Asianet Suvarna News Asianet Suvarna News

ಕೊರೋನಾ ಎಫೆಕ್ಟ್‌: ವೆಂಟಿಲೇಟರ್‌ ಸಿಗದೆ ಹಾವು ಕಚ್ಚಿದ್ದ ಬಾಲಕಿ ಸಾವು

ವೆಂಟಿಲೇಟರ್‌ ಕೊರತೆಯಿಂದಾಗಿ ಹಾವು ಕಚ್ಚಿದ್ದ ಬಾಲಕಿ ಸಾವು| ಕಲಬುರಗಿ ಜಿಲ್ಲೆ ಚಿತ್ತಾಪುರದ ಬಾರ್ಹರ ಪೇಟ್‌ ಪ್ರದೇಶದ ಆಯೇಷಾ(11) ಮೃತಪಟ್ಟ ಬಾಲಕಿ| ಬಾಲಕಿ ಆಯೇಷಾಗೆ ಹಾವು ಕಚ್ಚಿದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು| ಜಿಮ್ಸ್‌ ಆಸ್ಪತ್ರೆಯನ್ನು ಕೊರೋನಾ ರೋಗಿಗಳಿಗೆ ಮೀಸಲಾಗಿಟ್ಟಿದ್ದರಿಂದ ವೆಂಟಿಲೇಟರ್‌ ಆಗಲಿ, ಐಸಿಯು ಆಗಲಿ ಲಭ್ಯವಾಗಲಿಲ್ಲ|

11 Year Old Girl Dead for not ventilator available in JIMS Hospital in Kalaburagi
Author
Bengaluru, First Published May 10, 2020, 9:09 AM IST

ಕಲಬುರಗಿ(ಮೇ.10): ನಗರದ ಜಿಮ್ಸ್‌ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಕೊರತೆಯಿಂದಾಗಿ ಹಾವು ಕಚ್ಚಿದ್ದ 11 ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ. ಚಿತ್ತಾಪುರದ ಬಾರ್ಹರ ಪೇಟ್‌ ಪ್ರದೇಶದ ಆಯೇಷಾ(11)

ಮೃತಪಟ್ಟ ಬಾಲಕಿ.ಶುಕ್ರವಾರ ಈ ದುರಂತ ಘಟನೆ ನಡೆದಿದೆ. ಬಾಲಕಿ ಆಯೇಷಾಗೆ ಹಾವು ಕಚ್ಚಿದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಜಿಲ್ಲಾಸ್ಪತ್ರೆಗೆ ಬರುವ ವೇಳೆಗೆ ಆಯೇಷಾ ಪರಿಸ್ಥಿತಿ ಚಿಂತಾಜನಕವಾಗಿತ್ತು. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಆಯೇಷಾಗೆ ವೆಂಟಿಲೇಟರ್‌ ವ್ಯವಸ್ಥೆ ಅಗತ್ಯವಿತ್ತು. 

ಜೇವರ್ಗಿಯಲ್ಲಿ ಸಹೋದರರಿಬ್ಬರ ಬರ್ಬರ ಕೊಲೆ: ಕಾರಣ..?

ಆದರೆ, ಜಿಮ್ಸ್‌ ಆಸ್ಪತ್ರೆಯನ್ನು ಕೊರೋನಾ ರೋಗಿಗಳಿಗೆ ಮೀಸಲಾಗಿಟ್ಟಿದ್ದರಿಂದ ವೆಂಟಿಲೇಟರ್‌ ಆಗಲಿ, ಐಸಿಯು ಆಗಲಿ ಲಭ್ಯವಾಗಲಿಲ್ಲ. ಬಳಿಕ ಜಿಲ್ಲಾಸ್ಪತ್ರೆಯಿಂದ ಸಂಗಮೇಶ್ವರ ಆಸ್ಪತ್ರೆಗೆ ರವಾನಿಸುವಾಗ ಆಕೆ ಕೊನೆಯುಸಿರೆಳೆದಿದ್ದಾಳೆ. ಆದರೆ ದಾರಿ ಮಧ್ಯೆಯೇ ಆಯೇಷಾ ಮೃತಪಟ್ಟಿದ್ದಾಳೆ. ಶುಕ್ರವಾರ ರಾತ್ರಿಯೇ ಆಯೇಷಾ ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಹಸ್ತಾಂತರಿಸಲಾಯಿತು. 
 

Follow Us:
Download App:
  • android
  • ios