ಮಂಗಳೂರು(ಫೆ.28): ಮಂಗಳೂರು ಹೊರವಲಯದ ಮುಡಿಪಿನಲ್ಲಿ ಗುರುವಾರ ನಡೆದ ವಿವಾಹ ವಧೂಗ್ರಹ ಪ್ರವೇಶ ಸಮಾರಂಭದಲ್ಲಿ 15 ಮಂದಿ ಯೋಧರನ್ನು ಗೌರವಿಸುವ ಮೂಲಕ ವಿಶೇಷ ಮೇಲ್ಪಂಕ್ತಿ ಹಾಕಿಕೊಟ್ಟವಿದ್ಯಮಾನ ನಡೆಯಿತು.

ಸಹಕಾರ ಸಂಘದ ಧುರೀಣ ಟಿ.ಜಿ.ರಾಜಾರಾಮ ಭಟ್ಟರ ಸಹೋದರ, ಇಲ್ಲಿನ ತೆಕ್ಕುಂಜ ನಿವಾಸಿ, ಪ್ರಸ್ತುತ ಮುಂಬೈನಲ್ಲಿ ಉದ್ಯಮಿಯಾಗಿರುವ ಪ್ರಕಾಶ್‌ ಭಟ್‌ರವರ ಪುತ್ರ ಉತ್ತಮ ಹಾಗೂ ಮೂಡಂಬೈಲು ನಿವಾಸಿ ಧೃತಿ ಇವರ ವಿವಾಹ ಬುಧವಾರ ನಡೆದಿತ್ತು. ಮರುದಿನ ವಧೂಗೃಹ ಪ್ರವೇಶ ಸಮಾರಂಭ ನಡೆಯಿತು. ಈ ವೇಳೆ ನಿವೃತ್ತರೂ ಸೇರಿದಂತೆ 15 ಮಂದಿ ಯೋಧರಿಗೆ ಗೌರವಾರ್ಪಣೆ ನೆರವೇರಿಸಲಾಯಿತು.

ಬಿಜೆಪಿಯವ್ರಿಗೆ ಪಾಕ್ ವೈರಸ್ ಬಂದಿದೆ ಎಂದ ಸಚಿವ

ದೇಶವನ್ನು ಕಾಯುವ ಯೋಧರಿಗೆ ಗೌರವಿಸುವ ಸಲುವಾಗಿ ನಡೆದ ಸರಳ ಸಮಾರಂಭದಲ್ಲಿ ಯೋಧರಾದ ಪೂವಪ್ಪ ಕಡಂಬಾರು, ಉಮೇಶ್‌ ಕುಲಾಲ್‌ ದುಗ್ಗಜ್ಜರ ಕಟ್ಟೆ, ಟಿ.ರಾಮ ಭಟ್‌, ಡಾ.ಮೋಹನ ಭಟ್‌ ಪೆಲತ್ತಡ್ಕ, ಶಿವಕುಮಾರ್‌ ಕಾಕುಂಜೆ, ಪ್ರಭಾಕರ ಎಂ., ರಾಮಕೃಷ್ಣ ಶಾಸ್ತ್ರಿ, ಗೋಪಾಲ, ಕಂಬಳಪದವು ಮಹಾಲಿಂಗ ಭಟ್‌, ಶಿವರಾಮ ಬಿ., ವೇಣುಗೋಪಾಲ ಭಟ್‌ ಪಾದೆಕಲ್ಲು, ಜಿನ್ನಪ್ಪ ನಾಯ್ಕ ಬೇಡಗುಡ್ಡೆ, ದಿನಕರ ಕೋಟ್ಯಾನ್‌ ಡಾ.ರಮಣ ಶಾಸ್ತ್ರಿ, ಪುದುಕ್ಕೋಳಿ ಮಹೇಶ್‌ ಭಟ್‌ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಧೂವರರ ಪಾಲಕರಾದ ವೆಂಕಟ್ರಮಣ ಶಾಸ್ತ್ರಿ ಮತ್ತು ಪ್ರಕಾಶ್‌ ಭಟ್‌ ಇವರು ಯೋಧರಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಿದರು.