲಿ ವಾಹನಗಳ ಉದ್ದನೆ ಸಾಲು ಕಂಡುಬಂದಿದೆ. ಚೆಕ್ ಪೋಸ್ಟ್ ನಿಂದ ಮಂಗಳೂರು ಕಡೆಗೆ ಯಾವುದೇ ವಾಹನ ಬಿಡುತ್ತಿಲ್ಲ. 

ಮೀನಿಗೆ ಮುಗಿಬಿದ್ದರು

ಕೆರೆ ಕೋಡಿ ಬಿದ್ದ ಹಿನ್ನೆಲೆ ಜನರು ಮೀನು ಹಿಡಿಯಲು ಮುಗಿಬಿದ್ದ ಘಟನೆ ತರೀಕೆರೆಯ ದೊಡ್ಡ ಕೆರೆಯಲ್ಲಿ ನಡೆದಿದೆ. ಎರಡು ವರ್ಷಗಳ ಬಳಿಕ ಕೆರೆ ಕೋಡಿ ಬಿದ್ದಿದೆ. ತರೀಕೆರೆ ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ದೊಡ್ಡ ಕೆರೆಗೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ.

ಶಿರೂರು ದುರ್ಘಟನೆ ನಡೆದು 12 ದಿನವಾದ್ರೂ ಸಿಗದ ಜಗನ್ನಾಥ್ ಮೃತದೇಹ, ಈಗಲೂ ತಂದೆಗಾಗಿ ಕಾಯುತ್ತಿರೋ ಪುತ್ರಿಯರು..!

ಕೋಡಿಬಿದ್ದ ಅಯ್ಯನಕೆರೆ

ನಿನ್ನೆಯಷ್ಟೇ ಇತಿಹಾಸ ಪ್ರಸಿದ್ಧ ಪದಗದ ಕೆರೆ ತುಂಬಿ ಕೋಡಿ ಬಿದ್ದ ಬೆನ್ನಲ್ಲೇ ಶನಿವಾರ ಬಯಲಿನ ಜನರ ಜೀವನಾಡಿಯಾದ ಅಯ್ಯನ ಕೆರೆಯೂ ಕೋಡಿ ಬಿದ್ದಿದೆ. ಕೆರೆ ನೀರಿನಿಂದ ಹೊಲಗದ್ದೆ-ತೋಟಗಳು ಜಲಾವೃತಗೊಂಡಿವೆ. ಹಲಸಿನಮರದಹಳ್ಳಿ-ಎಮ್ಮೆದೊಡ್ಡಿ-ಹೊಸಸಿದ್ದರಹಳ್ಳಿ ಸಂಪರ್ಕ ಕಡಿತಗೊಂಡಿದೆ. ನೀರಿನ ರಭಸಕ್ಕೆ ವಿದ್ತುತ್ ಕಂಬಗಳು ಮುರಿದು ಬಿದ್ದಿವೆ. ಅಡಿಕೆ ತೋಟಗಳ ಒಳಗೆ ನದಿಯಂತೆ ನೀರು ಹರಿಯುತ್ತಿದೆ.ಕೆರೆ ಕೋಡಿ ಬಿದ್ದಿರುವುದು ಒಂದೆಡೆ ಖುಷಿ ತಂದಿದ್ದರೆ, ಮತ್ತೊಂದೆಡೆ ಎಮ್ಮೆದೊಡ್ಡಿ ಭಾಗದ ಜನರ ಬದುಕು ಅತಂತ್ರವಾಗಿದೆ. ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ 30ಕ್ಕೂ ಹೆಚ್ಚು ಹಳ್ಳಿಗಳಿದ್ದು, ತೋಟಗಳಿಗೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿರುವುದರಿಂದ ಎಲ್ಲರೂ ಕಂಗಾಲಾಗಿದ್ದಾರೆ.

ರಸ್ತೆ ಜಲಾವೃತ 

ಮಳೆಗೆ ಭದ್ರಾ ನದಿ ಉಕ್ಕಿ ಹರಿದ ಪರಿಣಾಮ ಬಾಳೆಹೊನ್ನೂರು-ಕೊಟ್ಟಿಗೆಹಾರ- ಕಳಸ ಸಂಪರ್ಕಿಸುವ ಹೆದ್ದಾರಿ ಜಲಾವೃತಗೊಂಡಿದೆ. ರಸ್ತೆಯಲ್ಲಿ ನೀರು ಏರಿಕೆ ಆಗುತ್ತಿರುವ ಹಿನ್ನೆಲೆ ವಾಹನ ಸವಾರರು ಸ್ಥಳೀಯ ಗ್ರಾಮಸ್ಥರಲ್ಲಿ ಆತಂಕಗೊಂಡಿದ್ದಾರೆ.

Latest Videos
Follow Us:
Download App:
  • android
  • ios