Asianet Suvarna News Asianet Suvarna News

ಕೊರೋನಾ ಕಾಟ: ಬೆಂಗ್ಳೂರಲ್ಲಿ 1500ರ ಗಡಿಗೆ ತಲುಪಿದ ಸೋಂಕಿತರ ಸಂಖ್ಯೆ

ನಗರದಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 4,24,349ಕ್ಕೆ ಏರಿಕೆ| 4,06,449ಕ್ಕೆ ತಲುಪಿದ ಗುಣಮುಖರ ಸಂಖ್ಯೆ|  ಈ ಪೈಕಿ 55 ರೋಗಿಗಳ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ| ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ 4,572ಕ್ಕೆ ಏರಿಕೆ| 

1490 New Corona Cases at Bengaluru on March 26th grg
Author
Bengaluru, First Published Mar 27, 2021, 7:38 AM IST

ಬೆಂಗಳೂರು(ಮಾ.27): ನಗರದಲ್ಲಿ ಶನಿವಾರ 1490 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, 632 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಮೂರು ಮಂದಿ ಮೃತಪಟ್ಟ ವರದಿಯಾಗಿದೆ.

ಈ ಮೂಲಕ ನಗರದಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 4,24,349ಕ್ಕೆ ಏರಿಕೆಯಾಗಿದ್ದು, ಗುಣಮುಖರ ಸಂಖ್ಯೆ 4,06,449ಕ್ಕೆ ತಲುಪಿದೆ. ಈ ಪೈಕಿ 55 ರೋಗಿಗಳ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರ ಸಾವಿನೊಂದಿಗೆ ಈವರೆಗೆ ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ 4,572ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕರ್ನಾಟಕದಲ್ಲಿ ಕೊರೋನಾ 2ನೇ ಅಲೆ ಆರ್ಭಟ: ಇಲ್ಲಿದೆ ಮಾ.26ರ ಅಂಕಿ-ಸಂಖ್ಯೆ

9 ವಿದ್ಯಾ​ರ್ಥಿ​ಗ​ಳಿಗೆ ಕೊರೋನಾ

ಬಿಬಿಎಂಪಿಯ ಜೋಗು​ಪಾಳ್ಯ ಶಾಲೆ​ಯ​ 9 ವಿದ್ಯಾ​ರ್ಥಿ​ಗ​ಳಿಗೆ ಕೊರೊನಾ ಸೋಂಕು ದೃಢ​ಪ​ಟ್ಟಿರುವ ಹಿನ್ನೆಲೆಯಲ್ಲಿ ಪಾಲಿಕೆ ಈ ಶಾಲೆ​ಯನ್ನು ಕ್ಲಸ್ಟರ್‌ ಎಂದು ಘೋಷಿ​ಸಿದೆ. ಮುಂಜಾ​ಗ್ರತಾ ಕ್ರಮ​ವಾಗಿ ಐದು ದಿನ​ಗಳ ಕಾಲ ಶಾಲೆ​ಯ​ನ್ನು ಮುಚ್ಚ​ಲಾ​ಗಿದೆ. ಸೋಂಕಿತ ವಿದ್ಯಾರ್ಥಿಗಳನ್ನು ಎಚ್‌ಎಎಲ್‌ ಕೋವಿಡ್‌ ಆರೈಕೆ ಕೇಂದ್ರಕ್ಕೆ ದಾಖಲಿಸಲಾಗಿದೆ.

ಈ ಶಾಲೆ​ಯಲ್ಲಿ ಒಟ್ಟು 51 ಜನ ವಿದ್ಯಾ​ರ್ಥಿ​ಗಳಿದ್ದು, ಪಾಲಿ​ಕೆಯ ಆರೋ​ಗ್ಯಾ​ಧಿ​ಕಾ​ರಿ​ಗಳು ಮಾ.24ರಂದು ವಿದ್ಯಾ​ರ್ಥಿ​ಗ​ಳನ್ನು ಕೊರೋನಾ ಸೋಂಕು ಪರೀ​ಕ್ಷೆಗೆ ಒಳ​ಪ​ಡಿ​ಸಿದ್ದರು. ಇದೀಗ 9 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿರುವುದರಿಂದ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಪರೀಕ್ಷೆಗೆ ಒಳಪಡಿಸಲು ಪಾಲಿಕೆ ಕ್ರಮ ಕೈಗೊಂಡಿದೆ.
 

Follow Us:
Download App:
  • android
  • ios