Asianet Suvarna News Asianet Suvarna News

ರಾಮನಗರದಲ್ಲಿ ಬರೋಬ್ಬರಿ 11 ಲಕ್ಷದ 91 ಕೆಜಿ ಗಾಂಜಾ ಸೀಜ್

ಬೆಂಗಳೂರಿನ ಸಮೀಪದ ರಾಮನಗರ ಜಿಲ್ಲೆಯಲ್ಲಿ ಬರೋಬ್ಬರು 11 ಲಕ್ಷದ 91 ಕೆಜಿ ಗಾಂಜಾ ಸೀಜ್ ಮಾಡಲಾಗಿದೆ. ಇದೊಂದು ಬೃಹತ್ ಕಾರ್ಯಾಚರಣೆಯೇ ಆಗಿದೆ. 

11 Lakh  91 KG Ganja Seazed In Ramanagara
Author
Bengaluru, First Published Sep 7, 2020, 2:30 PM IST

ಎಂ.ಅಫ್ರೋಜ್ ಖಾನ್‌

 ರಾಮ​ನ​ಗರ (ಸೆ.07): ಸಿಲಿ​ಕಾನ್‌ ಸಿಟಿ ಬೆಂಗ​ಳೂ​ರಿ​ನಲ್ಲಿ ಮಾದಕ ವಸ್ತು ಮಾರಾಟ ಜಾಲ ಪತ್ತೆ​ಯಾದ ಬೆನ್ನಲ್ಲೇ ರೇಷ್ಮೆ​ನ​ಗರಿಯಲ್ಲಿಯೂ ಅಲರ್ಟ್‌ ಆಗಿ​ರುವ ಪೊಲೀ​ಸರು ಜಿಲ್ಲೆ​ಯೊ​ಳಗೆ ಮಾತ್ರ​ವ​ಲ್ಲದೆ ಗಡಿ​ಭಾ​ಗ​ದ​ಲ್ಲಿಯೂ ಗಾಂಜಾ ಮಾರಾಟ ದಂಧೆ​ಯ ಮೇಲೆ ಹದ್ದಿನ ಕಣ್ಣು ಇಟ್ಟಿ​ದ್ದಾರೆ.

ಕಳೆದ ಐದು ವರ್ಷ​ಗ​ಳಲ್ಲಿ ಜಿಲ್ಲೆಯಲ್ಲಿ ಪೊಲೀ​ಸರು ಕಾರ್ಯಾ​ಚ​ರಣೆ ನಡೆಸಿ ಸುಮಾರು 11 ಲಕ್ಷಕ್ಕೂ ಹೆಚ್ಚು ಮೌಲ್ಯದ 91 ಕೆ.ಜಿ ಗಾಂಜಾ​ವನ್ನು ವಶಪಡಿ​ಸಿ​ಕೊಂಡಿ​ದ್ದಾರೆ. ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆ​ಗ​ಳಲ್ಲಿ 52 ಪ್ರಕ​ರ​ಣ​ಗಳು ದಾಖ​ಲಾ​ಗಿವೆ. 2019ರ ಆಗಸ್ಟ್‌ನಿಂದ ಅಕ್ಟೋ​ಬರ್‌ ತಿಂಗ​ಳ ಅವ​ಧಿ​ಯ​ಲ್ಲಿಯೇ ಜಿಲ್ಲೆಯ ವಿವಿಧ ಠಾಣೆ​ಗ​ಳಲ್ಲಿ 30ಕ್ಕೂ ಹೆಚ್ಚು ಪ್ರಕ​ರ​ಣ​ಗಳು ದಾಖ​ಲಾ​ಗಿದ್ದು, ಗಾಂಜಾ ಪೂರೈಕೆ ಮಾಡು​ವ​ವ​ರನ್ನು ಬಂಧಿಸಿ 60 ಕೆ.ಜಿಗೂ ಹೆಚ್ಚು ಮಾದಕ ವಸ್ತು​ವನ್ನು ವಶ ಪಡಿ​ಸಿ​ಕೊ​ಳ್ಳ​ಲಾ​ಗಿತ್ತು.

ರಾಗಿಣಿ ಬಂಧನ ಬೆನ್ನಲ್ಲೇ ಸಂಜನಾಗೂ ಟೆನ್ಷನ್; ನೊಟೀಸ್ ನೀಡುತ್ತಾ ಸಿಸಿಬಿ?

ರಾಮನಗರದ ಐಜೂರು ಠಾಣೆ ಪೊಲೀಸರು ಕಳೆದ ವರ್ಷ ಗಾಂಜಾ ಮಾರಾಟದ ದೊಡ್ಡ ಜಾಲವೊಂದನ್ನು ಬೇಧಿಸಿದ್ದರು. ಒಮ್ಮೆಲೆ ಬರೋಬ್ಬರಿ 4.4 ಲಕ್ಷ ಮೌಲ್ಯದ 44 ಕೆ.ಜಿ.ಯಷ್ಟುಉತ್ಪನ್ನವನ್ನು ವಶಕ್ಕೆ ತೆಗೆದು ಕೊಂಡಿದ್ದರು. ಇದು ಜಿಲ್ಲೆಯಲ್ಲಿ ಪ್ರಕರಣವೊಂದರಲ್ಲಿ ವಶಪಡಿಸಿಕೊಳ್ಳಲಾದ ದೊಡ್ಡ ಮೊತ್ತದ ಮಾದಕ ವಸ್ತುವಾಗಿತ್ತು. ಇದ​ಲ್ಲದೆ, ಜನನಿಬಿಡ ವಸತಿ ಪ್ರದೇಶವೊಂದರ ಮನೆಯಲ್ಲಿ ಸಂಗ್ರ​ಹಿ​ಸಿದ್ದ 20 ಕೆ.ಜಿ.ಗೂ ಹೆಚ್ಚು ಗಾಂಜಾವನ್ನು ಪೊಲೀ​ಸರು ಅಮಾ​ನ​ತು ಪಡಿ​ಸಿ​ಕೊಂಡಿ​ದ್ದ​ರು. ಹೀಗೆ ಗಾಂಜಾ ಮಾರಾಟಗಾರರ ಚಟುವಟಿಕೆಗಳ ಮೇಲೆ ಪೊಲೀ​ಸರು ನಿಗಾ ವಹಿಸಿದ್ದು, ನಿರಂತರವಾಗಿ ಶೋಧ ಕಾರ್ಯಗಳು ನಡೆದಿವೆ.

ಎಲ್ಲೆಲ್ಲಿ ಬೆಳೆ ಮತ್ತು ಮಾರಾಟ:

ಕಳೆದೊಂದು ವರ್ಷದಿಂದ ಗಾಂಜಾ ಮಾರಾ​ಟಕ್ಕೆ ಕಡಿವಾಣ ಬಿದ್ದಿತ್ತು. ಆದರೆ, ಲಾಕ್‌ಡೌನ್‌ ತೆರವಾಗುತ್ತಿದ್ದಂತೆ ಮತ್ತೆ ದಂಧೆ ಕೂಡ ಚುರುಕಾಗ ತೊಡಗಿದೆ. ಇನ್ನು ಜಿಲ್ಲೆ​ಯಲ್ಲಿ ಗಾಂಜಾ ಕೇವಲ ಮಾರಾ​ಟಕ್ಕೆ ಸೀಮಿ​ತ​ವಾ​ಗಿಲ್ಲ. ಕೆಲವು ಪ್ರದೇ​ಶ​ಗಳಲ್ಲಿ ಹಣ​ದಾ​ಸೆಗೆ ಬೆಳೆ​ಗಳ ನಡುವೆ ಈ ಮಾದಕ ಪದಾ​ರ್ಥ​ವನ್ನು ಬೆಳೆ​ಯ​ಲಾ​ಗು​ತ್ತಿದೆ. ಅಂತಹ ಹಲವು ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಬಿಡದಿ ಪೊಲೀಸ್‌ ಠಾಣೆ ವ್ಯಾಪ್ತಿಯ ಬೆತ್ತನಗೆರೆ ಗ್ರಾಮದ ಜಮೀನಿನಲ್ಲಿ ತೊಗರಿ ಹಾಗೂ ಮೆಣಸಿನಕಾಯಿ ಮಧ್ಯೆ ಬೆಳೆಯಲಾಗಿದ್ದ 40 ಸಾವಿರ ಮೌಲ್ಯದ 10 ಕೆ.ಜಿ. ಉತ್ಪನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಸಂಬರಗಿ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ, ಅವರನ್ನು ಸುಮ್ಮನೆ ಬಿಡಲ್ಲ: ಸಂಜನಾ ...

ರೈಲು ನಿಲ್ದಾಣ, ಪ್ರಮುಖ ವೃತ್ತ​ಗಳು ಸೇರಿದಂತೆ ಜನನಿಬಿಡ ಪ್ರದೇಶಗಳು ಹಾಗೂ ಕೆಲವು ಬಡಾವಣೆಗಳಲ್ಲಿ ಚಿಲ್ಲರೆ ರೂಪದಲ್ಲಿ ಗಾಂಜಾ ಮಾರಾಟವಾಗುತ್ತಿದೆ. 50 ಗ್ರಾಂನ ಸಣ್ಣ ಪ್ಯಾಕೆಟ್‌ ಹಾಗೂ ಬೆಂಕಿ ಪೊಟ್ಟ​ಣ​ಗ​ಳಲ್ಲಿ ಚಿಲ್ಲರೆ ಲೆಕ್ಕದಲ್ಲಿ ಕೆಲವು ಅಂಗಡಿಗಳಲ್ಲಿಯೂ ಮಾರಾಟ ನಡೆಯುತ್ತಿವೆ ಎಂಬ ದೂರು​ಗಳು ಕೇಳಿ ಬಂದಿವೆ. ಗಾಂಜಾ ಮಾರಾಟಕ್ಕೆ ದಂಧೆಕೋರರು ಅನೇಕ ಮಾರ್ಗ​ಗ​ಳನ್ನು ಕಂಡು​ಕೊಂಡಿ​ದ್ದಾರೆ. ಅಲ್ಲದೆ, ಬೇರೆ ಬೇರೆ ಜಾಲಗಳು ಸಕ್ರಿಯವಾಗಿವೆ. ಆಂಧ್ರಪ್ರದೇಶ, ತಮಿಳುನಾಡು ಮೂಲದಿಂದಲೂ ಜಿಲ್ಲೆ​ಯೊ​ಳ​ಗೆ ಗಾಂಜಾ ಬರುತ್ತಿದೆ.

ಗಾಂಜಾ ಮತ್ತಿನ ಗಮ್ಮತ್ತು ಜೋರಾಗಿ ಸದ್ದು ಮಾಡು​ತ್ತಿ​ರು​ವು​ದ​ರಿಂದ ಗಡಿ ಭಾಗ​ಗ​ಳಲ್ಲಿ ಪೊಲೀಸ್‌ ಕಣ್ಗಾ​ವಲು ಹಾಕಿ​ದ್ದು, ​ಅ​ನು​ಮಾ​ನ​ಸ್ಪದ ವ್ಯಕ್ತಿ​ಗಳು ಹಾಗೂ ವಾಹ​ನ​ಗ​ಳನ್ನು ತಪಾ​ಸಣೆ ನಡೆ​ಸುವ ಕಾರ್ಯ ನಡೆ​ಯು​ತ್ತಿದೆ. ಬೆಂಗಳೂರು ಮಾರ್ಗವಾಗಿ ಒಂದು ಜಾಲ ಕಾರ್ಯ ನಿರ್ವಹಿಸಿದರೆ, ಕೋಡಿಹಳ್ಳಿ ಗಡಿಭಾಗದಲ್ಲಿ ಮತ್ತೊಂದಿಷ್ಟುಆರೋಪಿಗಳು ಸಕ್ರಿಯರಾಗಿದ್ದಾರೆ. ಅದೆ​ಲ್ಲ​ದಕ್ಕೂ ಕಡಿ​ವಾಣ ಹಾಕುವ ಕಾರ್ಯ ನಡೆ​ದಿದೆ ಎನ್ನು​ತ್ತಾರೆ ಪೊಲೀಸ್‌ ಅಧಿ​ಕಾ​ರಿ​ಗ​ಳು.

Follow Us:
Download App:
  • android
  • ios