ಲೇಔಟ್‌ ರಸ್ತೆಗಾಗಿ ಕೆರೆ ಒತ್ತುವರಿ: 170 ಮರ ಕಡಿದ ಡೆವಲಪರ್‌

ಖಾಸಗಿ ಡೆವಲಪರ್‌ಗಳ ವಿರುದ್ಧ ಪೊಲೀಸರಿಗೆ ದೂರು| ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿಯ ಕಡತಮಲೆ ಗ್ರಾಮದಲ್ಲಿ ನಡೆದ ಘಟನೆ| ಜೆಸಿಬಿ ಯಂತ್ರ ಮತ್ತು ಕೆರೆಯ ಅಂಗಳದಲ್ಲಿ ಕಡಿದು ಉರುಳಿಸಿದ್ದ 170 ಮರ ವಶಪಡಿಸಿಕೊಂಡ ಅರಣ್ಯ ಇಲಾಖೆ| 
 

170 Trees Cut  for Layout Road Construction in Bengaluru grg

ಯಲಹಂಕ(ಮಾ.10): ಬಡಾವಣೆಗಾಗಿ ಕೆರೆ ಜಾಗವನ್ನು ಒತ್ತುವರಿ ಮಾಡಿ ರಸ್ತೆ ನಿರ್ಮಿಸಿದ್ದಲ್ಲದೆ 170 ಮರಗಳನ್ನು ಹನನ ಮಾಡಿದ ಘಟನೆ ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿಯ ಕಡತಮಲೆ ಗ್ರಾಮದಲ್ಲಿ ನಡೆದಿದೆ.

ಖಾಸಗಿ ಡೆವಲಪರ್‌ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾಯಿ ಪಂಚಮಿ ಡೆವಲಪ​ರ್ಸ್‌ ಹರಿನಾಥ ರೆಡ್ಡಿ ಹಾಗೂ ಆದಿನಾರಾಯಣ ರೆಡ್ಡಿ ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿ ಕಡತನಮಲೆ ಗ್ರಾಮದ ಸರ್ವೆ ನಂ.36 ಸರ್ಕಾರಿ ಕೆರೆ ಜಾಗದಲ್ಲಿ ಯಾವುದೇ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ರಸ್ತೆಯನ್ನು ನಿರ್ಮಿಸಿದ್ದಾರೆ. ಅಲ್ಲದೆ ಕೆರೆಯಲ್ಲಿದ್ದ ಬೆಲೆ ಬಾಳುವ ಮರಗಳನ್ನು ಕಡಿದಿದ್ದಾರೆ ಎಂದು ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ರಾಜ ಸ್ವನೀರೀಕ್ಷಕರು ಹಾಗೂ ಕಂದಾಯ ಕಾರ್ಯದರ್ಶಿಗಳು ಸ್ಥಳ ಪರಿಶೀಲಿಸಿದರು. ಅರಕೆರೆ ಗ್ರಾಮ ಪಂಚಾಯಿತಿಯಿಂದ ರಾಜಾನುಕುಂಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಜೆಸಿಬಿ ಯಂತ್ರಗಳನ್ನು ಮತ್ತು ಕೆರೆಯ ಅಂಗಳದಲ್ಲಿ ಕಡಿದು ಉರುಳಿಸಿದ್ದ 170 ಮರಗಳನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ.

BDA ಆಸ್ತಿ ಭೂಗಳ್ಳರ ಪಾಲು... ರಾತ್ರೋ ರಾತ್ರಿ ಖಾಸಗಿ ಫಲಕ!

ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಈಗಾಗಲೇ ತಹಸೀಲ್ದಾರ್‌ ಅವರಿಗೆ ದೂರು ನೀಡಲಾಗಿದೆ ಎಂದು ಅರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಆರ್‌.ತಿಮ್ಮೇಗೌಡ ತಿಳಿಸಿದರು.
 

Latest Videos
Follow Us:
Download App:
  • android
  • ios