Asianet Suvarna News Asianet Suvarna News

Tumakur: ಬರಗಾಲ ಪೀಡಿತ ಪ್ರದೇಶಗಳಿಗೆ 148 ಕೋಟಿ ಪರಿಹಾರ

ಜಿಲ್ಲಿಯಲ್ಲಿ 10 ತಾಲೂಕುಗಳ ಪೈಕಿ 9 ತಾಲೂಕುಗಳಲ್ಲಿ ಸಕಾಲಕ್ಕೆ ಮಳೆ ಬಾರದೇ ರೈತರು ಅಲ್ಪ ಪ್ರಮಾಣದ ತೇವಾಂಶಕ್ಕೆ ಬಿತ್ತಿದ ಬಹುತೇಕ ಎಲ್ಲ ಬೆಳೆಗಳು ಸಂಪೂರ್ಣ ನಾಶವಾಗಿರುವ ಹಿನ್ನೆಲೆಯಲ್ಲಿ ತುಮಕೂರು ತಾಲೂಕು ಒಂದು ಸಾಧಾರಣ ಪ್ರದೇಶವೆಂದು ಇನ್ನೂಳಿದ 9 ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿದೆ.

148 crore relief for drought affected areas snr
Author
First Published Oct 7, 2023, 8:41 AM IST

  ಮಧುಗಿರಿ :  ಜಿಲ್ಲಿಯಲ್ಲಿ 10 ತಾಲೂಕುಗಳ ಪೈಕಿ 9 ತಾಲೂಕುಗಳಲ್ಲಿ ಸಕಾಲಕ್ಕೆ ಮಳೆ ಬಾರದೇ ರೈತರು ಅಲ್ಪ ಪ್ರಮಾಣದ ತೇವಾಂಶಕ್ಕೆ ಬಿತ್ತಿದ ಬಹುತೇಕ ಎಲ್ಲ ಬೆಳೆಗಳು ಸಂಪೂರ್ಣ ನಾಶವಾಗಿರುವ ಹಿನ್ನೆಲೆಯಲ್ಲಿ ತುಮಕೂರು ತಾಲೂಕು ಒಂದು ಸಾಧಾರಣ ಪ್ರದೇಶವೆಂದು ಇನ್ನೂಳಿದ 9 ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿದೆ. ಸರ್ಕಾರದ ಮಾರ್ಗ ಸೂಚಿಯಂತೆ ಪ್ರತಿ ಹಕ್ಟೇರ್‌ಗೆ 8.500. ರು.ನಂತೆ 148 ಕೋಟಿ ರು. ಪರಿಹಾರ ನೀಡುವ ಉದ್ದೇಶವಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌ ತಿಳಿಸಿದರು.

ಕೇಂದ್ರ ಬರ ಅಧ್ಯಯನ ತಂಡದ ಅಶೋಕ ಕುಮಾರ್‌ ನೇತೃತ್ವದಲ್ಲಿ ಮಧುಗಿರಿ ತಾಲೂಕಿನ ಮಾಡಾಗನಾಹಟ್ಟಿ, ಡಿ.ವಿ.ಹಳ್ಳಿ ಮತ್ತು ಕೈ ಮರ ಗ್ರಾಮಗಳಲ್ಲಿ ರೈತರು ಬಿತ್ತಿದ ಬೆಳೆ ಹಾನಿ ವೀಕ್ಷಿಸಿ ಮಾತನಾಡಿದರು.

ತಾಲೂಕಿನಲ್ಲಿ ಒಟ್ಟು 20,667 ಹೆಕ್ಟೇರ್‌ ಬೆಳೆ ನಾಶವಾಗಿದ್ದು, ಈ ಪೈಕಿ ರಾಗಿ 1668 ಹೆಕ್ಟೇರ್‌, ಜೋಳ 7854 ಹೆಕ್ಟೇರ್‌, ಈ ಭಾಗದ ಪ್ರಮುಖ ಆರ್ಥಿಕ ಬೆಳೆ ಶೇಂಗಾ 8660 ಹೆಕ್ಟೇರ್‌, ತೊಗರಿ 1455 ಹೆಕ್ಟೇರ್‌ ಬೆಳೆಗಳು ನಾಶವಾಗಿದ್ದು, 87 ಕೋಟಿ 70 ಲಕ್ಷದ 58 ಸಾವಿರದ 888 ರು. ನಷ್ಠವಾಗಿದೆ ಎಂದು ಅಂದಾಜು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ರೈತರು ಇನ್ನೂ ಹೆಚ್ಚು ಪರಿಹಾರ ನೀಡುವಂತೆ ಒತ್ತಾಯಿಸಿದ್ದು, ಈ ಮನವಿಯನ್ನು ಕೇಂದ್ರ ಬರ ಅಧ್ಯಯನ ತಂಡದ ಗಮನಕ್ಕೆ ತರುವುದಾಗಿ ತಿಳಿಸಿ, ಪ್ರಸ್ತುತ ಜಿಲ್ಲೆಯ ಹಂಗಾಮಿನಲ್ಲಿ 4ಲಕ್ಷ 17 ಸಾವಿರದ 678 ಮೇವು ಮಿನಿ ಕಿಟ್ಟಗಳ ಬೇಡಿಕೆಯಿದ್ದು, ಕೊಳವೆ ಬಾವಿ ಹೊಂದಿರುವ ರೈತರನ್ನು ಗುರುತಿಸಿ ಮೇವು ಮನಿ ಕಿಟ್‌ ಬೆಳೆಯಲು ಯೋಜನೆ ರೂಪಿಸಲಾಗುತ್ತಿದೆ. ಇದಲ್ಲದೆ ಕೇಂದ್ರ ಸರ್ಕಾರದ ನರೇಗಾ ಯೋಜನೆಯಡಿ ಗ್ರಾಮೀಣಾಭಿವೃದ್ಧಿ , ಕೃಷಿ, ಅರಣ್ಯ ಇನ್ನೂ ಅನೇಕ ಇಲಾಖೆಗಳ ಮೂಲಕ ರೈತರಿಗೆ ಉದ್ಯೋಗಾ ವಕಾಶ ನೀಡುವ ಯೋಜನೆಯಿದೆ ಎಂದರು.

ಕೇಂದ್ರ ಬರ ಅಧ್ಯಯನ ತಂಡದ ನೇತೃತ್ವವನ್ನು ಅಶೋಕ್‌ಕುಮಾರ್‌ ವಹಿಸಿದ್ದು, ಇವರ ಜೊತೆಯಲ್ಲಿ ಕರಣ್‌ ಚೌದರಿ, ಸಂಗೀತ ಕುಮಾರ್‌ ತಂಡದಲ್ಲಿದ್ದರು.

ಜಿ.ಪಂ. ಸಿಇಒ ಪ್ರಭು, ಮಧುಗಿರಿ ಉಪವಿಭಾಗಾಧಿಕಾರಿ ರಿಷಿ ಆನಂದ್‌, ತಹಸೀಲ್ದಾರ್‌ ಸಿಗ್ಬತ್‌ವುಲ್ಲಾ, ತಾಲೂಕು ಇಒ ಲಕ್ಷ್ಮಣ್‌, ಯೋಜನಾಧಿಕಾರಿ ಮಧುಸೂದನ್‌, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಹನುಮಂತರಾಯಪ್ಪ, ರೇಷ್ಮೆ ಸಹಾಯಕ ನಿರ್ದೆ\ರ್ದೇಶಕ ಲಕ್ಷ್ಮೀನರಸಯ್ಯ, ಪಶು ಇಲಾಖೆ ಸಿದ್ದನಗೌಡ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಿವಣ್ಣ ಇದ್ದರು.

Follow Us:
Download App:
  • android
  • ios