Asianet Suvarna News Asianet Suvarna News

ಸಿದ್ದರಾಮಯ್ಯ ಬಗ್ಗೆ ಫೇಸ್​ಬುಕ್​ನಲ್ಲಿ ಅಶ್ಲೀಲ ಪೋಸ್ಟ್​; ಬಾದಾಮಿಯ ಯುವಕ ಅರೆಸ್ಟ್

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಫೇಸ್​ಬುಕ್​ನಲ್ಲಿ ಅಶ್ಲೀಲ ಪೋಸ್ಟ್​ ಮಾಡಿದ ಯುವಕನ್ನು ಪೊಲೀಸರು ಬಂಧಿಸಿದ್ದಾರೆ.

badami Youth arrested for vulgar post In Facebook against siddaramaiah
Author
Bengaluru, First Published May 26, 2020, 10:41 PM IST
  • Facebook
  • Twitter
  • Whatsapp

ಬಾಗಲಕೋಟೆ, (ಮೇ 26): ನಾಲ್ಕು ವರ್ಷಗಳ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಹಿಳೆಯೊಬ್ಬರು ವೇದಿಕೆಯಲ್ಲೇ ಸಿದ್ದರಾಮಯ್ಯನವರ ಕೆನ್ನೆಗೆ ಮುತ್ತಿಟ್ಟಿದ್ದು ದೊಡ್ಡ ಸುದ್ದಿಯಾಗಿತ್ತು. 

ಅದೇ ಫೋಟೋವನ್ನು ಬಳಸಿಕೊಂಡು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಫೇಸ್​ಬುಕ್​ನಲ್ಲಿ ಅಶ್ಲೀಲ ಪೋಸ್ಟ್​ ಮಾಡಿದ ಬಾಗಲಕೋಟೆ ಬಾದಾಮಿಯ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಬಾದಾಮಿಯ ಖ್ಯಾಡ ಗ್ರಾಮದ ಸಂಗಪ್ಪ ಸಿದ್ರಾಮಣ್ಣವರ ಎಂಬಾತ ಫೇಸ್​ಬುಕ್​ನಲ್ಲಿ ಅಶ್ಲೀಲವಾಗಿ ಪೋಸ್ಟ್​ ಮಾಡಿರುವ ವ್ಯಕ್ತಿ. 

4 ವರ್ಷದ ಹಿಂದಿನ ಆ ಫೋಟೋವನ್ನು ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದ  ಸಿದ್ದರಾಮಯ್ಯನವರ ಸ್ವಕ್ಷೇತ್ರವಾದ ಬಾದಾಮಿಯ ಯುವಕನೊಬ್ಬ ಭಾರತದಲ್ಲಿ ಏಡ್ಸ್​ ಬಂದಿದ್ದು ಇವರಿಂದಲೇ ಎಂದು ಮಹಾತ್ಮ ಗಾಂಧಿ ಎನ್ನುವ ಫೇಸ್ಬುಕ್ ಪೇಜ್​ ಮೂಲಕ ಅಸಭ್ಯವಾಗಿ ಪೋಸ್ಟ್​ ಮಾಡಿದ್ದಾನೆ.

ಮಹಾತ್ಮ ಗಾಂಧಿ ಎನ್ನುವ ಫೇಸ್ಬುಕ್ ಪೇಜ್​ನಲ್ಲಿನ ಪೋಸ್ಟ್ ಶೇರ್ ಮಾಡಿದ್ದ ಈ ಯುವಕನನ್ನು ಬಂಧಿಸಲಾಗಿದೆ. ಈ ಕುರಿತು ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

Follow Us:
Download App:
  • android
  • ios