ಗಾಂಜಾ ವ್ಯಾಪಾರಿ ಬಂಧನ: 15 ಕೆ.ಜಿ ಗಾಂಜಾ ವಶ

ತಿಪಟೂರು, ಅರಸೀಕೆರೆ, ಚನ್ನರಾಯಪಟ್ಟಣ ಸೇರಿದಂತೆ ವಿವಿಧ ಭಾಗಗಳಲ್ಲಿ ಗಾಂಜಾವನ್ನು ನೇರವಾಗಿ ಮಾರಾಟ ಮಾಡುತ್ತಿದ್ದ ವ್ಯಕ್ತಿ ಹಾಗೂ ಸುಮಾರು 15 ಕೆ.ಜಿ 430 ಗ್ರಾಂ ಗಾಂಜಾ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ಉಪಅಧೀಕ್ಷಕ ನಾರಾಯಣ್‌ನಾಯ್ಕ ತಿಳಿಸಿದ್ದಾರೆ.

15 kgs of Marijuana seized merchant arrested in tumakur

ತುಮಕೂರು(ಡಿ.01): ತಿಪಟೂರು, ಅರಸೀಕೆರೆ, ಚನ್ನರಾಯಪಟ್ಟಣ ಸೇರಿದಂತೆ ವಿವಿಧ ಭಾಗಗಳಲ್ಲಿ ಗಾಂಜಾವನ್ನು ನೇರವಾಗಿ ಮಾರಾಟ ಮಾಡುತ್ತಿದ್ದ ವ್ಯಕ್ತಿ ಹಾಗೂ ಸುಮಾರು 15 ಕೆ.ಜಿ 430 ಗ್ರಾಂ ಗಾಂಜಾ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ಉಪಅಧೀಕ್ಷಕ ನಾರಾಯಣ್‌ನಾಯ್ಕ ತಿಳಿಸಿದ್ದಾರೆ.

ನಗರದ ಅಬಕಾರಿ ಇಲಾಖೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರು, ತುಮಕೂರಿನ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ನಮ್ಮ ತಂಡದ ಸಹಾಯದಿಂದ ಆರೋಪಿ ದುಪ್ಪಟ್ಟಿಮಲ್ಲಯ್ಯನನ್ನು ಗಾಂಜಾ ಸಹಿತವಾಗಿ ಬಂಧಿಸಲಾಗಿದೆ.

'ಸೇಬಿನ ಹಾರ ಹಾಕಿಸ್ಕೊಂಡು ಮುಂದಿನ ಊರಿಗೆ ಹೋಗೋದಷ್ಟೆ ಡಿಕೆಶಿ ಕೆಲಸ'..!

ನಮಗೆ ಬಂದ ಮಾಹಿತಿಯ ಪ್ರಕಾರ ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಸಂಜೆ 5.30ರ ವೇಳೆಗೆ ಬೆಂಗಳೂರು-ಶಿವಮೊಗ್ಗ ಬಸ್‌ನಲ್ಲಿ ತುಮಕೂರಿನಿಂದ ತಿಪಟೂರಿಗೆ ವಿವಿಧ ಗಾಂಜಾ ಮಾರಾಟಗಾರರಿಗೆ ನೇರ ಮಾರಾಟ ಮಾಡಲು ಬಂದಿದ್ದ ಆಂಧ್ರಪ್ರದೇಶದ ವಾರಂಗಲ್‌ ಜಿಲ್ಲೆಯ ಆತ್ಮಕೂರು ಮಂಡಲ್‌ನ ಪುಲಕೂರ್ತಿ ಗ್ರಾಮದ ದುಪ್ಪಟ್ಟಿಮಲ್ಲಯ್ಯ ಎಂಬ ಆರೋಪಿಯನ್ನು ಒಣ ಗಾಂಜಾ ಸಹಿತ ವಶಪಡಿಸಿಕೊಂಡು, ಆತನನ್ನು ದಸ್ತಗಿರಿ ಮಾಡಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಈವರೆಗೂ 18 ಕೆ.ಜಿ. ಗಾಂಜಾ ವಶ:

2 ತಿಂಗಳಲ್ಲಿ ತಿಪಟೂರು ಉಪವಿಭಾಗ ವ್ಯಾಪ್ತಿಯಲ್ಲಿ ಒಟ್ಟು 7 ಪ್ರಕರಣಗಳು ಹಾಗೂ 18 ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. 6 ದ್ವಿಚಕ್ರ ವಾಹನ, 1 ಆಟೋ ರಿಕ್ಷಾ, 3 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಒಟ್ಟು ಇದುವರೆಗೆ 18 ಕೆ.ಜಿ. 430 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ತಾಲೂಕಿನಲ್ಲಿ ಗಾಂಜಾ ಬಳಕೆದಾರರು ಹಾಗೂ ಮಾರಾಟಗಾರರನ್ನು ಹಂತ ಹಂತವಾಗಿ ಕಡಿಮೆ ಮಾಡುತ್ತಾ ಬಂದಿದ್ದು, ಸ್ಥಳೀಯವಾಗಿ ಮಾರಾಟ ಮಾಡುವವರ ವಿರುದ್ಧ ಈಗಾಗಲೇ ಬಲೆ ಬೀಸಲಾಗಿದೆ. ಈ ಬಗ್ಗೆ ಶಾಲಾ-ಕಾಲೇಜುಗಳಲ್ಲಿ ಅರಿವು ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಗುವುದು ಎಂದಿದ್ದಾರೆ.

ಮಂಗಳೂರು ಲಿಟ್ ಫೆಸ್ಟ್‌ ಸಂಭ್ರಮ, ಒಂದೇ ವೇದಿಕೆಯಲ್ಲಿ ಸಾಹಿತಿಗಳ ಸಂಗಮ

ಸುದ್ದಿಗೋಷ್ಠಿಯಲ್ಲಿ ಅಬಕಾರಿ ನಿರೀಕ್ಷಕರಾದ ವಿಜಯ್‌ಕುಮಾರ್‌, ಅರುಣ್‌ಕುಮಾರ್‌, ನಾಗರಾಜು, ಗಂಗರಾಜು, ರಾಮಲಿಂಗಯ್ಯ, ರಕ್ಷಕರಾದ ಸ್ವಾಮಿ, ಪ್ರಸನ್ನ, ರೇವಣ್ಣ, ರವಿ, ಕೇಶವ್‌ ಸೇರಿದಂತೆ ಸಿಬ್ಬಂದಿ ಇದ್ದರು.

ಕರ್ತವ್ಯದ ವೇಳೆ ಹೃದಯಾಘಾತ: ಟ್ರಾಫಿಕ್ ಪೊಲೀಸ್ ಇನ್ಸ್ ಪೆಕ್ಟರ್ ನಿಧನ

Latest Videos
Follow Us:
Download App:
  • android
  • ios