ಬೆಂಗಳೂರು (ಆ.25):  ರಾಜ್ಯದಲ್ಲಿ ಸೋಮವಾರ 5,851 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಬರೋಬ್ಬರಿ 130 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಈ ಪೈಕಿ ಮೈಸೂರಿನಲ್ಲಿ ಒಂದೇ ದಿನ 25 ಸಾವು ವರದಿಯಾಗಿದೆ.

ಸೋಮವಾರ 39,817 ಮಂದಿಗೆ ಪರೀಕ್ಷೆ ನಡೆಸಿದ್ದು, 5851 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2.83 ಲಕ್ಷಕ್ಕೆ ಏರಿಕೆಯಾಗಿದೆ. ಉಳಿದಂತೆ 8,061 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 1.97 ಲಕ್ಷಕ್ಕೆ ಏರಿಕೆಯಾಗಿದೆ.

ಅಂತರ್‌ ರಾಜ್ಯ ಪ್ರಯಾಣಿಕರಿಗೆ ಇದ್ದ ಎಲ್ಲಾ ಷರತ್ತುಗಳು‌ ರದ್ದು, ಸೀಲ್ ಇಲ್ಲ, ಕ್ವಾರಂಟೈನ್ ಇಲ್ಲ

ಇನ್ನು ಸೋಮವಾರ 130 ಮಂದಿ ಸಾವನ್ನಪ್ಪಿದ್ದು, ಬೆಂಗಳೂರು ನಗರದಲ್ಲೇ 26 ಮಂದಿ ಸಾವನ್ನಪ್ಪಿದ್ದಾರೆ. ಇದೇ ಮೊದಲ ಬಾರಿಗೆ ಬೆಂಗಳೂರೇತರ ನಗರಗಳಲ್ಲಿ ಹೆಚ್ಚಿನ ಸಾವು ವರದಿಯಾಗಿದ್ದು ಮೈಸೂರಿನಲ್ಲಿ 25 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 4810ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲೀಗ ಒಟ್ಟು 81,211 ಮಂದಿ ಸಕ್ರಿಯ ಸೋಂಕಿತರಿದ್ದು, ಈ ಪೈಕಿ 768 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸಿಯು ರೋಗಿಗಳ ಪೈಕಿ ಬೆಂಗಳೂರಿನಲ್ಲೇ 250 ಮಂದಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಟ್ಟು ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 1918, ಬೆಳಗಾವಿ 319, ಬಳ್ಳಾರಿ 306, ಬೆಂಗಳೂರು ಗ್ರಾಮಾಂತರ 35, ಬೀದರ್‌ 83, ಚಾಮರಾಜನಗರ 29, ಚಿಕ್ಕಬಳ್ಳಾಪುರ 76, ಚಿಕ್ಕಮಗಳೂರು 123, ಚಿತ್ರದುರ್ಗ 28, ದಕ್ಷಿಣ ಕನ್ನಡ 201, ದಾವಣಗೆರೆ 167, ಧಾರವಾಡ 221, ಗದಗ 141, ಹಾಸನ 200, ಹಾವೇರಿ 148, ಕಲಬುರಗಿ 176, ಕೊಡಗು 35, ಕೋಲಾರ 45, ಕೊಪ್ಪಳ 271, ಮಂಡ್ಯ 82, ಮೈಸೂರು 202, ರಾಯಚೂರು 183, ರಾಮನಗರ 49, ಶಿವಮೊಗ್ಗ 220, ತುಮಕೂರು 85, ಉಡುಪಿ 104, ಉತ್ತರ ಕನ್ನಡ 91, ವಿಜಯಪುರ 138, ಯಾದಗಿರಿ 122, ಬಾಗಲಕೋಟೆಯಲ್ಲಿ 53 ಮಂದಿಗೆ ಸೋಂಕು ದೃಢಪಟ್ಟಿದೆ.

ಕಲಬುರಗಿ: ಸಂಸದ ಡಾ.ಜಾಧವ್‌ ಕುಟುಂಬದ ಬಹುತೇಕರಿಗೆ ಕೊರೋನಾ ಸೋಂಕು

ಮೈಸೂರು 25 ಸಾವು: ಬೆಂಗಳೂರು ನಗರದಲ್ಲಿ 26 ಮಂದಿ ಮೃತಪಟ್ಟಿದ್ದು ಒಟ್ಟು ಸಾವು 1,694ಕ್ಕೆ ಏರಿಕೆಯಾಗಿದೆ. ಮೈಸೂರಿನಲ್ಲಿ 25 ಸಾವು ವರದಿಯಾಗಿದ್ದು ಈವರೆಗೆ ಒಟ್ಟು 345 ಮಂದಿ ಸಾವನ್ನಪ್ಪಿದಂತಾಗಿದೆ. ಉಳಿದಂತೆ ದಾವಣಗೆರೆ 7, ಕೊಪ್ಪಳ 7, ಬಳ್ಳಾರಿ 6, ದಕ್ಷಿಣ ಕನ್ನಡ 6, ಬಾಗಲಕೋಟೆ 3, ಬೆಳಗಾವಿ 5, ಚಾಮರಾಜನಗರ 2, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 3, ಧಾರವಾಡ 2, ಹಾಸನ 6, ಹಾವೇರಿ 6, ಕಲಬುರಗಿ 2, ರಾಯಚೂರು 2, ರಾಮನಗರ 3, ತುಮಕೂರು, ಉಡುಪಿ, ವಿಜಯಪುರ ತಲಾ 4, ಮಂಡ್ಯ, ಉತ್ತರ ಕನ್ನಡ, ಯಾದಗಿರಿ, ಗದಗ, ಬೀದರ್‌ ತಲಾ ಒಂದು ಸಾವು ವರದಿಯಾಗಿದೆ.