Asianet Suvarna News Asianet Suvarna News

ಸುಧಾರಿತ ತಳಿಯ ಮಾಹಿತಿಗೆ ಮುಗಿಬಿದ್ದ ರೈತರು, ತೋಟಗಾರಿಕಾ ಮೇಳಕ್ಕೆ 12 ಸಾವಿರ ಜನ!

ಹೆಸರುಘಟ್ಟದಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ(ಐಐಎಚ್‌ಆರ್‌) ಆವರಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತೋಟಗಾರಿಕೆ ಮೇಳದ ಎರಡನೇ ದಿನವಾದ ಗುರುವಾರ 12 ಸಾವಿರಕ್ಕೂ ಹೆಚ್ಚು ರೈತರು ಭೇಟಿ ನೀಡಿದ್ದರು.

 

12 thousand people attends Gardening Fair in bangalore
Author
Bangalore, First Published Feb 7, 2020, 10:11 AM IST

ಬೆಂಗಳೂರು(ಫೆ.07): ಹೆಸರುಘಟ್ಟದಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ(ಐಐಎಚ್‌ಆರ್‌) ಆವರಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತೋಟಗಾರಿಕೆ ಮೇಳದ ಎರಡನೇ ದಿನವಾದ ಗುರುವಾರ 12 ಸಾವಿರಕ್ಕೂ ಹೆಚ್ಚು ರೈತರು ಭೇಟಿ ನೀಡಿದ್ದರು.

ಅಧಿಕ ಇಳುವರಿ ನೀಡುವ ಅರ್ಕಾ ಉದಯ್‌ ಮತ್ತು ಅರ್ಕಾ ಸುಪ್ರಭಾತ ತಳಿ ಮಾವು, ಅಧಿಕ ಇಳುವರಿಯ ಅರ್ಕಾ ಭೀಮ್‌ ಈರುಳ್ಳಿ, ಅರ್ಕಾ ತಳಿಯ ಟಮೋಟಾ, ಮೆಣಸು ಹೀಗೆ ವಿವಿಧ ಅರ್ಕಾ ಸರಣಿಯ ಸುಧಾರಿತ ತಳಿಗಳ ಕುರಿತು ಐಐಎಚ್‌ಆರ್‌ ಹೆಚ್ಚಿನ ಪ್ರಚಾರಕ್ಕೆ ಆದ್ಯತೆ ನೀಡಿದ್ದರಿಂದ ರೈತರಲ್ಲಿಯೂ ಆಸಕ್ತಿ ಹೆಚ್ಚಿತ್ತು. ಮೇಳಕ್ಕೆ ಆಗಮಿಸಿದ ಬಹುತೇಕ ರೈತರು ಅರ್ಕಾ ಸರಣಿಯ ತಳಿಗಳ ಬೀಜ ಖರೀದಿ ಮತ್ತು ಬೆಳೆ ಬೆಳೆಯುವ ವಿಧಾನ, ತಂತ್ರಜ್ಞಾನಗಳ ತಿಳುವಳಿಕೆ ಪಡೆಯಲು ಸಂಸ್ಥೆಯ ವಿಜ್ಞಾನಿಗಳ ಮೊರೆ ಹೋಗಿದ್ದರು.

ಅಮಿತ್ ಶಾ, ಮೋದಿಯಿಂದ ಶಾಂತಿ ಕದಡೋ ಕೆಲಸ: ದೊರೆಸ್ವಾಮಿ

ಇನ್ನು ಬಹುತೇಕ ರೈತ ಮಹಿಳೆಯರು ಬಗೆಬಗೆಯ ಹೂವಿನ ತಾಕುಗಳಿಗೆ ಹೋಗಿ, ಪುಷ್ಪ ವೈವಿಧ್ಯತೆ ಮನಸೋತಿದ್ದರು. ಕಡಿಮೆ ಎತ್ತರದ ಚೆಂಡು ಹೂವಿನ ಗಿಡದಲ್ಲಿ ಬೆಳೆದ ಕೇಸರಿ, ಹಳದಿ, ಕೆಂಪು ಬಣ್ಣದ ಹೂವುಗಳು, ಅಲಂಕಾರಿಕ ಗ್ಲಾಡಿಯೋಲಸ್‌, ಜಬೇ¸ಜ್ಞ್ರಾದಲ್ಲಿ ಅರ್ಕಾ ವೈಟ್‌, ಹಸಿರು ದಂಟಿನ ತಳಿ, ಸುಗಂಧರಾಜ, ಸಾಲು ಮಡಿಗಳಲ್ಲಿ ಬೆಳೆದ ಒಂದೆಲಗದ ಗುಂಪು ಕಂಡು ಪುಳಕಿತಗೊಂಡರು.

ಇನ್ನೂ ವಿವಿಧ ಶಾಲಾ-ಕಾಲೇಜುಗಳಿಂದ ಮೇಳಕ್ಕೆ ಬಂದಿದ್ದ ವಿದ್ಯಾರ್ಥಿಗಳು, ವಿವಿಧ ಜಿಲ್ಲೆಗಳ ರೈತರು, ಸಾರ್ವಜನಿಕರು ಡ್ರ್ಯಾಗನ್‌ ಫä್ರಟ್‌ ಗಿಡಗಳು, ಟೊಮೆಟೋ, ಸಿಹಿಗುಂಬಳ, ಸೊರೆಕಾಯಿ, ಕಲ್ಲಂಗಡಿ, ಚಕೋತಾ ಮರಗಳ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಮಗ್ನರಾಗಿದ್ದರು. ಅನೇಕರು ವಿವಿಧ ತಳಿಯ ಸಸಿಗಳನ್ನು ಖರೀದಿಸುತ್ತಿದ್ದರೆ, ಹಲವರು ಮಳಿಗೆಗಳಲ್ಲಿ ಇಟ್ಟಿದ್ದ ನೂತನ ತಂತ್ರಜ್ಞಾನಗಳು, ವಿವಿಧ ತಳಿಯ ತೋಟಗಾರಿಕಾ ಬೆಳೆಗಳ ಕುರಿತು ಕುತೂಹಲದಿಂದ ಮಾಹಿತಿ ಸಂಗ್ರಹದಲ್ಲಿ ತೊಡಗಿದ್ದರು.

Follow Us:
Download App:
  • android
  • ios