ಬೆಂಗಳೂರು (ಡಿ. 19)   ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿಯಲ್ಲಿರುವ ಕಾರಣ  ಡಿಸೆಂಬರ್ 21 ರಂದು ಮುಸ್ಲಿಂ ಸಂಘಟನೆ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು  ವಾಪಸ್ ಪಡೆದಿದೆ.

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನ ಮಾಡಲಾಗಿತ್ತು. ಧಾರುಲ್ ಉಲುಂ ಸಬೀಬುರ್ ರಷಾದ್ ಸಂಘಟನೆ ಪ್ರತಿಭಟನೆಗೆ ನಿರ್ಧರಿಸಿತ್ತು. ಬೆಂಗಳೂರಿನ ಮುಸಲ್ಮಾನ್ ಧರ್ಮಗುರು ಮೌಲಾನ ಸಗೀರ್ ಅಹಮದ್ ಸಾಬ್ ನೇತೃತ್ವದಲ್ಲಿ ಪ್ರತಿಭಟನೆಗೆ ಸಿದ್ಧತೆ ನಡೆದಿತ್ತು.

ಪೌರತ್ವದ ರೋಷಾಗ್ನಿ: ಫೇಸ್ಬುಕ್, ವಾಟ್ಸಪ್ ಅಡ್ಮಿನ್‌ಗಳೇ ಜೋಕೆ

ಮುಸ್ಲಿಂ ಧರ್ಮಗುರು ಮೌಲಾನ ಸಗೀರ್ ಅಹಮದ್ ಸಾಬ್ ಹೇಳಿಕೆ ನೀಡಿದ್ದು ರಾಜ್ಯದಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ. ದೇಶದ ಕಾನೂನನ್ನು ‌ನಾವು ಗೌರವಿಸುತ್ತೇವೆ. ಪೊಲೀಸರಿಗೆ ನಾವು ಸಹಕಾರ ನೀಡಬೇಕು. ಹಾಗಾಗಿ ಡಿಸೆಂಬರ್ 21ರ ಪ್ರತಿಭಟನೆಯನ್ನು ಮುಂದೂಡಿದ್ದೇವೆ.  ಮುಂದಿನ ಪ್ರತಿಭಟನೆಯ ಬಗ್ಗೆ ಶೀಘ್ರವೇ ನಿರ್ಧಾರ ಮಾಡುತ್ತೇವೆ. ಎಲ್ಲರೂ ಶಾಂತಿಯಿಂದ ಇರಬೇಕು, ಯಾರು ಗಲಾಟೆ ಮಾಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.