Asianet Suvarna News Asianet Suvarna News

IPS ಅಧಿಕಾರಿಯನ್ನೂ ಬಿಡದ ಸೈಬರ್ ಖದೀಮರು: Belagavi SP ಹೆಸರಲ್ಲಿ ನಕಲಿ Instagram ಖಾತೆ!

 • ಬೆಳಗಾವಿ ಎಸ್‌ಪಿ ಡಾ.ಸಂಜೀವ ಪಾಟೀಲ್ ಹೆಸರಲ್ಲಿ ನಕಲಿ‌ ಇನ್‌ಸ್ಟಾಗ್ರಾಂ ಖಾತೆ
 • ಡಾ.ಸಂಜೀವ ಪಾಟೀಲ್ ಹೆಸರು ಫೋಟೋ ಬಳಸಿ ನಕಲಿ ಖಾತೆ ಸೃಷ್ಟಿ
 •  ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿದಾಗ ಡಿಲೀಟ್ ಮಾಡೋದು ಹೇಗೆ ಗೊತ್ತಾ?
Fake account in the name of Belagavi IPS Dr. Sanjeev Patil rav
Author
First Published Sep 24, 2022, 1:08 PM IST

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ಸೆ.24): ವಿಜ್ಞಾನ ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಕಳ್ಳರು ಹೈಟೆಕ್ ಆಗುತ್ತಿದ್ದು ಸೈಬರ್ ಖದೀಮರ ಸಂಖ್ಯೆ ಹೆಚ್ಚಾಗುತ್ತಿದೆ. ದೇಶದ ಯಾವುದೋ ಮೂಲೆಯಲ್ಲಿ ಕುಳಿತುಕೊಂಡು ಮೊಬೈಲ್ ಸಹಾಯದಿಂದಲೇ ವಂಚನೆ ಮಾಡುವ ಖದೀಮರಿಗೆ ಯಾರ ಭಯವೂ ಇಲ್ಲ. ಐಪಿಎಸ್ ಅಧಿಕಾರಿಗಳ ಹೆಸರಿನಲ್ಲಿಯೇ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ.  ಈ ಖತರ್ನಾಕ್ ಸೈಬರ್(cyber) ಖದೀಮರು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ್(Dr.Sanjeev Patil) ಹೆಸರಿನಲ್ಲಿ ಇನ್‌ಸ್ಟಾಗ್ರಾಂ(Instagram)ನಲ್ಲಿ ನಕಲಿ ಖಾತೆ(Fake account)ಯನ್ನು ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. 

Cyber Crime: ದ‌.ಕ‌ ಡಿಸಿ ಮೊಬೈಲ್ ನಂಬರ್ ಹ್ಯಾಕ್: ಜನತೆ ಮೋಸ ಹೋಗದಂತೆ ಡಿಸಿ ಮನವಿ

ಬೆಳಗಾವಿ(Belgavi) ಎಸ್‌ಪಿ ಡಾ‌.ಸಂಜೀವ ಪಾಟೀಲ್ ಈ ಮುಂಚೆ ಬೆಂಗಳೂರು ಪಶ್ಚಿಮ ವಲಯದ ಡಿಸಿಪಿಯಾಗಿದ್ದರು. ಡಾ‌.ಸಂಜೀವ ಪಾಟೀಲ್‌ರ ಹೆಸರಿನಲ್ಲಿ ಇನ್‌ಸ್ಟಾಗ್ರಾಂನಲ್ಲಿ ಯಾವುದೇ ಖಾತೆಯಿಲ್ಲ. ಇದನ್ನೇ ಲಾಭವನ್ನಾಗಿಸಿಕೊಂಡ ಸೈಬರ್ ಖದೀಮರು ಬೆಳಗಾವಿ ಎಸ್‌ಪಿ ಡಾ.ಸಂಜೀವ ಪಾಟೀಲ್ ಹೆಸರು ಹಾಗೂ ಫೋಟೋ‌ ಬಳಸಿ ಇನ್‌ಸ್ಟಾಗ್ರಾಂನಲ್ಲಿ Dr.Sanjeev M Patil, IPS dcpwestbengaluru_ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ 7500 ರೂಪಾಯಿ ಹಣ ವರ್ಗಾವಣೆ ಮಾಡುವಂತೆ ಫಾಲೋವರ್ಸ್ ಬಳಿ ರಿಕ್ಚೆಸ್ಟ್ ಮಾಡಿದ್ದಾನೆ. 

ಹೀಗಾಗಿ ಈ ಕುರಿತು ಬೆಳಗಾವಿ ಎಸ್‌ಪಿ ಡಾ.ಸಂಜೀವ ಪಾಟೀಲ್ ಟ್ವೀಟ್(Tweet) ಮಾಡಿದ್ದು, 'ನನ್ನ ಹೆಸರು ಮತ್ತು ಫೋಟೋ ಬಳಸಿ ಇನ್‌ಸ್ಟಾಗ್ರಾಂನಲ್ಲಿ ನಕಲಿ ಖಾತೆ ತೆರೆದು ಯಾರೋ ಸಾರ್ವಜನಿಕರಲ್ಲಿ ಹಣ ಕೇಳುತ್ತಿದ್ದಿದ್ದು ಕಂಡು ಬಂದಿದ್ದು ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಸಾರ್ವಜನಿಕರು ಇಂತಹ ಖಾತೆಗಳ ಮನವಿ ತಿರಸ್ಕರಿಸಿ ಈ ಬಗ್ಗೆ ಎಚ್ಚರಿಕೆ ವಹಿಸಲು ಕೋರಲಾಗಿದೆ' ಎಂದು ತಿಳಿಸಿದ್ದಾರೆ.

ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿದ್ದು ಕಂಡು ಬಂದ್ರೆ ಏನ್ ಮಾಡಬೇಕು?

ಯಾರಾದರೂ ನಿಮ್ಮ ಹೆಸರು ಮತ್ತು ನಿಮ್ಮ ಪ್ರೊಫೈಲ್ ಅಥವಾ ನಿಮ್ಮ ಸ್ನೇಹಿತರನ್ನು ಬಳಸಿಕೊಂಡು ಯಾರಾದರೂ ನಕಲಿ ಖಾತೆ ರಚಿಸಿದ್ದು ಕಂಡು ಬಂದ್ರೆ, ನಕಲಿ ಫೇಸ್‌ಬುಕ್ ಖಾತೆಯನ್ನು ತಕ್ಷಣವೇ ಡಿಲೀಟ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು.

 •  ನಕಲಿ ಫೇಸ್‌ಬುಕ್ ಖಾತೆ ಪ್ರೊಫೈಲ್ ಪುಟ(Profile Page)ಕ್ಕೆ ಹೋಗಿ
 •  Add Friend ಮತ್ತು ಮೆಸೇಜ್ ಟ್ಯಾಬ್‌ನ ಮುಂದೆ ಕಂಡುಬರುವ 3 ಚುಕ್ಕೆಗಳ (...) ಮೇಲೆ ಕ್ಲಿಕ್ ಮಾಡಿ

 ಕ್ಲಿಕ್ ಮಾಡಿದಾಗ, ನೀವು ಮೂರು ಆಯ್ಕೆಗಳನ್ನು ಕಾಣಬಹುದು 

 •  Search Profile
 •  Find Support or report profile
 •  Block

ಅದರಲ್ಲಿ, Find Support or Report Profile ಎಂಬ ಎರಡನೇ ಆಯ್ಕೆಯನ್ನು ಕ್ಲಿಕ್ ಮಾಡಿ

 •  ಕ್ಲಿಕ್ ಮಾಡಿದಾಗ, 'Report' ಎಂಬ ಹೆಸರಿನ ಪಾಪ್ ಅಪ್ ಸಂದೇಶ ಬಾಕ್ಸ್ ತೆರೆಯುತ್ತದೆ. ಅದರಲ್ಲಿ ಮೊದಲ ಆಯ್ಕೆಯಾದ Pretending to be someone ಆಯ್ಕೆ ಮಾಡಿ
 •  ಈ ಆಪ್ಶನ್ ಮೇಲೆ ಕ್ಲಿಕ್ ಮಾಡಿದ ಬಳಿಕ ಕೆಳಭಾಗದಲ್ಲಿ ಮೂರು ಪ್ರಶ್ನೆಗಳು ಕಾಣಸಿಗುತ್ತವೆ. "Who are they pretends to be" ಮೇಲೆ ಕ್ಲಿಕ್ ಮಾಡಿ
 •  ಆ ಕ್ಲಿಕ್‌ನಲ್ಲಿ, "ME" (ನಿಮ್ಮ ಹೆಸರಿನಲ್ಲಿ ನಕಲಿ ಪ್ರೊಫೈಲ್ ರಚಿಸಿದ್ದರೆ) ಅಥವಾ "FRIEND" (ನಿಮ್ಮ facebook ಸ್ನೇಹಿತನ ಹೆಸರಿನಲ್ಲಿ ನಕಲಿ ಖಾತೆಯನ್ನು ರಚಿಸಿದ್ದರೆ) ಆಯ್ಕೆ ಮಾಡಿ
 •  ನಂತರ "Next" ಕ್ಲಿಕ್ ಮಾಡಿ. ನಂತರ ಕಾಂಬೊ ಬಾಕ್ಸ್‌ನಲ್ಲಿ ಟಿಕ್ ಮಾಡಿ ಮತ್ತು ನಂತರ "Report" ಆಯ್ಕೆಮಾಡಿ ಕ್ಲಿಕ್ ಮಾಡಿ. ನಂತರ "Next" ಕ್ಲಿಕ್ ಮಾಡಿ. ಮಾಡಿ.

ಮೇಲಿನ ಹಂತಗಳನ್ನು ಅನುಸರಿಸಿದ ನಂತರ, ನಕಲಿ ಖಾತೆಯ ಪ್ರೊಫೈಲ್ ಅನ್ನು 5 - 10 ನಿಮಿಷಗಳಲ್ಲಿ ಡಿಲೀಟ್ ಆಗುತ್ತದೆ. ಎಂದು ಸೈಬರ್ ಕ್ರೈಮ್ ಸೆಲ್‌ನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow Us:
Download App:
 • android
 • ios