Asianet Suvarna News Asianet Suvarna News

ಕೊಡಗಿನಲ್ಲಿ ಮೂರು ತಿಂಗಳ ಮಗು ಸೇರಿ 13 ಮಂದಿಗೆ ಸೋಂಕು

ಕೊಡಗು ಜಿಲ್ಲೆಯಲ್ಲಿ ಬುಧವಾರ ಕೊರೋನಾ ಸೋಂಕಿನ 13 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಅರ್ಧ ಶತಕವನ್ನು ಮೀರಿದೆ.

 

13 covid19 cases in madikeri including 3 months old baby
Author
Bangalore, First Published Jul 2, 2020, 10:17 AM IST

ಮಡಿಕೇರಿ(ಜು.02): ಕೊಡಗು ಜಿಲ್ಲೆಯಲ್ಲಿ ಬುಧವಾರ ಕೊರೋನಾ ಸೋಂಕಿನ 13 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಅರ್ಧ ಶತಕವನ್ನು ಮೀರಿದೆ. ಜಿಲ್ಲೆಯಲ್ಲಿ ಕೋವಿಡ್‌- 19 ಸೋಂಕಿತರ ಸಂಖ್ಯೆ 60ಕ್ಕೇರಿದ್ದು, 3 ಪ್ರಕರಣ ಗುಣಮುಖವಾಗಿರುತ್ತದೆ, 57 ಪ್ರಕರಣಗಳು ಸಕ್ರಿಯವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿರುವ ನಿಯಂತ್ರಿತ ಪ್ರದೇಶಗಳ ಸಂಖ್ಯೆ ಒಟ್ಟು 24 ಆಗಿದೆ.

ವಿರಾಜಪೇಟೆ ತಾಲೂಕಿನ ಹುಂಡಿ ಗ್ರಾಮವೊಂದರಲ್ಲೇ 3 ತಿಂಗಳ ಮಗು, 6 ವರ್ಷದ ಮಗು ಹಾಗೂ 11 ವರ್ಷದ ಬಾಲಕ ಸೇರಿದಂತೆ 9 ಮಂದಿಗೆ ಸೋಂಕು ತಗುಲಿದ್ದು, ತಿತಿಮತಿ ಹಾಗೂ ಶನಿವಾರಸಂತೆಯಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ. ನೆಲ್ಯಹುದಿಕೇರಿಯ ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಹುಂಡಿ ಗ್ರಾಮದ 3 ತಿಂಗಳ ಮಗು, 6 ವರ್ಷದ ಮಗು, 11 ವರ್ಷದ ಬಾಲಕ, 29, 43, 56, 61 ಹಾಗೂ 87 ವರ್ಷದ ವ್ಯಕ್ತಿಗಳಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.

'ಆಯುಷ್ಮಾನ್‌ ಕಾರ್ಡ್‌ ಇದ್ರೆ ಕೋವಿಡ್‌ ಚಿಕಿತ್ಸೆ ಉಚಿತ'

ಮತ್ತೊಂದೆಡೆ ಶನಿವಾರಸಂತೆಯ ಗುಂಡೂರಾವ್‌ ಬಡಾವಣೆಯ 47 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು. ಈತ ಶಿರಂಗಾಲದ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದರೆನ್ನಲಾಗಿದೆ. ಶನಿವಾರಸಂತೆಯ ಗುಂಡೂರಾವ್‌ ಬಡಾವಣೆಯಲ್ಲಿ ಹೊಸದಾಗಿ ನಿಯಂತ್ರಿತ ಪ್ರದೇಶವನ್ನು ತೆರೆಯಲಾಗಿದೆ.

ವಿರಾಜಪೇಟೆ ತಾಲೂಕಿನ ತಿತಿಮತಿ ಗ್ರಾಮದ 65 ವರ್ಷದ ವ್ಯಕ್ತಿಯಲ್ಲೂ ಸೋಂಕು ದೃಢಪಟ್ಟಿದ್ದು, ತಿತಿಮತಿ ಗ್ರಾಮದಲ್ಲಿ ನಿಬಂರ್‍ಧಿತ ಪ್ರದೇಶ ಘೋಷಿಸಲಾಗಿದೆ. ಹುಂಡಿ ಹಾಗೂ ಶನಿವಾರಸಂತೆ ಗುಂಡೂರಾವ್‌ ಬಡಾವಣೆಯಲ್ಲಿ ಈಗಾಗಲೇ ಘೋಷಿಸಲಾಗಿರುವ ಸೀಲ್‌ಡೌನ್‌ ಪ್ರದೇಶದ ವ್ಯಾಪ್ತಿಯಲ್ಲಿ ಹಾಲಿ ಸೋಂಕಿತರ ನಿವಾಸಗಳು ಇರುವುದರಿಂದ ಹೊಸದಾಗಿ ನಿಬಂರ್‍ಧಿತ ಪ್ರದೇಶ ಘೋಷಿಸಲಾಗಿಲ್ಲ ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ತಿಳಿಸಿದ್ದಾರೆ.

SSLC ಪರೀಕ್ಷೆ ಬರೆದ 3 ವಿದ್ಯಾರ್ಥಿಗಳಿಗೆ ವಕ್ಕರಿಸಿದ ಕೊರೋನಾ

ಸೋಮವಾರಪೇಟೆ ತಾಲೂಕು ಕೊಡ್ಲಿಪೇಟೆ ಹೋಬಳಿ ಶಿರಂಗಾಲ ಗ್ರಾಮದಲ್ಲಿ ಈ ಹಿಂದೆ ಸೋಂಕು ದೃಢಪಟ್ಟವ್ಯಕ್ತಿಯ ದ್ವಿತೀಯ ಸಂಪರ್ಕದ ಸೋಮವಾರಪೇಟೆ ತಾಲೂಕು ಬಳಗುಂದ ಗ್ರಾಮದ 47 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಶಿರಂಗಾಲ ಗ್ರಾಮದಲ್ಲಿ ಈ ಹಿಂದೆ ಸೋಂಕು ದೃಢಪಟ್ಟವ್ಯಕ್ತಿಯ ದ್ವಿತೀಯ ಸಂಪರ್ಕದಿಂದ ಬಳಗುಂದ ಗ್ರಾಮದ 37 ವರ್ಷದ ಸ್ತ್ರೀಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಈ ಪ್ರಕರಣಗಳು ನಿಯಂತ್ರಿತ ಪ್ರದೇಶದಲ್ಲಿಯೇ ಇರು​ವು​ದ​ರಿಂದ ಹೊಸದಾಗಿ ನಿಯಂತ್ರಿತ ಪ್ರದೇಶಗಳನ್ನು ತೆರೆದಿರುವುದಿಲ್ಲ ಎಂದು ಡಿಸಿ ಪ್ರಕ​ಟ​ಣೆ​ಯಲ್ಲಿ ತಿಳಿ​ಸಿ​ದ್ದಾರೆ.

ಕೊಡಗು 01-07-2020

ಒಟ್ಟು ಸೋಂಕಿ​ತರು 60

ಗುಣ​ಮು​ಖ​ರಾ​ದ​ವರು 03

ಸಕ್ರಿಯ ಪ್ರಕ​ರ​ಣ​ಗಳು 57

ಸಾವು- 00

Follow Us:
Download App:
  • android
  • ios