Mysuru : ಸಹಕಾರ ಸಂಘಗಳಿಗೆ 160 ಕೋಟಿ ಸಾಲ

ಕ್ಷೇತ್ರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ 160 ಕೋಟಿ ಸಾಲ ನೀಡಲಾಗಿದೆ ಎಂದು ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್‌ ಅಧ್ಯಕ್ಷ ಜಿ.ಡಿ. ಹರೀಶ್‌ಗೌಡ ಹೇಳಿದರು.

160 crore loan to cooperative societies snr

  ಕೆ.ಆರ್‌. ನಗರ (ನ.19):  ಕ್ಷೇತ್ರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ 160 ಕೋಟಿ ಸಾಲ ನೀಡಲಾಗಿದೆ ಎಂದು ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್‌ ಅಧ್ಯಕ್ಷ ಜಿ.ಡಿ. ಹರೀಶ್‌ಗೌಡ ಹೇಳಿದರು.

ಸಾಲಿಗ್ರಾಮ ತಾಲೂಕಿನ ಚಿಬುಕಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 20 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸುತ್ತಿರುವ ನೂತನ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಮೇಲೆ ಒಂದು ಲಕ್ಷ ಸದಸ್ಯರಿಗೆ 1,300 ಕೋಟಿ ಶೂನ್ಯ ಬಡ್ಡಿ ದರದಲ್ಲಿ ಸಾಲ (Loan)  ನೀಡಲಾಗಿದ್ದು, ಕಳೆದ 60 ವರ್ಷಗಳಿಂದ ಸಹಕಾರ ಸಂಘಗಳ ಪೀಠೋಪಕರಣ ಖರೀದಿಗೆ 50 ಸಾವಿರ ಕೊಡಲಾಗುತ್ತಿತ್ತು, ನಾವು ಕಟ್ಟಡ ನಿಧಿ ಸ್ಥಾಪಿಸಿ 20 ಲಕ್ಷದವರೆಗೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಮಹಿಳಾ (Woman)  ಸಂಘ ಸದಸ್ಯರು ಮೈಕ್ರೋ ಫೈನಾನ್ಸ್‌ ಮೂಲಕ ಸಾಲ ಪಡೆದು ತಿರುವಳಿ ಮಾಡಲು ಹೆಚ್ಚಿನ ಪ್ರಮಾಣದಲ್ಲಿ ಬಡ್ಡಿ ಕಟ್ಟುತ್ತಿದ್ದು, ಮುಂದೆ ನಮ್ಮ ಸಹಕಾರ ಸಂಘದಲ್ಲಿ ಖಾತೆ ತೆರದು ವ್ಯವಹರಿಸಿದರೆ ಶೇ. 12ಕ್ಕಿಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು ಎಂದು ಪ್ರಕಟಿಸಿದರು.ಚಿಬುಕಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 440 ಸದಸ್ಯರಿಗೆ 5 ಕೋಟಿ ಸಾಲ ನೀಡಿದ್ದು, ನೂತನ ಕಟ್ಟಡ ನಿರ್ಮಾಣಕ್ಕೆ 10 ಲಕ್ಷ ಅನುದಾನ ನೀಡಲಾಗುತ್ತದೆ, ಆದ್ದರಿಂದ ಶಾಸಕರಾದ ಸಾ.ರಾ. ಮಹೇಶ್‌ ಕೂಡ ಅಗತ್ಯ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಹರದನಹಳ್ಳಿ ಮತ್ತು ಮಿರ್ಲೆ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ನಡೆದ ಅವ್ಯವಹಾರದ ವಿಚಾರದಲ್ಲಿ ಮರಣ ಹೊಂದಿರುವ ಕಾರ್ಯದರ್ಶಿಗಳ ವಿರುದ್ದ ದೂರು ದಾಖಲಾಗಿದ್ದು, ರೈತರಿಗೆ ಅನ್ಯಾಯವಾಗದಂತೆ ಕ್ರಮವಹಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಸಂಘದ ಕಟ್ಟಡ ನಿರ್ಮಾಣಕ್ಕೆ ನಿವೇನವನ್ನು ನೀಡಿದ ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕ ಸುಬ್ಬಯ್ಯ ಅವರನ್ನು ಗ್ರಾಮದ ಪರವಾಗಿ ಅಭಿನಂದಿಸಲಾಯಿತು.

ಚಿಬುಕಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ಎ. ಗಣೇಶ್‌, ಉಪಾಧ್ಯಕ್ಷ ಕೃಷ್ಣೇಗೌಡ, ಎಂಡಿಸಿಸಿ ಬ್ಯಾಂಕ… ನಿರ್ದೇಶಕ ಎಚ್‌. ಸುಬ್ಬಯ್ಯ, ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್‌. ಚೆನ್ನಬಸಪ್ಪ, ಗ್ರಾಪಂ ಅಧ್ಯಕ್ಷೆ ಶೋಭಾರಾಣಿ, ಜೆಡಿಎಸ್‌ ಮುಖಂಡರಾದ ಎಚ್‌.ಕೆ. ಮಧುಚಂದ್ರ, ಶ್ರೀರಾಂಪುರ ಸಂತೋಷ್‌, ಸಹಕಾರ ಇಲಾಖೆಯ ಅಭಿವೃದ್ಧಿ ಅಧಿಕಾರಿ ಎಸ್‌. ರವಿ, ಎಂಡಿಸಿಸಿ ಬ್ಯಾಂಕ್‌ ಮೇಲ್ವಿಚಾರಕ ಸತೀಶ್‌, ಸಂಘದ ನಿರ್ದೇಶಕರಾದ ಭಾರತಿ, ಜಯಣ್ಣ, ಗೋವಿಂದರಾಜು, ಸಣ್ಣರಾಮಯ್ಯ, ಕೆ. ಶ್ವೇತಾ, ಕೆ.ಎಂ. ತಮ್ಮೇಗೌಡ, ನಿಂಗರಾಜು, ಸಿ.ಕೆ. ಮಹೇಶ್‌, ಎಚ್‌.ಎಸ್‌. ಅಶೋಕ, ವೆಂಕಟೇಶ್‌ ಇದ್ದರು.

--ತಾರತಮ್ಯ ಮಾಡಬೇಡಿ--

ಶಾಸಕ ಸಾ.ರಾ. ಮಹೇಶ್‌ ಮಾತನಾಡಿ, ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳು ಪಕ್ಷತಾತೀತವಾಗಿ ಸಾಲ ಸೌಲಭ್ಯ ಒದಗಿಸಿ ತಾರತಮ್ಯ ಮಾಡ ಬೇಡಿ ಎಂದು ಕಿವಿ ಮಾತು ಹೇಳಿದರಲ್ಲದೆ, ಮೂರು ಬಾರಿ ಸಾಲ ಮನ್ನಾ ಅಗಿದ್ದವರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ಕೊಡಲಾಗುತ್ತಿದ್ದು, ಹೊಸ ಸದಸ್ಯರಿಗೆ ಸಾಲ ಕೊಡಿ ಎಂದು ತಿಳಿಸಿದರು.

ಸಹಕಾರ ಸಂಘಗಳ ಕಾರ್ಯದರ್ಶಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು, ರೈತರು ನಿಮ್ಮಗಳ ಮೇಲೆ ನಂಬಿಕೆ ಇಟ್ಟು ಸಾಲ ಪಡೆಯುತ್ತಾರೆ, ನಂಬಿಕೆ ಉಳಿಸುವ ಕೆಲಸ ಮಾಡಿ ಹಾಗಾದಾಗ ಸಹಕಾರ ಸಂಘಗಳು ಉಳಿದಾಗ ಮಾತ್ರ ರೈತರು ಬದುಕು ಹಸನಾಗುತ್ತದೆ ಎಂದು ಕಿವಿಮಾತು ಹೇಳಿ ಸಂಘದ ಕಟ್ಟಡ ನಿರ್ಮಾಣಕ್ಕೆ 5 ಲಕ್ಷ ಅನುದಾನ ಕೊಡುವುದಾಗಿ ಘೋಷಿಸಿದರು.

Latest Videos
Follow Us:
Download App:
  • android
  • ios