ಹುಬ್ಬಳ್ಳಿ (ಸೆ.13):  ರಾಜ್ಯದೆಲ್ಲೆಡೆ ಗಾಂಜಾ ಘಮಲು ಸದ್ದು ಮಾಡುತ್ತಿರುವ ಬೆನ್ನಲ್ಲೆ ನಗರದಲ್ಲಿ ಬರೋಬ್ಬರಿ .14 ಲಕ್ಷ ಕಿಮ್ಮತ್ತಿನ ಸಿಗರೇಟ್‌ ಕಳ್ಳತನವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಇಲ್ಲಿನ ಗದಗ ರಸ್ತೆ ಐಟಿಸಿ ಗೋದಾಮಿನಿಂದ ಗಬ್ಬೂರು ಗ್ರಾಮದ ಆರ್‌ಟಿಒ ಆಫೀಸ್‌ನ ಮಧ್ಯದಲ್ಲಿ ಗೂಡ್ಸ್‌ ನಿಲ್ಲಿಸಿದ್ದ ವೇಳೆ ಘಟನೆ ನಡೆದಿದೆ. ಗೂಡ್ಸ್‌ ಮೇಲ್ಭಾಗದಲ್ಲಿ ಕಟ್ಟಿದ್ದ ತಾಡಪಾಲನ್ನು ಹರಿದಿರುವ ಕಳ್ಳರು ಸಿಗರೇಟ್‌ ತುಂಬಿದ್ದ ಬಾಕ್ಸನ್ನು ಕದ್ದೊಯ್ದಿದ್ದಾರೆ. 

ಹುಬ್ಬಳ್ಳಿ-ಧಾರವಾಡ: ಗ್ರಾಮೀಣ ಭಾಗದಲ್ಲೂ ಇದೆ ಗಾಂಜಾ ಘಾಟು! ...

5,30,439 ರು. ಮೌಲ್ಯದ 5 ಬಾಕ್ಸ್‌ ಗೋಲ್ಡ್‌ ಫ್ಲೇಕ್‌ ಸಿಗರೇಟ್‌, 7,35,885 ರು. ಮೌಲ್ಯದ ಗೋಲ್ಡ್‌ ಫ್ಲೇಕ್‌ ಕಿಂಗ್‌ ಸಿಗರೇಟ್‌ 5 ಬಾಕ್ಸ್‌, 1,47,177 ರು. ಮೌಲ್ಯದ ಗೋಲ್ಡ್‌ ಫ್ಲೇಕ್‌ ಕಿಂಗ್‌ ಬ್ಲೂ ಸಿಗರೇಟ್‌ 1 ಬಾಕ್ಸ್‌ ಸೇರಿದಂತೆ ಇನ್ನೂ ಐದು ಬಗೆಯ ಸಿಗರೇಟ್‌ ಬಂಡಲ್‌ಗಳು ಕಳುವಾಗಿವೆ. ಒಟ್ಟಾರೆ 14,46,698 ರು. ಮೌಲ್ಯದ ಸಿಗರೇಟ್‌ ಕಳುವಾಗಿದೆ ಎಂದು ಚಾಲಕ ದ್ಯಾಮಣ್ಣ ನೀಲಪ್ಪ ಬಡಿಗೇರ ಎಂಬವರು ಬೆಂಡಿಗೇರಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ತನಿಖೆಯಲ್ಲಿದೆ.