Koppal: ಕಾಮಗಾರಿ ಗುಂಡಿಗೆ ಬಿದ್ದು 13 ತಿಂಗಳಿನ ಮಗು ದಾರುಣ ಸಾವು
* ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುರುಡಿ ಗ್ರಾಮದಲ್ಲಿ ನಡೆದ ಘಟನೆ
* ಗುಂಡಿಯಲ್ಲಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಮಗು
* ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟ ಮಗು
ಯಲಬುರ್ಗಾ(ಫೆ.09): ಜಲಜೀವನ ಮಿಷನ್(Jal Jeevan Mission) ಯೋಜನೆ ಕಾಮಗಾರಿಯ ಪೈಪ್‌ಲೈನ್ ಗುಂಡಿಯಲ್ಲಿ 13 ತಿಂಗಳಿನ ಮಗು(Child) ಬಿದ್ದು ಸಾವಿಗೀಡಾದ ಘಟನೆ ತಾಲೂಕಿನ ಮುರುಡಿ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೊಪ್ಪಳ(Koppal) ತಾಲೂಕಿನ ಶಿವಪುರ ಗ್ರಾಮದ ಬಾಲಕಿ ಅನುಪಮ ನಿಂಗಪ್ಪ ಬಂಗಾರಿ ಮೃತಳಾದ(Death) ದುರ್ದೈವಿ.
ತನ್ನ ಅಜ್ಜಿಯ ಮನೆ ಮುರುಡಿ ಗ್ರಾಮಕ್ಕೆ ಆಗಮಿಸಿದಾಗ ಗ್ರಾಮದಲ್ಲಿ ಜಲಜೀವನ ಮಿಷನ್ ಯೋಜನೆಯ ಪೈಪ್‌ಲೈನ್ ಕಾಮಗಾರಿಗೆಂದು 1 ತಿಂಗಳ ಹಿಂದೆ ತೆಗೆದಿರುವ ಗುಂಡಿಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ತುಂಡಾಗಿ ನಲ್ಲಿಯ ನೀರು ಸಂಗ್ರಹಗೊಂಡಿದ್ದು, ಆಟವಾಡಲು ತೆರಳಿದ್ದ ಮಗು ಆ ಗುಂಡಿಗೆ ಬಿದ್ದು ತೀವ್ರ ಗಾಯಗೊಂಡಿದೆ. ಚಿಕಿತ್ಸೆಗೆಂದು(Treatment) ಬಾಲಕಿಯನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ವೇಳೆ ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಒಂದು ತಿಂಗಳ ಹಿಂದೆ ತೆಗೆದಿರುವ ಪೈಪ್‌ಲೈನ್ ಗುಂಡಿ ಮುಚ್ಚದೆ ಇರುವುದರಿಂದ ಈ ಘಟನೆಗೆ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಬೇವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.
ತಾಯಿ-ಮಗು ಸಾವಿಗೆ ವೈದ್ಯರ ನಿರ್ಲಕ್ಷ್ಯ ಆರೋಪ: ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆ ವಿರುದ್ಧ ದೂರು!
ಹೆರಿಗೆ ವೇಳೆ ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವು’
ಶಿಕಾರಿಪುರ(Shikaripur): ಹೆರಿಗೆ(Delivery) ಸಂದರ್ಭದಲ್ಲಿ ವೈದ್ಯರ(Doctors) ನಿರ್ಲಕ್ಷ್ಯದಿಂದಾಗಿ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಜ.1 ರಂದು ತಾಲೂಕಿನ ಎಂಸಿಆರ್‌ಪಿ ಕಾಲೋನಿ ಜನತೆ ಪಟ್ಟಣದ ಸಾರ್ವಜನಿಕರ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ ಪಟ್ಟಣ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ.
ತಾಲೂಕಿನ ಎಂಸಿಆರ್‌ಪಿ ಕಾಲೋನಿ ಮಹಿಳೆ ಹೇಮಾವತಿ ಹೆರಿಗೆಗಾಗಿ ಶುಕ್ರವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಹೆರಿಗೆ ನೋವು ಆರಂಭಗೊಂಡು ಹೆರಿಗೆ ಮಾಡಿಸುವ ಹಂತದವರೆಗೂ ಯಾವುದೇ ವೈದ್ಯರು ಪರೀಕ್ಷೆ ಮಾಡಲಿಲ್ಲ. ನರ್ಸ್‌ಗಳು ಮಾತ್ರ ಹೆರಿಗೆ ಮಾಡಿಸಲು ಆರಂಭಿಸಿದರು ಮಗು ಸ್ವಲ್ಪ ಹೊರಗೆ ಬಂದ ನಂತರ ಅದನ್ನು ವಾಪಾಸ್ ಹೊಟ್ಟೆಯೊಳಗೆ ದಬ್ಬಿ, ಬಟ್ಟೆಸುತ್ತಿ ಶಿವಮೊಗ್ಗಕ್ಕೆ(Shivamogga) ಕಳುಹಿಸಿದ್ದಾರೆ. ಈ ಕುರಿತು ಅಲ್ಲಿದ್ದ ನರ್ಸ್‌ಗಳಿಗೆ ಕೇಳಿದರೆ. ಜೋರು ಮಾಡಿ ಕಳುಹಿಸಿದರು. ಶಿವಮೊಗ್ಗಕ್ಕೆ ತೆರಳುವಷ್ಟರಲ್ಲಿ ಮಗು ಸಾವನ್ನಪ್ಪಿತ್ತು. ಸೂಕ್ತ ಚಿಕಿತ್ಸೆ ನೀಡಿದ ಕಾರಣಕ್ಕೆ ತಾಯಿ ಉಳಿಸಲು ಸಾಧ್ಯವಾಯಿತು. ಮಗು 3.8 ಕೆಜಿ ಇತ್ತು, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಯಾರೂ ಇಲ್ಲದ ಕಾರಣಕ್ಕೆ, ಸೌಲಭ್ಯವಿದ್ದರೂ ಸೂಕ್ತ ಚಿಕಿತ್ಸೆ ನೀಡದ ಕಾರಣಕ್ಕೆ ಮಗು ಸಾವನ್ನಪ್ಪಿದೆ. ಈ ಹಿನ್ನೆಲೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಮಾವತಿ ಅವರ ಗಂಡ ಜಗದೀಶ ಪಟ್ಟಣ ಠಾಣೆಗೆ ದೂರು ಸಲ್ಲಿಸಿದ್ದಾರೆ.
Accident: ಹಿಟಾಚಿ ಹರಿದು ಮೂರು ವರ್ಷದ ಮಗು ದಾರುಣ ಸಾವು
ಪೊಲೀಸ್ ಠಾಣೆಗೆ ದೂರು ನೀಡುವುದಕ್ಕೂ ಮುನ್ನ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿ ಆಡಳಿತಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ರಾಘು ನಾಯ್ಕ, ರೇಣುಕಾಬಾಯಿ, ಸಾಕಿಬಾಯಿ ಮತ್ತಿತರರು ಇದ್ದರು.
5ನೇ ಮಹಡಿಯಿಂದ ಆಯತಪ್ಪಿ ಬಿದ್ದು 2 ವರ್ಷದ ಮಗು ಸಾವು
ಬೆಂಗಳೂರು(Bengaluru): ಅಪಾರ್ಟ್‌ಮೆಂಟ್‌ನ(Apartment) ಐದನೇ ಮಹಡಿಯಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗುವೊಂದು ಆಯ ತಪ್ಪಿ ಬಿದ್ದು ಮೃಪಟ್ಟಿರುವ ದಾರುಣ ಘಟನೆ ಎಲೆಕ್ಟ್ರಾನಿಕ್‌ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ನೀಲಾದ್ರಿ ಇನ್‌ವೆಸ್ಟ್‌ಮೆಂಟ್ ಲೇಔಟ್ ಬಳಿ ನಡೆದಿದೆ.
ಎಲೆಕ್ಟ್ರಾನಿಕ್ ಸಿಟಿಯ ನಿವಾಸಿ ರವೀಂದ್ರ ರೆಡ್ಡಿ ದಿವ್ಯಾಂಶಿ ಜಸ್ವಿಕ್ ರೆಡ್ಡಿ ಮೃತ ದುರ್ದೈವಿ. ನೀಲಾದ್ರಿ ಇನ್‌ವೆಸ್ಟ್‌ಮೆಂಟ್‌ನಲ್ಲಿರುವ ಬರ್ನಿಕಾ ಕಾಸ್ಟ್ ಅಪಾರ್ಟ್‌ಮೆಂಟ್‌ನಲ್ಲಿ ಮೃತ ಮಗು ತಂದೆ ಫ್ಲ್ಯಾಟ್ ನೋಡಲು ತೆರಳಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು(Police) ಹೇಳಿದ್ದಾರೆ.