ಹಾವೇರಿಯಲ್ಲೂ ಕೊರೋನಾ ಕಾಟ: 165 ಜನರ ಆರೋಗ್ಯ ತಪಾಸಣೆ

ಹಾವೇರಿ ಜಿಲ್ಲೆಗೆ ವಿದೇಶದಿಂದ ಬಂದ 32 ಜನರು ಹಾಗೂ ಇವರ ಸಂಪರ್ಕಕ್ಕೆ ಬಂದ 133 ಸೇರಿ ಒಟ್ಟು 165 ಜನರ ಆರೋಗ್ಯ ತಪಾಸಣೆ| 164 ಜನರಿಗೆ ಮನೆಯಲ್ಲಿಯೇ ನಿಗಾ| 

165 People Health Check up due to Coronavirus  in Haveri District

ಹಾವೇರಿ(ಮಾ.18): ಶಂಕಿತ ಕೊರೋನಾ ಸೋಂಕು ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದ ಜಿಲ್ಲೆಯ ಮೂವರ ರಕ್ತ ಹಾಗೂ ಕಫ ಮಾದರಿ ಪರೀಕ್ಷೆಯಲ್ಲಿ ಇಬ್ಬರಲ್ಲಿ ಕೊರೋನಾ ಸೋಂಕು ಕಂಡುಬಂದಿಲ್ಲ. ಇನ್ನೊಬ್ಬರ ರಕ್ತ ಪರೀಕ್ಷಾ ವರದಿ ನಿರೀಕ್ಷಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಂದ್ರ ದೊಡ್ಡಮನಿ ತಿಳಿಸಿದ್ದಾರೆ. 

'ಮಂಗಳೂರಲ್ಲಿ ಶೀಘ್ರ ವೈರಾಣು ಪತ್ತೆ ಪರೀಕ್ಷಾ ಕೇಂದ್ರ'

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಗೆ ವಿದೇಶದಿಂದ ಬಂದ 32 ಜನರು ಹಾಗೂ ಇವರ ಸಂಪರ್ಕಕ್ಕೆ ಬಂದ 133 ಸೇರಿ ಒಟ್ಟು 165 ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ. 

ಕುಕ್ಕೆಗೆ ಹೊರಟವರಿಗೆ ಸೂಚನೆ: ಸರ್ವ ಸೇವೆಗಳೂ ಕ್ಯಾನ್ಸಲ್

164 ಜನರನ್ನು ಅವರ ಮನೆಯಲ್ಲಿಯೇ ಇಟ್ಟು ನಿಗಾ ವಹಿಸಲಾಗಿದೆ. ಓರ್ವರನ್ನು ಜಿಲ್ಲಾಸ್ಪತ್ರೆಯ ವಾರ್ಡ್‌ನಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios