ಕಲಬುರಗಿ(ಮೇ.10): ದುಷ್ಕರ್ಮಿಗಳ ಗುಂಪೊಂದು ಸಹೋದರರಿಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ. ಕೊಲೆಯಾದವರನ್ನ ಕನ್ಮಡಪರ ಸಂಘಟನೆಯ ಮುಖಂಡ ಯಲ್ಲಾಲಿಂಗ ಮತ್ತು ಆತನ ಸಹೋದರ ಎಂದು ತಿಳಿದುಬಂದಿದೆ.

ಸಹೋದರಿಬ್ಬರು ಹೊಲದಲ್ಲಿದ್ದಾಗ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.ನೆಲೋಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಕೊಲೆ‌ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹಳೆ ವೈಷಮ್ಯ ಹಾಗೂ ಮರಳುಗಾರಿಕೆ ದಂಧೆಯಲ್ಲಿನ ಜಿದ್ದಾಜಿದ್ದಿಯೇ ಈ ಕೊಲೆಗೆ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ ಮಾಡಿ ಕೊರೋನಾ ಮೇಲಾಕಲು ಮುಂದಾದ ಕಿರಾತಕಿ!

ಕೊಲೆ ಮಾಡಿದ ದುಷ್ಕರ್ಮಿಗಳ ಗುಂಪು ನೆಲೋಗಿ ಪೋಲಿಸ್ ಠಾಣೆಯಲ್ಲಿ ಶರಣಾಗತರಾಗಿದ್ದಾರೆ. ಕೆಲವೊಂದಿಷ್ಟು ಜನರು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಣ್ಣ ತಮ್ಮಂದಿರನ್ನು ಕೊಲೆ ಮಾಡಿದ್ದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ.