ಚಿಕ್ಕಮಗಳೂರು: ಹೃದಯಾಘಾತದಿಂದ 7ನೇ ತರಗತಿ ವಿದ್ಯಾರ್ಥಿನಿ ಸಾವು

ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನ ದಾರದಹಳ್ಳಿ ಸರ್ಕಲ್ ಬಳಿ ನಡೆದ ಘಟನೆ.  

13 Year Student Dies Due to Heart Attack in Chikkamagaluru grg

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು(ಡಿ.20):  ಶಾಲೆಗೆ ತೆರಳಲು ಬಸ್ ಕಾಯುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದ ಬಾಲಕಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನ ದಾರದಹಳ್ಳಿ ಸರ್ಕಲ್ ಬಳಿ ಇಂದು(ಬುಧವಾರ) ನಡೆದಿದೆ. 

ಮೂಡಿಗೆರೆ ತಾಲೂಕಿನ ಜೊಗಣ್ಣನಕೆರೆ ಗ್ರಾಮದ ಕೆಸವಳಲು ಸಮೀಪದ ಸೃಷ್ಟಿ(13) ಮೃತ ಶಾಲಾ ಬಾಲಕಿಯಾಗಿದ್ದು, ದಾರದಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಸೃಷ್ಟಿ ಗ್ರಾಮದ ಅರ್ಜುನ ಹಾಗೂ ಸುಮ ದಂಪತಿಗಳ ಮಗಳಾಗಿದ್ದು, ಇಂದು ಬೆಳಿಗ್ಗೆ ಶಾಲೆಗೆ ಹೊಗಲು ದಾರದಹಳ್ಳಿ ಸರ್ಕಲ್ ಬಳಿ ಕುಸಿದು ಬಿದ್ದಿದ್ದಾಳೆ. 

ಚಳಿಗಾಲದಲ್ಲಿ ಹೃದಯಾಘಾತ ಆಗ್ಬಾರ್ದು ಅಂದ್ರೆ ತಜ್ಞರ ಈ ಟಿಪ್ಸ್ ಫಾಲೋ ಮಾಡಿ

ಕೂಡಲೇ ಮೂಡಿಗೆರೆ ಎಂ.ಜಿ.ಎಂ ಆಸ್ಪತ್ರೆಗೆ ಬಾಲಕಿಯನ್ನು ರವಾನಿಸಿದ್ದಾರೆ. ಆದರೆ ಸ್ಥಳದಲ್ಲೆ ತೀವ್ರ ಹೃದಯಾಘಾತದಿಂದ ನಿಧನ ಹೊಂದಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮೃತ ವಿದ್ಯಾರ್ಥಿನಿಯ ಪಾರ್ಥಿವ ಶರೀರವನ್ನು ಕೆಸವಳಲಿಗೆ ತೆಗೆದುಕೊಂಡು ಹೊಗಲಾಗಿದೆ. ತಾಯಿ ತಂದೆ ಇಬ್ಬರು ಸಹೋದರಿಯರು ಒಬ್ಬ ಸಹೊದರರನ್ನು ಸೃಷ್ಟಿ ಅಗಲಿದ್ದಾಳೆ.

Latest Videos
Follow Us:
Download App:
  • android
  • ios