Asianet Suvarna News Asianet Suvarna News

ಸವದತ್ತಿ: ಯಲ್ಲಮ್ಮ ದೇಗುಲದಲ್ಲಿ 13.91 ಕೋಟಿ ಸಂಗ್ರಹ

ಉತ್ತರ ಕರ್ನಾಟಕದ ಪ್ರಸಿದ್ಧ ಕ್ಷೇತ್ರ ಯಲ್ಲಮ್ಮ ದೇವಸ್ಥಾನಕ್ಕೆ 13.91 ಕೋಟಿ ಸಂಗ್ರಹ 

13.91 Crore Rs Collected in Savadatti Yallamma Devi Temple at Belagavi grg
Author
First Published Sep 25, 2022, 10:45 AM IST

ಸವದತ್ತಿ(ಸೆ.25):  ಉತ್ತರ ಕರ್ನಾಟಕದ ಪ್ರಸಿದ್ಧ ಕ್ಷೇತ್ರ ಯಲ್ಲಮ್ಮ ದೇವಸ್ಥಾನಕ್ಕೆ 13.91 ಕೋಟಿ ಸಂಗ್ರಹ ಆಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಬಸವರಾಜ ಜೀರಗಾಳ ಹೇಳಿದ್ದಾರೆ.

ನಿರಂತರ ನಾಲ್ಕು ದಿನಗಳ ಕಾಲ ನಡೆದ ಹುಂಡಿ ಎಣಿಕೆ ಸೆ. 23ರಂದು ಕೊನೆಗೊಂಡಿದ್ದು ಹುಂಡಿಯಲ್ಲಿ ಬೆಳ್ಳಿ ಮತ್ತು ಚಿನ್ನಾಭರಣ ಸಹ ಸಂಗ್ರಹವಾಗಿದದೆ. 175 ಗ್ರಾಂ ಬಂಗಾರ ಹಾಗೂ 3.54 ಕೆಜಿ ಬೆಳ್ಳಿ ಸಂಗ್ರಹವಾಗಿರುವುದು ಕಂಡು ಬಂದಿದೆ. ಇದು ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತರಿಂದ ಸಂಗ್ರಹಿಸಿದ ಹಣ ಮತ್ತು ಚಿನ್ನಾಭರಣ. ದೇವಸ್ಥಾನಕ್ಕೆ ಈ ಅವಧಿಯಲ್ಲಿ ಸಂಗ್ರಹವಾದ ಹೆಚ್ಚಿನ ಮೊತ್ತ ಇದಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

IPS ಅಧಿಕಾರಿಯನ್ನೂ ಬಿಡದ ಸೈಬರ್ ಖದೀಮರು: BELAGAVI SP ಹೆಸರಲ್ಲಿ ನಕಲಿ INSTAGRAM ಖಾತೆ!

ಪ್ರತಿ ಬಾರಿ ಭಕ್ತರು ತಮ್ಮ ಬೇಡಿಕೆ ಈಡೇರಿಸಬೇಕೆಂದು ದೇವಿಯಲ್ಲಿ ಪ್ರಾರ್ಥಿಸಿ ಹಲವಾರು ಪತ್ರಗಳನ್ನು ಹುಂಡಿಯಲ್ಲಿ ಹಾಕುತ್ತಾರೆ. ಈ ಬಾರಿ ಬೆಳಗಾವಿ ಜಿಲ್ಲಾ ವಿಭಜನೆಯ ವಿಷಯವಾಗಿ ಮುಖ್ಯಮಂತ್ರಿಗೆ ಬುದ್ಧಿ ಕೊಡು ತಾಯಿ ಎಂಬ ವಿಚಾರದಲ್ಲಿ ಅನಾಮಿಕ ಭಕ್ತರೊಬ್ಬರು ಪತ್ರವನ್ನು ಹುಂಡಿಯಲ್ಲಿ ಹಾಕಿರುವುದು ತಿಳಿದು ಬಂದಿದೆ. ಬೆಳಗಾವಿ ಅಖಂಡ ಜಿಲ್ಲೆಯನ್ನು ನಾಲ್ಕು ಭಾಗ ಮಾಡಿ ಬೆಳಗಾವಿ, ಚಿಕ್ಕೋಡಿ, ಗೋಕಾಕ, ಬೈಲಹೊಂಗಲ ಕೇಂದ್ರವಾಗಿರಿಸಿಕೊಂಡು ಹೊಸ ಜಿಲ್ಲೆಗಳನ್ನಾಗಿಸಲು ಶ್ರೀದೇವಿ ಮುಖ್ಯಮಂತ್ರಿಗೆ ಬುದ್ಧಿ ನೀಡಲಿ ಎಂದು ಬರೆದ ಪತ್ರವೊಂದು ಎಣಿಕೆ ಸಂದರ್ಭದಲ್ಲಿ ಕಂಡುಬಂದಿದೆ.
 

Follow Us:
Download App:
  • android
  • ios