Asianet Suvarna News Asianet Suvarna News

SSLC ಪರೀಕ್ಷೆ: ಕಂಟೈನ್‌ಮೆಂಟ್‌ ಪ್ರದೇಶದಿಂದ ಬಂದ 110 ವಿದ್ಯಾರ್ಥಿಗಳು

ಹೂವಿನಹಡಗಲಿ ತಾಲೂಕಿನ ವಿವಿಧೆಡೆ ಕೊರೋನಾ ಸೋಂಕು ದೃಢ|  ಈ ಹಿನ್ನೆಲೆಯಲ್ಲಿ ತಾಲೂಕಿನ ಅಡವಿನಲ್ಲನಕೆರೆ ತಾಂಡ, ಕುರುವತ್ತಿ ಮತ್ತು ಹೂವಿನಹಡಗಲಿ ಕಂಟೈನ್‌ಮೆಂಟ್‌ ಪ್ರದೇಶ ಎಂದು ಘೋಷಣೆ| ಗಣಿತ ಪರೀಕ್ಷೆಗೆ ಒಟ್ಟು 3085 ವಿದ್ಯಾರ್ಥಿಗಳು ದಾಖಲಾಗಬೇಕಿತ್ತು, ಇದರಲ್ಲಿ 2958 ವಿದ್ಯಾರ್ಥಿಗಳು ಹಾಜರಾಗಿದ್ದು 127 ವಿದ್ಯಾರ್ಥಿಗಳು ಗೈರು|
 

110 Students came From  Containment Zone in Huvinahadagali in Ballari district
Author
Bengaluru, First Published Jun 28, 2020, 10:12 AM IST

ಹೂವಿನಹಡಗಲಿ(ಜೂ.28): ಶನಿವಾರ ನಡೆದ ಗಣಿತ ಪರೀಕ್ಷೆ ಯಾವುದೇ ತೊಂದರೆ ನಡೆದಿದ್ದು, ಡಿಬಾರ್‌ ಆಗಿರುವ ಪ್ರಕರಣಗಳು ನಡೆದಿಲ್ಲವೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ನಾಗರಾಜ ತಿಳಿಸಿದ್ದಾರೆ.

ತಾಲೂಕಿನ ವಿವಿಧೆಡೆ ಕೊರೋನಾ ಸೋಂಕು ದೃಢ ಪಟ್ಟಿರುವ ಹಿನ್ನೆಲೆಯಲ್ಲಿ ತಾಲೂಕಿನ ಅಡವಿನಲ್ಲನಕೆರೆ ತಾಂಡ, ಕುರುವತ್ತಿ ಮತ್ತು ಹೂವಿನಹಡಗಲಿ ಕಂಟೈನ್‌ಮೆಂಟ್‌ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಈ ಪ್ರದೇಶದಿಂದ 110 ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆದಿದ್ದಾರೆ. ಕುರುವತ್ತಿಯಲ್ಲಿ 17, ಅಡವಿನಲ್ಲನಕೆರೆ ತಾಂಡದ 11, ವರಕನಹಳ್ಳಿ-2 ಸೇರಿದಂತೆ ಒಟ್ಟು 110 ವಿದ್ಯಾರ್ಥಿಗಳು ಮತ್ತು ಇಟಿಗಿ ವಸತಿ ನಿಲಯದಲ್ಲಿ ಅಡವಿಮಲ್ಲನಕೆರೆ ತಾಂಡದ ವಿದ್ಯಾರ್ಥಿ ಇರುವ ಹಿನ್ನೆಲೆಯಲ್ಲಿ ಆ ವಸತಿ ಶಾಲೆಯಲ್ಲಿದ್ದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಎನ್‌-95 ಮಾಸ್ಕ್‌ ನೀಡಿ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲಾಗಿದೆ. ಜತೆಗೆ ದೇಹದ ಉಷ್ಣಾಂಶ ಪರೀಕ್ಷೆ ಸಂದರ್ಭದಲ್ಲಿ ಹೆಚ್ಚು ಉಷ್ಣ ಕಂಡ ಮೂರು ವಿದ್ಯಾರ್ಥಿಗಳನ್ನು ವಿಶೇಷ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು ಎಂದು ಮಾಹಿತಿ ನೀಡಿದರು.

ಕೊಪ್ಪಳ: ಸಚಿವ ಸುರೇಶ್‌ ಕುಮಾರ್‌ಗೆ SSLC ವಿದ್ಯಾರ್ಥಿಗಳಿಂದ ಅಭಿನಂದನಾ ಪತ್ರ

ಗಣಿತ ಪರೀಕ್ಷೆಗೆ ಒಟ್ಟು 3085 ವಿದ್ಯಾರ್ಥಿಗಳು ದಾಖಲಾಗಬೇಕಿತ್ತು, ಇದರಲ್ಲಿ 2958 ವಿದ್ಯಾರ್ಥಿಗಳು ಹಾಜರಾಗಿದ್ದು 127 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಹಳ್ಳಿಗಳಿಂದ ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳನ್ನು ಕರೆ ತರಲು ಬಸ್‌ ವ್ಯವಸ್ಥೆ ಮಾಡಲಾಗಿತ್ತು. ಪರೀಕ್ಷೆ ಸಂದರ್ಭದಲ್ಲಿ ಯಾವುದೇ ತೊಂದರೆ ಇಲ್ಲದಂತೆ ಪರೀಕ್ಷೆ ನಡೆಸಲಾಗಿದೆ ಎಂದರು.
 

Follow Us:
Download App:
  • android
  • ios