Asianet Suvarna News Asianet Suvarna News

6 ಕುಟುಂಬದವರಿಂದ 12 ಜನಕ್ಕೆ ದೃಷ್ಟಿದಾನ

6 ಕುಟುಂಬದವರಿಂದ 12 ಜನಕ್ಕೆ ದೃಷ್ಟಿ ಸಿಕ್ಕಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ರವಿಕುಮಾರ್‌ ನೇತೃತ್ವದಲ್ಲಿ ಮೃತರಿಂದ ನೇತ್ರಗಳನ್ನು ತೆಗೆದರು. ಈ ನೇತ್ರಗಳನ್ನು ಎನ್‌.ಎಸ್‌.ನಾಗದೀಶ್‌ ಅವರ ಸಹಕಾರದಿಂದ ಬೆಂಗಳೂರಿನ ಲಯನ್ಸ್‌ ಇಂಟರ್‌ನ್ಯಾಷನಲ್‌ ಕಣ್ಣಿನ ಆಸ್ಪತ್ರೆಗೆ ಕಳುಹಿಸಿಕೊಟ್ಟರು.

12 people got eyesight from 6 family in tumakur
Author
Bangalore, First Published Jan 24, 2020, 9:53 AM IST
  • Facebook
  • Twitter
  • Whatsapp

ತುಮಕೂರು(ಜ.24): 6 ಕುಟುಂಬದವರಿಂದ 12 ಜನಕ್ಕೆ ದೃಷ್ಟಿ ಸಿಕ್ಕಂತಾಗಿದೆ ಎಂದು ಎನ್‌ಎಸ್‌ಐ ಫೌಂಡೇಷನ್‌ ಮುಖ್ಯಸ್ಥ ಡಾ.ಎನ್‌.ಎನ್‌.ಶ್ರೀಧರ್‌ ತಿಳಿಸಿದ್ದಾರೆ. ತುಮಕೂರು ಸರ್ಕಾರಿ ಆಸ್ಪತ್ರೆಯ ಹೆಸರಾಂತ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವೀರಭದ್ರಯ್ಯ, ಹೆಸರಾಂತ ನೇತ್ರತಜ್ಞ ಡಾ.ದಿನೇಶ್‌ಕುಮಾರ್‌, ಡಾ.ಮಂಜುನಾಥ್‌ ಹಾಗೂ ಜಿಲ್ಲಾ ನೇತ್ರ ತಜ್ಞ ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ರವಿಕುಮಾರ್‌ ನೇತೃತ್ವದಲ್ಲಿ ಕೆಲಸ ನಡೆದಿದೆ.

ಇಲ್ಲಿನ ಜಯನಗರದ 3ನೇ ಕ್ರಾಸ್‌ನಲ್ಲಿ ವಾಸವಾಗಿದ್ದ ನಿರ್ಮಲಾ ಟಿ.ಆರ್‌, ಮಧುಗಿರಿ ತಾಲೂಕಿನ ಪುರವರ ಹೋಬಳಿಯ ಗೋವಿಂದನಹಳ್ಳಿಯಲ್ಲಿ ವಾಸಿ ನರೇಂದ್ರಕುಮಾರ್‌ ಅವರ ಪುತ್ರ ನವೀನ್‌, ತುಮಕೂರು ಆದರ್ಶ ನಗರದ ನಿವಾಸಿ ಹೆಸರಾಂತ ಕಂಟ್ರಾಕ್ಟರ್‌ ಕೋಟಿ ರೆಡ್ಡಿ ಅವರ ಪತ್ನಿ ಸೌಭಾಗ್ಯಮ್ಮ, ಮಧುಗಿರಿ ತಾಲೂಕಿನ ಮುದ್ದಯ್ಯನಪಾಳ್ಯದ ನಿವಾಸಿ ನವೀನ್‌ಕುಮಾರ್‌, ತುಮಕೂರಿನ ಕೃಷ್ಣಾನಗರದ 2ನೇ ಕ್ರಾಸ್‌ನಲ್ಲಿ ವಾಸಿಯಾಗಿರುವ ಪದ್ಮರಾಜು, ಮಧುಗಿರಿ ತಾಲೂಕಿನ ಜಗನ್ನಾಥಯ್ಯಪಾಳ್ಯದ ನಿವಾಸಿ ಹಾಲಪ್ಪ, ತುಮಕೂರು ಸಿದ್ಧರಾಮೇಶ್ವರ ಬಡಾವಣೆ ನಿವಾಸಿ ಬಸವರಾಜು ನಿಧನರಾಗಿದ್ದು ಅವರ ಕುಟುಂಬದವರು ನೇತ್ರವನ್ನು ದಾನ ಮಾಡಿದ್ದಾರೆ.

ಸರ್ಕಾರಿ ಶಾಲೆಗೆ ಮಂಜೂರಾದ ಜಾಗವನ್ನು ಗ್ರಾಮಸ್ಥರೇ ತಟ್ಟು ಮಾಡಿದ್ರು..!

ತುಮಕೂರು ಸರ್ಕಾರಿ ಆಸ್ಪತ್ರೆಯ ಹೆಸರಾಂತ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವೀರಭದ್ರಯ್ಯ, ಹೆಸರಾಂತ ನೇತ್ರತಜ್ಞ ಡಾ.ದಿನೇಶ್‌ಕುಮಾರ್‌, ಡಾ.ಮಂಜುನಾಥ್‌ ಹಾಗೂ ಜಿಲ್ಲಾ ನೇತ್ರ ತಜ್ಞ ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ರವಿಕುಮಾರ್‌ ನೇತೃತ್ವದಲ್ಲಿ ಮೃತರಿಂದ ನೇತ್ರಗಳನ್ನು ತೆಗೆದರು. ಈ ನೇತ್ರಗಳನ್ನು ಎನ್‌.ಎಸ್‌.ನಾಗದೀಶ್‌ ಅವರ ಸಹಕಾರದಿಂದ ಬೆಂಗಳೂರಿನ ಲಯನ್ಸ್‌ ಇಂಟರ್‌ನ್ಯಾಷನಲ್‌ ಕಣ್ಣಿನ ಆಸ್ಪತ್ರೆಗೆ ಕಳುಹಿಸಿಕೊಟ್ಟರು.

ನಾರ್ಮಲ್ ಹೆರಿಗೆಗೆ ಫೇಮಸ್‌ ಇಲ್ಲಿನ ಸರ್ಕಾರಿ ಆಸ್ಪತ್ರೆ..!

ಈ ಕಾರ್ಯದಿಂದ 12 ದೃಷ್ಟಿಹೀನರಿಗೆ ದೃಷ್ಟಿಕೊಟ್ಟಂತಾಗಿ ಪಡೆದ ಭಾಗ್ಯವಂತರು ಟ್ರಸ್ಟ್‌ನ ಸದಸ್ಯರು ಮೃತರಿಗೆ ಶಾಂತಿ ಸಿಗಲೆಂದು ಪ್ರಾರ್ಥಿಸಿದ್ದಾರೆ. ಇದೇ ರೀತಿ ನೇತ್ರದಾನ ಹಾಗೂ ದೇಹದಾನ ಮಾಡುವವರು ಸ್ಥಳೀಯ ನೇತ್ರತಜ್ಞರನ್ನಾಗಲಿ ಅಥವಾ ಎನ್‌ಎಸ್‌ಐ ಫೌಂಡೇಷನ್‌ ಮುಖ್ಯಸ್ಥ ಡಾ.ಎನ್‌.ಎನ್‌.ಶ್ರೀಧರ್‌(9590066066) ಅವರನ್ನು ಸಂಪರ್ಕಿಸಬೇಕೆಂದು ಕೋರಲಾಗಿದೆ.

Follow Us:
Download App:
  • android
  • ios