Asianet Suvarna News Asianet Suvarna News

ಒಂದೂವರೆ ವರ್ಷದಲ್ಲಿ 173 ಪೋಕ್ಸೋ ಪ್ರಕರಣ: ರಾಜ್ಯದಲ್ಲೇ ನಂಬರ್ 1 ಕುಖ್ಯಾತಿ ಪಡೆಯುತ್ತಾ ಚಿಕ್ಕಮಗಳೂರು!

ರಾಜ್ಯದಲ್ಲೇ ಪೋಕ್ಸೋ ಪ್ರಕರಣಗಳಲ್ಲಿ ನಂಬರ್ ಒನ್ ಕುಖ್ಯಾತಿಯನ್ನು ಕಾಫಿಕಣಿವೆ ಚಿಕ್ಕಮಗಳೂರು ಜಿಲ್ಲೆ ಹೊರುವ ಪರಿಸ್ಥಿತಿ ಬಂದಿದೆ.  ಜಿಲ್ಲೆಯಲ್ಲಿ ದಾಖಲಾಗಿರುವ  ಪೋಕ್ಸೋ ಕೇಸ್ ಗಳಿಂದ ಕಾಫಿನಾಡಿಗರ ನಿದ್ದೆಗೆಡಿಸಿದೆ. 

173 POCSO cases in Chikkamagaluru in a year and a half gvd
Author
First Published Aug 17, 2023, 8:13 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಆ.17): ರಾಜ್ಯದಲ್ಲೇ ಪೋಕ್ಸೋ ಪ್ರಕರಣಗಳಲ್ಲಿ ನಂಬರ್ ಒನ್ ಕುಖ್ಯಾತಿಯನ್ನು ಕಾಫಿಕಣಿವೆ ಚಿಕ್ಕಮಗಳೂರು ಜಿಲ್ಲೆ ಹೊರುವ ಪರಿಸ್ಥಿತಿ ಬಂದಿದೆ.  ಜಿಲ್ಲೆಯಲ್ಲಿ ದಾಖಲಾಗಿರುವ  ಪೋಕ್ಸೋ ಕೇಸ್ ಗಳಿಂದ ಕಾಫಿನಾಡಿಗರ ನಿದ್ದೆಗೆಡಿಸಿದೆ. ‌‌ಬರೊಬ್ಬರಿ ಒಂದೂವರೆ ವರ್ಷದಲ್ಲಿ 173 ಪೋಕ್ಸೋ ಪ್ರಕರಣ ದಾಖಲಾಗಿದ್ರೆ ಈ ವರ್ಷ (2023 ) ಏಳು ತಿಂಗಳಿನಲ್ಲಿ 50 ಪ್ರಕರಣ ದಾಖಲಾಗಿದೆ.

ಬರೊಬ್ಬರಿ ಒಂದೂವರೆ ವರ್ಷದಲ್ಲಿ 173 ಪೋಕ್ಸೋ ಪ್ರಕರಣ: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಶೇ70 ರಷ್ಟು ಕಾಡು ಕಾಫಿ ತೋಟಗಳೇ ಇರೋದು. ಒಂಟಿ ಮನೆಗಳು ಕಿಮೀ ನಡೆದು ಮನೆ ಸೇರೋ ರಸ್ತೆಗಳ ನಡುವೆ ನೆಮ್ಮದಿಯಿಂದ ಮಲೆನಾಡಿಗರಿಗೆ ಪೋಸ್ಕೋ ಪ್ರಕರಣಗಳು ದಾಖಲಾಗ್ತಾ ಇರೋದನ್ನು ನೋಡಿದ್ರೆ ಅಪ್ರಾಪ್ತ ಬಾಲಕಿಯನ್ನು ಮನೆಯಿಂದ ಹೊರಕಳುಹಿಸುವುದು ಅನ್ನೋ ಅತಂಕ ಶುರುವಾಗಿದೆ.  ಇದಕ್ಕೆ ಪ್ರಮುಖ ಕಾರಣ ಬರೊಬ್ಬರಿ ಒಂದೂವರೆ ವರ್ಷದಲ್ಲಿ 173 ಪೋಕ್ಸೋ ಪ್ರಕರಣ ದಾಖಲಾಗಿರುವುದು. 2023ಈ ವರ್ಷ ಏಳು ತಿಂಗಳಿನಲ್ಲಿ 50 ಪ್ರಕರಣ ದಾಖಲಾಗಿದೆ. 

ಸತ್ಯ ಹೇಳಿದರೆ ಸಿ.ಟಿ.ರವಿಗೆ ಕೆಳಗಿಂದ ಮೇಲಿನವರೆಗೆ ಉರಿಯುತ್ತೆ: ಕೆಪಿಸಿಸಿ ರಾಜ್ಯ ವಕ್ತಾರ ಲಕ್ಷ್ಮಣ್

ಈ ಮೂಲಕ ರಾಜ್ಯದಲ್ಲೇ ಮೊದಲ ಜಿಲ್ಲೆ ಎನ್ನುವ ಕುಖ್ಯಾತಿಯನ್ನು ಪಡೆಯುತ್ತಾ ಎನ್ನುವ ಆತಂಕವೂ ಇದೆ. 2022ರ ಏಪ್ರೀಲ್ ನಿಂದ 2023ರ ಮಾರ್ಚ್ ತನಕ ಒಂದು ವರ್ಷದ ಅವಧಿಯಲ್ಲಿ ದಾಖಲಾದ ಪೋಕ್ಸೋ ಪ್ರಕರಣದಲ್ಲಿ 22 ಬಾಲಕಿಯರು ಗರ್ಭೀಣಿಯರಾಗಿದ್ದು 12 ಪ್ರಕರಣಗಳಲ್ಲಿ ಗರ್ಭಪಾತ ಮಾಡಿಸಲಾಗಿದೆ. 10 ಬಾಲಕಿಯರಿಗೆ ಹೆರಿಗೆಯಾಗಿದೆ. 2023ರ ಮಾರ್ಚ್ ನಿಂದ ಈವರೆಗೆ ದಾಖಲಾದ ಪೋಕ್ಸೊ ಪ್ರಕರಣದಲ್ಲಿ 6 ಬಾಲಕಿಯರು ಗರ್ಭೀಣಿಯರಾಗಿದ್ದು ನಾಲ್ಕು ಗರ್ಭಪಾತ , 2 ಬಾಲಕಿಯರಿಗೆ ಹೆರಿಗೆ ಮಾಡಿಸಲಾಗಿದೆ. ಇನ್ನೂ ಇದ್ರ ನಡುವೆ ಮತ್ತೊಂದು ಶಾಕಿಂಗ್ ನ್ಯೂಸ್ ಅಂದ್ರೆ ಪೊಲೀಸ್ರು, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಆರೋಗ್ಯ ಇಲಾಖೆಯಿಂದಲೇ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಿದೆ..ಆಸ್ಪತ್ರೆಗೆ ಹೋದಾಗ್ಲೇ ಲೈಂಗಿಕ ದೌರ್ಜನ್ಯ ನಡೆದಿದೆ ಅನ್ನೋ ಮಾಹಿತಿ ಹೊರಬರುತ್ತಿದೆ..

ಪೋಕ್ಸೋ ಪ್ರಕರಣದ ಜೊತೆಗೆ ಬಾಲ್ಯ ವಿವಾಹವೂ ನಿಂತಿಲ್ಲ: ಪೋಕ್ಸೋ ಪ್ರಕರಣದ ಜೊತೆಗೆ ಕಾಫಿನಾಡಿನಲ್ಲಿ ಬಾಲ್ಯ ವಿವಾಹವೂ ನಿಂತಿಲ್ಲ. ಬಾಲ್ಯ ವಿವಾಹ ನಿಷೇಧ ಕಾಯ್ದೆ ಇದ್ದರೂ ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ ಎಂಟು ಬಾಲ್ಯ ವಿವಾಹಗಳು ನಡೆದಿವೆ. ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ 80 ದೂರುಗಳು ಬಂದಿದ್ದು, 72 ಬಾಲ್ಯ ವಿವಾಹಗಳನ್ನು ತಡೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಆದರೆ, 8 ಬಾಲ್ಯ ವಿವಾಹಗಳು ನಡೆದಿದ್ದು, ಎಫ್‌ಐಆರ್ ದಾಖಲಿಸಿದ್ದಾರೆ.2023 ಏಪ್ರಿಲ್‌ನಿಂದ ಜೂನ್ ತನಕ 16 ದೂರುಗಳು ಸ್ವೀಕಾರವಾಗಿದ್ದು, 15 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಒಂದು ಬಾಲ ವಿವಾಹ ನಡೆದಿದೆ.

ಜಿಲ್ಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿಯೇ ಇಲ್ಲ: ಮಕ್ಕಳ ಹಕ್ಕುಗಳ ರಕ್ಷಣೆಗೆ ಜಿಲ್ಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿಯೇ ಅಸ್ತಿತ್ವದಲ್ಲಿ ಇಲ್ಲ. ಇದ್ದ ಸಮಿತಿ ಎರಡು ವರ್ಷದ ಹಿಂದೆ ವಿಸರ್ಜನೆಗೊಂಡಿದೆ. ಹೊಸ ಸಮಿತಿಯನ್ನು ಸರ್ಕಾರ ನೇಮಕ ಮಾಡಬೇಕಿದೆ. ಸದ್ಯ ಹಾಸನ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಮಕ್ಕಳನ್ನು ಕರೆದೊಯ್ಯಲಾಗುತ್ತಿದೆ.ಜಿಲ್ಲೆಗೆ ಪ್ರತ್ಯೇಕ ಸಮಿತಿ ರಚನೆ ಮಾಡಲು ಜಿಲ್ಲಾಧಿಕಾರಿ ಅವರ ಮೂಲಕ ಸರ್ಕಾರಕ್ಕೆ ಪತ್ರ ವ್ಯವಹಾರ ನಡೆಸಲಾಗಿದೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ನೊಂದಿಗೆ ಮಾತಾಡಿದ ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷ ನಟರಾಜ್ ಜಿಲ್ಲೆಯಲ್ಲಿ ಪೋಕ್ಸೊ ಪ್ರಕರಣ ಸೇರಿದಂತೆ ಮಕ್ಕಳ ರಕ್ಷಣೆಗೆ ಸಮಿತಿ ಅಗತ್ಯವಿದೆ. 

ಮಕ್ಕಳಾಗಿಲ್ಲ ಅಂತ ದೇವರ ಮೊರೆ: ಭಕ್ತೆಯ ಜತೆ ಪರಾರಿಯಾಗಿದ್ದ ಪೂಜಾರಿ ತಾತ ಪತ್ತೆ!

ಈ ಹಿಂದಿನ ಸಮಿತಿ ಸದಸ್ಯರ ನಡುವಿನ ಒಳಜಗಳದಿಂದ ಸಮಿತಿಯನ್ನು ವಿಸರ್ಜನೆ ಮಾಡಲಾಗಿದೆ. ಸದ್ಯ ಜಿಲ್ಲೆಯಲ್ಲಿ ಹೊಸ ಸಮಿತಿಯನ್ನು ರಚನೆ ಮಾಡುವ ಅವಶ್ಯಕತೆ ಇದ್ದು ಶೀಘ್ರವೇ ಸಮಿತಿಯನ್ನು ರಚನೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಒಟ್ಟಾರೆ ಕಾಫಿ ನಾಡಲ್ಲಿ ಪೋಸ್ಕೋ ಪ್ರಕರಣಗಳು ದಾಖಲಾಗ್ತಾ ಇರೋದು ಸ್ಥಳೀಯರ ನಿದ್ದೆಗೆಡಿಸಿದೆ. ಪೊಲೀಸ್ ಇಲಾಖೆಯಂತೂ ಪುಲ್ ಹೈಆಲಾರ್ಟ್ ಅಗಿದೆ. ದಾಖಲಾಗಿರುವ ಬಹುತೇಕ ಪ್ರಕರಣಗಳು ವಲಸೆ ಕಾರ್ಮಿಕರು ಅಲ್ಲಿನ ಟೆಂಟ್ ಗಳು, ಕಾಫಿಲೈನ್ ಮನೆಗಳಲ್ಲಿ ದೌರ್ಜನ್ಯ ನಡೆಯುತ್ತಿವೆ. ಹೊರ ರಾಜ್ಯಗಳಿಂದ ಬರುವ ಕಾರ್ಮಿಕರಿಗೆ ಜಾಗೃತಿ ಜೊತೆಗೆ ಭಯ ಮೂಡಿಸುವ ಕೆಲಸವನ್ನು ಇಲಾಖೆ ಮಾಡಬೇಕಾಗಿದೆ. ಇದರ ಜೊತೆಗೆ ಕಾಫಿತೋಟದ ಮಾಲೀಕರು ಕೂಡ ಜಾಗೃತಿ ಮೂಡಿಸುವಂತಹ ಕೆಲಸವನ್ನು ಮಾಡಬೇಕಾಗಿದೆ.

Follow Us:
Download App:
  • android
  • ios