ಕೊಪ್ಪಳದ ಅಂಜನಾದ್ರಿ ಬೆಟ್ಟ ಹತ್ತುವಾಗ 17 ವರ್ಷದ ಯುವಕನಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾನೆ. ಜಯೇಶ್ ಯಾದವ್ ಎಂಬ ಹುಲಗಿ ಗ್ರಾಮದ ನಿವಾಸಿ ಸ್ನೇಹಿತರೊಂದಿಗೆ ಬೆಟ್ಟ ಹತ್ತುವಾಗ ಕುಸಿದು ಬಿದ್ದಿದ್ದಾನೆ.
ಕೊಪ್ಪಳ (ಜ.29): ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹಾಗೂ ಮಕ್ಕಳಲ್ಲಿ ಹೃದಯಾಘಾತದ ಆತಂಕ ಹೆಚ್ಚಾಗಿದೆ. ಕಳೆದ ಒಂದು ತಿಂಗಳಲ್ಲಿ ಕರ್ನಾಟಕದಲ್ಲಿಯೇ ಇಂಥ ಮೂರು ಪ್ರಕರಣಗಳು ವರದಿಯಾಗಿದ್ದವು. ಬುಧವಾರ ಕೊಪ್ಪಳದಲ್ಲಿ ಅಂಜನಾದ್ರಿ ಬೆಟ್ಟ ಹತ್ತುವಾಗ ಯುವಕನೊಬ್ಬ ಹೃದಯಾಘಾತದಿಂದ ಸಾವು ಕಂಡಿದ್ದಾನೆ. 17 ವರ್ಷದ ಜಯೇಶ್ ಯಾದವ್ ಮೃತ ಯುವಕ ಎಂದು ಗುರುತಿಸಲಾಗಿದೆ. ಜಯೇಶ್, ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದ ನಿವಾಸಿ ಎಂದು ವರದಿಯಾಗಿದೆ. ಇಂದು ಸ್ನೇಹಿತರ ಜೊತೆ ಜಯೇಶ್ ಅಂಜನಾದ್ರಿ ಬೆಟ್ಟ ಏರಲು ಹೋಗಿದ್ದ. ಬೆಟ್ಟ ಹತ್ತಿ ಆಂಜನೇಯ ದರ್ಶನ ಮಾಡಬೇಕು ಎಂದು ಆಸೆ ವ್ಯಕ್ತಪಡಿಸಿದ್ದ. ಆದರೆ, ಹೃದಯಾಘಾತದಿಂದ ಬೆಟ್ಟ ಹತ್ತುವಾಗ ಕುಸಿದು ಬಿದ್ದು ಜಯೇಶ್ ಮೃತಪಟ್ಟಿದ್ದಾನೆ. 575 ಮೆಟ್ಟಿಲು ಹತ್ತಿ ಆಂಜನೇಯ ದರ್ಶನ ಪಡೆಯಲು ಜಯೇಶ್ ಮುಂದಾಗಿದ್ದರು.
Maha Kumbh 2025: ಪ್ರಯಾಗ್‌ರಾಜ್ ತೀರ್ಥಸ್ನಾನದ ವೇಳೆ ನದಿಯಲ್ಲೇ ಹೃದಯಾಘಾತ, ಎನ್‌ಸಿಪಿ ನಾಯಕ ನಿಧನ
ಆಸ್ಪತ್ರೆಗೆ ಸೇರಿಸೋ ಮುನ್ನವೇ ಜಯೇಶ್ ಮೃತಪಟ್ಟಿದ್ದ ಎನ್ನಲಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಪುರಾಣ ಪ್ರಸಿದ್ಧ ಕ್ಷೇತ್ರವಾಗಿದ್ದು, ವರ್ಷಕ್ಕೆ ಲಕ್ಷಾಂತರ ಭಕ್ತರು ಇಲ್ಲಿ ಭೇಟಿ ನೀಡುತ್ತಾರೆ. ಗಂಗಾವತಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Heart attack: 8 ವರ್ಷದ ಬಾಲಕಿ ಹೃದಯಾಘಾತದಿಂದ ಸಾವು, ಪೋಷಕರೇ ನಿಮ್ಮ ಮಗುವಿನ ಹೃದಯ ಜೋಪಾನ!
