ಸಂಸದ ಡಾ. ಉಮೇಶ ಜಾಧವ್‌, ಅವರ ಪುತ್ರ ಚಿಂಚೋಳಿ ಶಾಸಕ ಡಾ. ಅವಿನಾಶ್‌ಗೆ ಕೊರೋನಾ ಸೋಂಕು ಧೃಢ| ಬೆಂಗಳೂರಿನಲ್ಲಿರುವ ಸರಕಾರಿ ವ್ಯವಸ್ಥೆಯ ಬೌರಿಂಗ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ| ಈ ಬಗ್ಗೆ ಸ್ವತಃ ಟ್ವೀಟ್‌ ಮಾಡಿ ವಿಷಯ ತಿಳಿಸಿದ ಸಂಸದ ಡಾ. ಉಮೇಶ ಜಾಧವ್‌| 

ಕಲಬುರಗಿ(ಆ.20): ಸಂಸದ ಡಾ. ಉಮೇಶ ಜಾಧವ್‌ ಹಾಗೂ ಅವರ ಪುತ್ರ, ಚಿಂಚೋಳಿ ಶಾಸಕ ಡಾ. ಅವಿನಾಶ್‌ ಜಾಧವ್‌ ಇಬ್ಬರಿಗೂ ಬುಧವಾರ ಹೆಮ್ಮಾರಿ ಕೊರೋನಾ ಸೋಂಕು ಧೃಢಪಟ್ಟಿದೆ. 

ಇವರಿಬ್ಬರು ಇದೀಗ ವೈದ್ಯರ ಸಲಹೆಯಂತೆ ಬೆಂಗಳೂರಿನಲ್ಲಿರುವ ಸರಕಾರಿ ವ್ಯವಸ್ಥೆಯ ಬೌರಿಂಗ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮಗಿಬ್ಬರಿಗೂ ಕೊರೋನಾ ಸೋಂಕು ಧೃಢವಾಗಿರುವ ಬಗ್ಗೆ ಸ್ವತಃ ಸಂಸದ ಡಾ. ಉಮೇಶ ಜಾಧವ್‌ ಟ್ವೀಟ್‌ ಮಾಡಿದ್ದು ಜ್ವರ, ಕೆಮ್ಮಿನ ಲಕ್ಷಣ ಕಂಡಾಕ್ಷಣ ತಾವು ಹಾಗೂ ತಮ್ಮ ಪುತ್ರ ಇಬ್ಬರೂ ಕೋವಿಡ್‌ ಪರೀಕ್ಷೆಗೊಳಗಾಗಿದ್ದು ಸೋಂಕು ಧೃಢವಾಗಿದೆ ಎಂದಿದ್ದಾರೆ. 

'ಸರ್ಕಾರಿ ಆಸ್ಪತ್ರೆಗಳ ಚಿಕಿತ್ಸೆ ಬಗ್ಗೆ ಸಿಎಂ ಯಡಿಯೂರಪ್ಪಗೇ ನಂಬಿಕೆ ಇಲ್ಲ'

ತಮ್ಮಿಬ್ಬರ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಕೋವಿಡ್‌ ಪರೀಕ್ಷೆಗೆ ಒಳಗಾಗುವಂತೆಯೂ, ಸ್ವತಃ ಕ್ವಾರಂಟೈನ್‌ ಆಗುವಂತೆಯೂ ಡಾ. ಜಾಧವ್‌ ಕೋರಿದ್ದಾರೆ.